ಗದಗ: ಭಾರತೀಯ ಚಿಂತನೆಗಳು ವಿಶ್ವಕ್ಕೆ ಮಾದ​ರಿ- ಭಯ್ಯಾಜಿ ಜೋಶಿ

ಜಗತ್ತೇ ಒಂದು ಬ್ರಹ್ಮಾಂಡ, ಏಕತ್ವ ಭಾವ ಪ್ರತಿಯೊಬ್ಬರಲ್ಲೂ ಮುಖ್ಯವಾಗಬೇಕು. ಪ್ರತಿಯೊಂದು ಸಂಸ್ಕೃತಿಯು ಒಂದೊಂದು ಸಮುದಾಯದ ಪ್ರತೀಕವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಣಿ ಸದಸ್ಯ ಭಯ್ಯಾಜಿ ಜೋಶಿ ಹೇಳಿದರು.

Indian thoughts are a model for the world says bhaiyyaji Joshi at gadag rav

ಗದಗ (ಮಾ.3) : ಜಗತ್ತೇ ಒಂದು ಬ್ರಹ್ಮಾಂಡ, ಏಕತ್ವ ಭಾವ ಪ್ರತಿಯೊಬ್ಬರಲ್ಲೂ ಮುಖ್ಯವಾಗಬೇಕು. ಪ್ರತಿಯೊಂದು ಸಂಸ್ಕೃತಿಯು ಒಂದೊಂದು ಸಮುದಾಯದ ಪ್ರತೀಕವಾಗಿದೆ. ಎಲ್ಲ ಸಂಸ್ಕೃತಿಯನ್ನು ಗೌರವಿಸಬೇಕು. ಏಕತೆ ಜೀವನದ ಮಂತ್ರವಾಗಲಿ, ಸರ್ವರ ಏಳ್ಗೆಯೇ ಪ್ರಕೃತಿಯ ಸಹಜ ಧರ್ಮವಾಗಿದೆ. ಭಾರತೀಯ ಚಿಂತನೆಗಳು ಶಾಶ್ವತವಾದವುಗಳು. ಇವು ಇಡೀ ವಿಶ್ವಕ್ಕೆ ಮಾದರಿಯಾಗಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಣಿ ಸದಸ್ಯ ಭಯ್ಯಾಜಿ ಜೋಶಿ(Bhaiyyaji Joshi) ಹೇಳಿದರು.

ನಗ​ರ​ದ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌(Rural Development and Panchayat Raj) ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನ(Skill Development House)ದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಅಂತಾರಾಷ್ಟ್ರೀಯ ಸಮ್ಮೇಳನ ಸ್ವರಾಜ್‌-ಸ್ವಯಂ ಆಡಳಿತದ ಸ್ಥಳೀಯ ಮಾದರಿಗಳು ಎರ​ಡನೇ ದಿನ​ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜೆಪಿ ವಿರೋಧಿಸಿದ ಮಾತ್ರಕ್ಕೆ ಹಿಂದೂ ವಿರೋಧಿಗಳಲ್ಲ: RSS ನಾಯಕ ಜೋಶಿ!

