ವಿದ್ಯುತ್ ಮಾರ್ಗ ಅನುಷ್ಠಾನದಲ್ಲಿ ಭಾರತ ಸಾಧನೆ ಗಣನೀಯ: ಅಜರುದ್ದೀನ್
ವಿದ್ಯುತ್ ಪ್ರಸರಣ ಮಾರ್ಗದ ವಿಶೇಷ ಗ್ರಿಡ್ ಸ್ಥಾಪಿಸಿ ಭಾರತ ದೇಶವು ವಿಶ್ವದಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ಗ್ರಾಮ ವಿದ್ಯುದ್ದೀಕರಣ ನಿಯಮಿತದ ವ್ಯವಸ್ಥಾಪಕ ಅಜರುದ್ದೀನ್ ಹೇಳಿದರು.
ಗೋಣಿಕೊಪ್ಪ (ಜು.26) : ವಿದ್ಯುತ್ ಪ್ರಸರಣ ಮಾರ್ಗದ ವಿಶೇಷ ಗ್ರಿಡ್ ಸ್ಥಾಪಿಸಿ ಭಾರತ ದೇಶವು ವಿಶ್ವದಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ಗ್ರಾಮ ವಿದ್ಯುದ್ದೀಕರಣ ನಿಯಮಿತದ ವ್ಯವಸ್ಥಾಪಕ ಅಜರುದ್ದೀನ್ ಹೇಳಿದರು. ಸೆಸ್‌್ಕ ವತಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಉಜ್ವಲ ಭಾರತ ಉಜ್ವಲ ಭವಿಷ್ಯ ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ದೇಶದಲ್ಲಿ ಅನುಷ್ಠಾನಗೊಂಡಿರುವ ವಿದ್ಯುತ್ ಪ್ರಸರಣ ವ್ಯವಸ್ಥೆ ಬಗ್ಗೆ ಬೆಳಕು ಚೆಲ್ಲಿದರು.
1.6 ಲಕ್ಷ ಕಿ.ಮೀ. ಗಳಷ್ಟುಪ್ರಸರಣ ಮಾರ್ಗವನ್ನು ದೇಶದಲ್ಲಿ ಅನುಷ್ಠಾನಗೊಳಿಸಿದ ಸಾಧನೆ ಮಾಡಿದೆ. ಒಂದೇ ಗ್ರಿಡ್ ಮೂಲಕ ಒಂದೇ ಫ್ರೀಕ್ವೆನ್ಸಿಯಲ್ಲಿ ನೀಡುವ ಸೇವೆ ವಿಶ್ವಕ್ಕೆ ಮಾದರಿಯಾಗಿದೆ. ಗ್ರಾಮ ಮಟ್ಟದಲ್ಲಿ ವಿದ್ಯುತ್ ಮಾರ್ಗದ ಸೇವೆಯು ಶೇ.100ರಷ್ಟುಸಾಧನೆ ಮಾಡಿದೆ. ಹೀಗೆ ಪ್ರತೀ ಮನೆಗೆ ವಿದ್ಯುದ್ದೀಕರಣ ಸೇವೆ ಕೂಡ ಶೇ.100 ಸಾಧನೆಯಲ್ಲಿದೆ. ಪ್ರಸರಣ ವ್ಯವಸ್ಥೆಯಲ್ಲಿ 169 ಗಿಗಾ ವ್ಯಾಟ್ (ಜಿಡಬ್ಲ್ಯೂ) ಸಾಮರ್ಥ್ಯವನ್ನು ಅನುಷ್ಠಾನ ಪಡಿಸಿಕೊಂಡು ಗ್ರಾಮೀಣ ಮಟ್ಟಕ್ಕೂ ವಿದ್ಯುತ್ ಪ್ರಸರಣದಲ್ಲಿ ಯಶಸ್ಸು ಸಾಧಿಸಿದೆ. ಇದರಿಂದ ಗ್ರಾಮೀಣ ಮಟ್ಟಕ್ಕೆ ಮೀಸಲಿದ್ದ 12 ಗಂಟೆಯ ವಿದ್ಯುತ್ ಪ್ರಸರಣದ ಸೇವೆಯು 22.5 ಗಂಟೆಗೆ ವಿಸ್ತರಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ದ್ಯಾಮವ್ವನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಕರೆಂಟ್ ಬಿಲ್ ಶಾಕ್!
ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2024ರ ವೇಳೆಗೆ ದೇಶದ ಪ್ರತೀ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಕೇಂದ್ರ ಸರ್ಕಾರ ರೂಪಿಸಿಕೊಂಡಿದ್ದು, ಯಶಸ್ಸಿನೆಡೆಗೆ ದಾಪುಗಾಲು ಇಡುತ್ತಿದೆ. ಮನೆ ನಿರ್ಮಾಣ, ವಿದ್ಯುತ್ ಮತ್ತು ಕುಡಿಯುವ ನೀರು ಸೌಕರ್ಯ ಕೇಂದ್ರ ಸರ್ಕಾರದ ಮುಖ್ಯ ಗುರಿಯಾಗಿದೆ ಎಂದರು.
