Koppal: ಗುಡುಗು-ಸಿಡಿಲುಗಳ ಆರ್ಭಟ: ತೊಟ್ಟಿಗೆ ಬಿದ್ದಿದ್ದ ಎಮ್ಮೆಗಳ ರಕ್ಷಣೆ!
ಯಾರೇ ಕೂಗಾಡಲಿ, ಊರೇ ಹೋರಾಡಲಿ, ನಿನ್ನ ನೆಮ್ಮದಿಗೆ ಭಂಗವಿಲ್ಲ ಎನ್ನುವ ಹಾಡಿದೆ. ಆದರೆ ಇಲ್ಲೊಂದು ಊರಲ್ಲಿ ಎಮ್ಮೆಯ ನೆಮ್ಮದಿಗೆ ಭಂಗ ಉಂಟಾದ ಘಟನೆಯೊಂದು ನಡೆದಿದೆ. ಅಷ್ಟಕ್ಕೂ ಎಮ್ಮೆಗಳಿಗೆ ಭಂಗ ಉಂಟಾದ ಘಟನೆಯಾದರೂ ಏನು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.
ವರದಿ: ದೊಡ್ಡೇಶ್ ಯಲಿಗಾರ್, ಏಶಿಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ
ಕೊಪ್ಪಳ (ಮೇ.20): ಯಾರೇ ಕೂಗಾಡಲಿ, ಊರೇ ಹೋರಾಡಲಿ, ನಿನ್ನ ನೆಮ್ಮದಿಗೆ ಭಂಗವಿಲ್ಲ ಎನ್ನುವ ಹಾಡಿದೆ. ಆದರೆ ಇಲ್ಲೊಂದು ಊರಲ್ಲಿ ಎಮ್ಮೆಯ (Buffalo) ನೆಮ್ಮದಿಗೆ ಭಂಗ ಉಂಟಾದ ಘಟನೆಯೊಂದು ನಡೆದಿದೆ. ಅಷ್ಟಕ್ಕೂ ಎಮ್ಮೆಗಳಿಗೆ ಭಂಗ ಉಂಟಾದ ಘಟನೆಯಾದರೂ ಏನು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.
ಎಮ್ಮೆಗಳು ತೊಟ್ಟಿಗೆ ಬಿದ್ದದ್ದು ಎಲ್ಲಿ: ಕೊಪ್ಪಳ ಜಿಲ್ಲೆಯಲ್ಲಿ (Koppal District) ಕಳೆದೆರಡು ದಿನಗಳಿಂದ ಮಳೆ (Rain) ನಿರಂತರವಾಗಿ ಸುರಿಯುತ್ತಿದೆ. ಇದರಿಂದಾಗಿರುವ ಅವಾಂತರಗಳು ಒಂದೆರಡಲ್ಲ. ಅದೇ ರೀತಿಯಾಗಿ ಮಳೆಯಿಂದಾಗಿ ಎಮ್ಮೆಗಳು ತೊಟ್ಟಿಗೆ ಬಿದ್ದ ಘಟನೆ ನಡೆದಿದೆ. ಅಷ್ಟಕ್ಕೂ ಎಮ್ಮೆಗಳು ತೊಟ್ಟಿಯಲ್ಲಿ ಅಂತ ನೋಡೋದಾದ್ರೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪೂರು ಗ್ರಾಮದ ಹೊರವಲಯದಲ್ಲಿ.
Koppal ಶಾಲೆ ಆರಂಭದ ದಿನ ಡೊಳ್ಳು ಬಾರಿಸಿ ಮಕ್ಕಳನ್ನು ಸ್ವಾಗತಿಸಿದ ಬಿಇಓ
ಎಮ್ಮೆಗಳು ತೋಟ್ಟಿಯಲ್ಲಿ ಬಿದ್ದದ್ದು ಹೇಗೆ?: ಕುಕನೂರು ತಾಲೂಕಿನ ಆಡೂರು ಗ್ರಾಮದ ವೀರಪ್ಪ ಮುತ್ತಾಳೆ. ಮೂರು ಎಮ್ಮೆಗಳು ಮೇಯಲು ಹೋಗಿದ್ದವು. ಈ ವೇಳೆ ಮಂಗಳವಾರ ಸಂಜೆ ಗುಡುಗು, ಸಿಡಿಲುಗಳ ಆರ್ಭಟಕ್ಕೆ ಮೇಯಲು ಹೋಗಿದ್ದ ಎಮ್ಮೆಗಳು ಹೆದರಿಕೊಂಡು ಯರ್ರಾ ಬಿರ್ರಿ ಓಡಾಡಲು ಆರಂಭ ಮಾಡಿದವು. ಈ ವೇಳೆಯಲ್ಲಿ ಜಮೀನೊಂದರಲ್ಲಿ ಇದ್ದ ಬೃಹತ್ ನೀರಿನ ತೊಟ್ಟಿಗೆ ಹೋಗಿ ಎಮ್ಮೆಗಳು ಬಿದ್ದಿವೆ.
ಎಮ್ಮೆಗಳ ರಕ್ಷಣಾ ಕಾರ್ಯ: ಇನ್ನು ಎಮ್ಮೆಗಳು ನೀರಿನ ತೊಟ್ಟಿಯಲ್ಲಿ ಬಿದ್ದಿರುವ ವಿಷಯ ತಿಳಿಯುತ್ತಲೆ ಜನರು ಗುಂಪಾಗಿ ತೊಟ್ಟಿಯ ಸುತ್ತಲೂ ಸೇರಿದ್ದಾರೆ. ಈ ವೇಳೆ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಯೂ ಸಹ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ, ಸ್ಥಳೀಯರೂ ಹಾಗೂ ಅಗ್ನಿಶಾಮಕ ದಳದವರ ಜಂಟಿ ಕಾರ್ಯಾಚರಣೆಯಿಂದ ನೀರಿನ ತೊಟ್ಟಿಯಲ್ಲಿ ಬಿದ್ದಿದ್ದ ಎಮ್ಮೆಗಳನ್ನು ಮೇಲೆಕ್ಕೆತ್ತಿದ್ದಾರೆ.
Koppal ಮೊಬೈಲ್ ಟವರ್ ನಿರ್ಮಾಣಕ್ಕೆ ವಿರೋಧ
ಇನ್ನು ಎಮ್ಮೆಗಳನ್ನು ಮೇಲಕ್ಕೆತ್ತಿದ್ದರೂ ಸಹ ಒಂದು ಕರು ಮಾತ್ರ ಜೀವತೆತ್ತಿದೆ. ಒಟ್ಟಿನಲ್ಲಿ ನೆಮ್ಮದಿಯಿಂದ ಮೇಯಲು ಹೋಗಿ ಸರ್ ಎಮ್ಮೆಗಳು ತೊಟ್ಟಿಯಲ್ಲಿ ಬಿಳುವ ಮೂಲಕ ನೆಮ್ಮದಿಗೆ ಭಂಗವನ್ನುಂಟು ಮಾಡಿಕೊಂಡಿವೆ. ಇನ್ನಾದರೂ ಜಮೀನಿನ ಮಾಲೀಕರು ತೆರೆದ ತೊಟ್ಟಿಗಳನ್ನು ಮುಚ್ಚುವ ಮೂಲಕ ಮೂಕ ಪ್ರಾಣಿಗಳ ನೆಮ್ಮದಿಯನ್ನುಂಟು ಮಾಡಬೇಕಿದೆ.