Asianet Suvarna News Asianet Suvarna News

ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಬುದ್ಧಿವಂತರು ಭಾರತೀಯರು: ಸ್ವಾಮಿ ನಿರ್ಭಯಾನಂದಜಿ

ಭಾರತೀಯರ ರಕ್ತದಲ್ಲಿ ಛಲಗಾರಿಕೆ ಅಡಗಿದ್ದು, ಏನಾದರೂ ಸಾಧಿಸುವ ಶಕ್ತಿ ಪ್ರತಿಯೊಬ್ಬ ಭಾರತೀಯರಲ್ಲಿದೆ. ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಬುದ್ಧಿವಂತರು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಎಂದು ಗದಗ- ವಿಜಯಪುರದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದಜಿ ಹೇಳಿದರು.

Indians are the greatest intellectuals in the world says nirbhayandaji at hospet rav
Author
First Published Mar 4, 2023, 2:05 PM IST

ಹೊಸಪೇಟೆ (ಮಾ.4) : ಭಾರತೀಯರ ರಕ್ತದಲ್ಲಿ ಛಲಗಾರಿಕೆ ಅಡಗಿದ್ದು, ಏನಾದರೂ ಸಾಧಿಸುವ ಶಕ್ತಿ ಪ್ರತಿಯೊಬ್ಬ ಭಾರತೀಯರಲ್ಲಿದೆ ಎಂದು ಗದಗ- ವಿಜಯಪುರದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದಜಿ ಹೇಳಿದರು.

ನಗರದ ಪಿಡಿಐಟಿ ಕಾಲೇಜಿ(PDIT Collage)ನಲ್ಲಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ(Personality development) ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ವ್ಯಕ್ತಿತ್ವ ವಿಕಸನದ ಕುರಿತು ಉಪನ್ಯಾಸ ನೀಡಿದ ಅವರು, ಭಾರತೀಯರು ಏನನ್ನಾದರೂ ಸಾಧಿಸುವ ಛಲವಂತರು. ಛಲ ಎಂಬುದು ಅವರ ರಕ್ತದಲ್ಲೇ ಅಡಗಿದೆ. ಇತಿಹಾಸದಲ್ಲಿ ಯಾವುದೇ ಭಾರತೀಯ ಸಾಧಕರ ಹಿನ್ನೋಟವನ್ನು ನೋಡಿದರೆ ಅವರು ಖಂಡಿತವಾಗಿಯೂ ವಿವೇಕಾನಂದರ ತತ್ವ- ಸಿದ್ಧಾಂತಗಳನ್ನು ಪಾಲನೆ ಮಾಡುವಂತರಾಗಿದ್ದಾರೆ ಎಂದರು.

ದಿನಕ್ಕೆ ಸರಾಸರಿ 7 ಗಂಟೆ ಸೋಶಿಯಲ್‌ ಮೀಡಿಯಾ ಬಳಕೆ ಮಾಡ್ತಾರೆ ಭಾರತೀಯರು!

ಭಾರತೀಯರು ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಬುದ್ಧಿವಂತರು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಮೂಲಕ ಭಾರತದ ಸಾಮರ್ಥ್ಯವನ್ನು ಸಾರುತ್ತಿದ್ದಾರೆ ಎಂದು ಬಣ್ಣಿಸಿದರು.

ಹಿಂದು ಧರ್ಮ ಕೇವಲ ಸನಾತನ ಧರ್ಮ ಮಾತ್ರವಲ್ಲ, ಅದೊಂದು ವಿಜ್ಞಾನ. ಮಾನವರೆಲ್ಲರೂ ಭಾರತೀಯ ಸಂಸ್ಕೃತಿ ಪಾಲಿಸುತ್ತಾರೆ ಎಂದ ಶ್ರೀಗಳು ವಿದ್ಯಾರ್ಥಿಗಳು ವೇದ, ಉಪನಿಷತ್ತು ಮತ್ತು ಭಗವದ್ಗೀತೆ ಅರಿಯಬೇಕು. ಕೀಳರಿಮೆ ತೊರೆದು ವಿವೇಕಾನಂದರಂತೆ ಸಾಧನೆಗೈಯಬೇಕು ಎಂದರು.