ಸೃಷ್ಟಿಯಲ್ಲಿ ಸಮತೋಲನ ಹಾಗೂ ಸಹಬಾಳ್ವೆ ಮುಖ್ಯ. ಮನುಷ್ಯನ ಅಜ್ಞಾನ ಹಾಗೂ ಅಹಂ ಪ್ರಕೃತಿಯಲ್ಲಿ ಉಂಟಾಗುತ್ತಿರುವ ಅಸಮತೋಲನಕ್ಕೆ ಕಾರಣವಾಗಿದೆ. ವಿಜ್ಞಾನ ಎಷ್ಟೆಮುಂದುವರೆದಿದ್ದರೂ ಈ ಭೂಮಂಡಲದಲ್ಲಿ ನಡೆಯುವ ನಿಗೂಢತೆಗಳಿಗೆ ಕಾರಣವನ್ನು ಶೋಧಿಸಲು ಸಾಧ್ಯವಾಗಿಲ್ಲ. ಪಂಚ ಮಹಾಭೂತಗಳ ಶಕ್ತಿ ಅಪರಿಮಿತ. ಭೂಮಂಡಲದ ವೈಶಿಷ್ಟ್ಯ ಎಂದರೆ, ಪರಿಶುದ್ಧವಾದ ಗಾಳಿ, ನೀರು, ಪ್ರಕರವಾದ ಬೆಳಕು, ಫಲವತ್ತಾದ ಮಣ್ಣನ್ನು ಹೊಂದಿದೆ. ಇಲ್ಲಿ ಮಾತ್ರ ಸಕಲ ಜೀವಿಗಳು ಅಸ್ತಿತ್ವದಲ್ಲಿವೆ, ಬೇರೆ ಯಾವ ಗ್ರಹಗಳಲ್ಲೂ ಜೀವಿಗಳು ಅಸ್ತಿತ್ವವಿರುವ ನಿದರ್ಶನಗಳಿಲ್ಲ ಈ ಕಾರಣಕ್ಕಾಗಿ ಭೂಮಿಯ ನೈರ್ಮಲ್ಯವನ್ನು ಕಾಯ್ದುಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರದ್ದು ಎಂದು ತಿಳಿ​ಸಿ​ದರು.

ಗುರು​ವಾರ ಪಂಚಮಹಾಭೂತಗಳ ಕುರಿತಾದ ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸುವ ಮೂಲಕ ಪ್ರಾರಂಭವಾಯಿತು.

ನಂತರ ಸಮ್ಮೇಳನದ ಮುಖ್ಯಅಂಗವಾದ ವಿಷಯ ಮಂಡನೆಯು ಪಂಚಮಹಾಭೂತ, ಅಭ್ಯುದಯ, ಧರ್ಮ, ಸ್ವರಾಜ್ಯ, ಸ್ವಾಸ್ಥ್ಯ ಎಂಬ 5 ಪ್ರಮುಖ ವಿಷಯಗಳ ಮಂಡ​ನೆ ನಡೆಯಿತು. ತದನಂತರ ಕೇಸ್‌-ಸ್ಟಡೀಸ್‌ ಮತ್ತು ಯಶೋಗಾಥೆ ಎಂಬ ಅಧಿವೇಶನ ಜರುಗಿತು.

ನಿಮಗೂ ಸೂಪರ್ ಪವರ್ ಇದೆ, ಅದನ್ನು ಹೇಗೆ ಬಳಸಬೇಕೆಂದು ಕಲಿಯಿರಿ..

ಈ ವೇಳೆ ತಮಿಳುನಾಡಿನ ಅಮರ ಸೇವಾ ಸಂಘದ ಅಧ್ಯ​ಕ್ಷ ಪದ್ಮ​ಶ್ರೀ ಪುರ​ಸ್ಕೃ​ತ ರಾಮಕೃಷ್ಣನ್‌, ಪದ್ಮಶ್ರೀ ಪುರ​ಸ್ಕೃ​ತ ಅಬ್ದುಲ್‌ ನಡಕಟ್ಟಿನ್‌, ಬೆಂಗ​ಳೂ​ರಿನ ದ ದಲೈ ಲಾಮಾ ಇನಸ್ಟಿಟ್ಯೂಟ್‌ ಫಾರ್‌ ಹೈಯರ್‌ ಎಜುಕೇಷನ್‌ನ ಶಂಕರ ರಾಮನ್‌, ಕುಂಗಾ ಡೊಡಿಯೋನ್‌ ಅವರು ತಮ್ಮ ಯಶೋಗಾಥೆಗಳನ್ನು ಹಂಚಿಕೊಂಡರು. ಜೆ. ನಂದಕುಮಾರ, ರಘು ನಂದನ, ವಿವಿಯ ಕುಲಪತಿ ಪೊ›. ವಿಷ್ಣುಕಾಂತ ಚಟಪಲ್ಲಿ ಸೇರಿ​ದಂತೆ ಇತ​ರ​ರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios