ಬೆಂಗಳೂರು: ವಾಯುಪಡೆ ವಿಮಾನ ಪತನದ ಬೆನ್ನಲ್ಲೇ ಸೇನಾ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ
ಭಾರತೀಯ ಸೇನಾಗೆ ಸೇರಿದ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ. ಬೆಂಗಳೂರು ಗ್ರಾಮಾಂತ ಜಿಲ್ಲೆಯ ತಟ್ಟಗುಪ್ಪೆ ಬಳಿ ಲ್ಯಾಂಡಿಗ್ ಆಗಿದೆ.
ಬೆಂಗಳೂರು, [ಫೆ.05]: ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇನಾ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಟ್ಟಗುಪ್ಪೆ ಬಳಿ ನಡೆದಿದೆ.
ಬೆಂಗಳೂರು -ಕನಕಪುರ ರಸ್ತೆಯ ಕಗ್ಗಲೀಪುರ ಸಮೀಪದ ತಟ್ಟಗುಪ್ಪೆ ಬಳಿಯ ಕರಡಿಮನೆ ರಸ್ತೆ ಬಳಿ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ.
ಎಚ್ ಎ ಎಲ್ ನಿಂದ ಹೊರಟಿದ್ದ ಇಂಡಿಯನ್ ಆರ್ಮಿಗೆ ಸೇರಿದ ತರಬೇತಿ ಸೇನಾ ವಿಮಾನವಾಗಿದೆ. ಹೆಲಿಕ್ಯಾಪ್ಟರ್ ನಲ್ಲಿ ಫೈಲೆಟ್ ರಮೇಶ್ ಹಾಗೂ ಮತ್ತೋರ್ವರು ತರಬೇತಿ ಪಡೆಯುತಿದ್ದರು. ಈ ವೇಳೆ ಇಂಜಿನ್ ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು ಯಾವುದೇ ಅವಘಡ ಸಂಭವಿಸಿಲ್ಲ.
ಸ್ಥಳಕ್ಕೆ ಹೆಲಿಕ್ಯಾಪ್ಟರ್ ನ ಇಂಜಿನ್ ರಿಪೇರಿ ಮಾಡಲು ಮತ್ತೊಂದು ಹೆಲಿಕ್ಯಾಪ್ಟರ್ ಮೂಲಕ ಎಚ್ ಎ ಎಲ್ ನಿಂದ ಈಗಾಗಲೇ ತಾಂತ್ರಿಕ ತಜ್ಞರು ಆಗಮಿಸಿದ್ದು ಇಂಜಿನ್ ಸರಿಪಡಿಸುವ ಕಾರ್ಯ ನಡೆಸ್ತಿದ್ದಾರೆ. ಘಟನಾ ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಭೇಟಿ ನೀಡಿದ್ದಾರೆ.
ಮೊನ್ನೆ ಫೆಬ್ರವರಿ 1ರಂದು HALಗೆ ಸೇರಿದ್ದ ವಾಯುಪಡೆ ವಿಮಾನ ಪತನಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.