ಶಾಸಕ ಕೆ.ಜಿ. ಬೋಪಯ್ಯ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕದ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಕೇಂದ್ರ ಸರ್ಕಾರ ವಿದ್ಯುತ್ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದೆ. ಕಲ್ಲಿದ್ದಲು ಮೂಲಕ ಉತ್ಪಾದನೆಯಾಗುತ್ತಿದ್ದ ವಿದ್ಯುತನ್ನು ಜಲ ವಿದ್ಯುತ್, ಸೋಲಾರ್ ಅನುಷ್ಠಾನಕ್ಕೆ ಪ್ರೋತ್ಸಾಹ ನೀಡುತ್ತಿದೆ. ಇದರಿಂದ ಜನರಿಗೂ ಲಾಭವಾಗುವಂತೆ ಮಾಡಲಾಗುತ್ತಿದೆ. ಮನೆ ಮನೆಗೆ ವಿವಿಧ ಯೋಜನೆ ಮೂಲಕ ವಿದ್ಯುತ್ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದರು.
ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯ್ತಿಗಳಿಗೆ Hescom ಶಾಕ್, ಕತ್ತಲಲ್ಲಿ ಜನ
ಜಿಲ್ಲೆಯಲ್ಲಿ ಕೂಡ ಜಲವಿದ್ಯುತ್ ಉತ್ಪಾದನೆಗೆ ಅವಕಾಶವಿದ್ದು, ಕಸ್ತೂರಿ ರಂಗನ್ ವರದಿಯಲ್ಲಿ ಆಕ್ಷೇಪ ಕೂಡ ವ್ಯಕ್ತವಾಗಿದೆ. ರಾಜ್ಯದಲ್ಲಿ ಕೊಡಗು ಜಿಲ್ಲೆ ವಿದ್ಯುತ್ ಬಿಲ್ ಪಾವತಿಯಲ್ಲಿ ಮೊದಲ ಸ್ಥಾನದಲ್ಲಿರುವುರದಿಂದ ವಿದ್ಯುತ್ ಕೊರತೆ ಕಾಡದಂತೆ ಕ್ರಮಕೈಗೊಳ್ಳಬೇಕಿದೆ. ಕಾಫಿ ಬೆಳೆಗೆ ಸಮರ್ಪಕ ವಿದ್ಯುತ್ ಸೌಲಭ್ಯ ಕಲ್ಪಿಸುವ ಮೂಲಕ ಬೆಳೆಗಾರರ ಆರ್ಥಿಕ ಮಟ್ಟಸುಧಾರಿಸಲು ಇಲಾಖೆ ಮತ್ತಷ್ಟುಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭ ಮನೆಗಳ ವಿದ್ಯುದ್ದೀಕರಣ, ಜಾಗತಿಕ ಅವಕಾಶಗಳು, ಗ್ರಾಮ ವಿದ್ಯುದ್ದೀಕರಣ, ವಿತರಣ ಜಾಲ ಬಲಪಡಿಸುವುದು, ಬೆಳಕು ಕಾರ್ಯಕ್ರಮ, ವಿದ್ಯುತ್ ಪರಿವರ್ತಕಗಳ ನಿರ್ವಹನಾ ಅಭಿಯಾನ, ಉತ್ಪಾದನಾ ಸಾಮರ್ಥ್ಯ ವೃದ್ಧಿಸುವುದು, ಒಂದು ರಾಷ್ಟ್ರ ಒಂದು ಜಾಲ, ನವೀಕರಿಸಬಹುದಾದ ಇಂಧನ ಉತ್ಪಾದನೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ನಾಟಕ ಪ್ರದರ್ಶನ ನಡೆಯಿತು.
ಚಾಮರಾಜನಗರ-ಕೊಡಗು ಸೆಸ್‌್ಕ ವೃತ್ತದ ಅಧೀಕ್ಷಕ ಎಂಜಿನಿಯರ್ ಎಲ್. ಸೋಮರಾಜು, ಮೈಸೂರು ವಿಭಾಗದ ಮುಖ್ಯ ಎಂಜನಿಯರ್ ಉಮೇಶ್‌ಚಂದ್ರ, ಕೊಡಗು ಕಾರ್ಯಪಾಲಕರ ಎಂಜಿನಿಯರ್ ಅನಿತಾ ಬಾಯಿ, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಚೈತ್ರ ಬಿ. ಚೇತನ್ ಇದ್ದರು.