 

ಅರಣ್ಯ ಸಿಬ್ಬಂದಿ ಅಸಹಾಯಕತೆ:

ಪ್ರತಿವರ್ಷ ಬೇಸಗೆ ಆರಂಭಗೊಂಡರೆ ಕಪ್ಪತ್ತಗಿರಿಗೆ ಬೆಂಕಿಯದ್ದೇ ಆತಂಕ. ಆಕಸ್ಮಿಕ ಬೆಂಕಿಗೆ ಸಸ್ಯಸಂಪತ್ತು ಸುಟ್ಟು ಕರಕಲಾಗುತ್ತಿದೆ. ಬೇಸರದ ಸಂಗತಿಯೆಂದರೆ ಕೆಲವೊಮ್ಮೆ ದುಷ್ಕರ್ಮಿಗಳು ಬೆಂಕಿ ಹಚ್ಚುತ್ತಾರೆ. ಬೆಟ್ಟದ ಪ್ರದೇಶ ಉತ್ತರ ಭಾಗದಲ್ಲಿ ಬೆಂಕಿ ಆವರಿಸಿದಾಗ ಕಲ್ಲು-ಮುಳ್ಳುಗಳಲ್ಲಿ ಹೋಗಿ ಬೆಂಕಿ ನಂದಿಸುವುದು ಕಷ್ಟಕರ. ಇಂಥ ಅವಘಡಗಳು ಸಂಭವಿಸಿದಾಗ ಬೆಂಕಿ ನಂದಿಸಲು ಬೇಕಾದ ಹೊಸ ಪರಿಕರಗಳು, ವಾಹನ ವ್ಯವಸ್ಥೆ ಇಲ್ಲದೆ ಅರಣ್ಯ ಸಿಬ್ಬಂದಿ ಅಸಹಾಯಕರಾಗಿ ನೋಡುವಂತಾಗುತ್ತದೆ.

ಮುಂಡರಗಿ ವಲಯದ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಬೆಂಕಿ ನಂದಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ದಿನಗೂಲಿ ನೌಕರರು ಸೇರಿ ಪ್ರಯತ್ನಿಸಿದ್ದಾರೆ. ಬೆಟ್ಟದಲ್ಲಿ ಹುಲ್ಲು ಹುಲುಸಾಗಿ ಬೆಳೆದಿರುವುದರಿಂದ ಬೆಂಕಿ ವೇಗವಾಗಿ ಹಬ್ಬುತ್ತದೆ.

ಮಕ್ಕಳಿಗ ಗೆಲುವಿನ ಬಗ್ಗೆಯಲ್ಲ, Failure ಆದಾಗ ಮೇಲೇಳುವುದು ಹೇಳಿ ಕೊಡಿ!

ಕಾಲೇಜಿನ ಪ್ರಾಂಶುಪಾಲ ಡಾ. ಯು.ಎಂ. ರೋಹಿತ್‌ ಮಾತನಾಡಿದರು. ಶ್ರೀ ಸ್ವಾಮಿ ಬುದ್ಧಿ ಯೋಗಾನಂದಜಿ ಮತ್ತು ಶ್ರೀ ಸ್ವಾಮಿ ಸುಮೇಧಾನಂದಜಿ ಮಹಾರಾಜ್‌ ಭಾಗವಹಿಸಿದ್ದರು. ಪ್ರೊ. ಬಸವರಾಜ ಆರ್‌. ಸ್ವಾಗತಿಸಿದರು. ಉಪಪ್ರಾಂಶುಪಾಲ ಪ್ರೊ. ಪಾರ್ವತಿ ಕಡ್ಲಿ, ಸಿವಿಲ್‌ ವಿಭಾಗದ ಮುಖ್ಯಸ್ಥ ಡಾ. ಪಿ. ಶಿವಕೇಶವ ಕುಮಾರ್‌ ಮತ್ತು ಬಸವರಾಜ್‌ ಹೊಸಮನಿ ಇದ್ದರು. ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow Us:
Download App:
  • android
  • ios