Asianet Suvarna News Asianet Suvarna News

Indian Market : ವಿದೇಶಿ ಉತ್ಪನ್ನಕ್ಕೆ ಭಾರತ ಮಾರುಕಟ್ಟೆಯಾಗಬಾರದು

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ದೇಶೀ ಉತ್ಪನ್ನಗಳ ಉತ್ಪಾದನೆ ಹೆಚ್ಚಳದ ಮೂಲಕ ಭಾರತ ವಿಶ್ವದ ಗಮನ ಸೆಳೆದಿದೆ. ಭಾರತಕ್ಕೆ ವಿದೇಶಗಳಿಂದ ಆಮದಾಗುವ ಎಲ್ಲಾ ರೀತಿಯ ಉತ್ಪನ್ನಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸಬೇಕು ಎಂಬುದು ಮೋದಿ ಅವರ ಆಶಯವಾಗಿದೆ ಎಂದು ಕೇಂದ್ರ ಭಾರೀ ಮತ್ತು ಇಂಧನ ಇಲಾಖೆ ರಾಜ್ಯ ಸಚಿವ ಕ್ರಿಶನ್‌ ಪಾಲ… ಗುರ್ಜಾಲ… ಹೇಳಿದ್ದಾರೆ.

India should not be a market for foreign products snr
Author
First Published Dec 17, 2022, 5:29 AM IST

  ಕುಣಿಗಲ್‌ (ಡಿ. 17):  ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ದೇಶೀ ಉತ್ಪನ್ನಗಳ ಉತ್ಪಾದನೆ ಹೆಚ್ಚಳದ ಮೂಲಕ ಭಾರತ ವಿಶ್ವದ ಗಮನ ಸೆಳೆದಿದೆ. ಭಾರತಕ್ಕೆ ವಿದೇಶಗಳಿಂದ ಆಮದಾಗುವ ಎಲ್ಲಾ ರೀತಿಯ ಉತ್ಪನ್ನಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸಬೇಕು ಎಂಬುದು ಮೋದಿ ಅವರ ಆಶಯವಾಗಿದೆ ಎಂದು ಕೇಂದ್ರ ಭಾರೀ ಮತ್ತು ಇಂಧನ ಇಲಾಖೆ ರಾಜ್ಯ ಸಚಿವ ಕ್ರಿಶನ್‌ ಪಾಲ್… ಗುರ್ಜಾಲ್… ಹೇಳಿದ್ದಾರೆ.

ಕುಣಿಗಲ್ನಲ್ಲಿ ಕೇಂದ್ರದ ಯೋಜನೆಗಳ ಫಲಾನುಭವಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುದ್ಧ ಟ್ಯಾಂಕರ್‌ (Tanker) , ಹೆಲಿಕಾಪ್ಟರ್‌,ಅತ್ಯಾಧುನಿಕ ರೈಫಲ್…ಗಳು ಸೇರಿದಂತೆ ಶೇ.70 ರಷ್ಟು ಮಿಲಿಟರಿ (Military)  ಸಂಬಂಧಿತ ಉಪಕರಣಗಳನ್ನು ಕಳೆದ ಎಂಟು ವರ್ಷಗಳಿಂದ ಭಾರತದಲ್ಲೇ ಉತ್ಪಾದಿಸುವ ಮೂಲಕ ಭಾರತ ಸ್ವಾವಲಂಬಿ ಹಾದಿಯತ್ತ ಸಾಗಿದೆ. ದೇಶೀ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚಿನ ಪೋ›ತ್ಸಾಹ ನೀಡುವ ಮೂಲಕ ಶೇ.70ರಷ್ಟುಉತ್ಪನ್ನಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುವ ಮೂಲಕ ಕ್ರಾಂತಿಯತ್ತ ಮುನ್ನಡೆಯುವ ಮೂಲಕ ಭಾರತ, ವಿದೇಶಿ ಉತ್ಪನ್ನಗಳಿಗೆ ಕೇವಲ ಮಾರುಕಟ್ಟೆಅಲ್ಲ ಎಂಬುದನ್ನು ದೇಶೀ ಉತ್ಪಾದನೆ ಮೂಲಕ ತಿಳಿಸುತ್ತಿದೆ ಎಂದು ಅವರು ಹೇಳಿದರು.

ಉತ್ಪಾದನಾ ಜೋಡಣಾ ಪೋ›ತ್ಸಾಹ ಯೋಜನೆ ಜಾರಿಗೊಳಿಸುವ ಮೂಲಕ ಆಟೋಮೊಬೈಲ…, ಫಾರ್ಮಸಿ, ಜವಳಿ, ಆಹಾರ ಉತ್ಪನ್ನ ಸೇರಿದಂತೆ ಒಟ್ಟು 14 ಕ್ಷೇತ್ರಗಳಲ್ಲಿ ಜಗತ್ತಿನ ಅತ್ಯುನ್ನತ ಆವಿಷ್ಕಾರಗಳು ಭಾರತಕ್ಕೆ ಬರುವ ಹಾಗೇ ಮಾಡಲಾಗಿದೆ. ಇದಕ್ಕಾಗಿ ಬೃಹತ್‌ ಕೈಗಾರಿಕೆ ಮತ್ತು ಐಐಟಿ ಕ್ಷೇತ್ರಗಳಿಗೆ ಪೋ›ತ್ಸಾಹ ನೀಡಲಾಗುತ್ತಿದೆ. ಭಾರತದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ದೇಶೀ ಉತ್ಪನ್ನಗಳು ಉತ್ಪಾದನೆಯಾಗಬೇಕು, ಅವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಾಗುವಂತಾಗಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಕೇಂದ್ರ ಸಚಿವ ಕ್ರಿಶನ್‌ ಹೇಳಿದರು.

ನರೇಂದ್ರ ಮೋದಿ ಬರುವ ಮೊದಲು ಇದ್ದ ಸರ್ಕಾರಗಳು 30 ವರ್ಷ ಮಾಡಲಾಗದ ಸಾಧನೆಯನ್ನು ಮೋದಿ ಸರ್ಕಾರ ಐದು ವರ್ಷದಲ್ಲಿ ಮಾಡಿದೆ. ಮೊದಲು ಇದ್ದ ಸರ್ಕಾರದ ಯೋಜನೆಗಳನ್ನು ಪಡೆಯಲು ಬಹಳ ಕಷ್ಟಪಡಬೇಕಾಗಿತ್ತು. ಕೊನೆಗೆ ಅದು ಫಲಾನುಭವಿಗೆ ಸಿಕ್ಕುತ್ತಿದ್ದು ಅಲ್ಪ ಭಾಗ ಮಾತ್ರ. ಅದರ ಬಹುಮತ ದಳ್ಳಾಳಿಗಳ ಪಾಲಾಗುತ್ತಿತ್ತು. ನರೇಂದ್ರ ಮೋದಿ ಆಡಳಿತಕ್ಕೆ ಬಂದ ನಂತರ ಸುಲಭವಾಗಿ ರೈತರು , ಕಾರ್ಮಿಕರು, ಕಮ್ಮಾರರು, ಚಮ್ಮಾರರು,ಅಂಗವಿಕಲರು, ವಿಧವೆಯರು ಸೇರಿದಂತೆ ಸಮಾಜದ ಹಲವಾರು ಫಲಾನುಭವಿಗಳು ಸವಲತ್ತು ಪಡೆಯುತ್ತಿದ್ದಾರೆ ಎಂದರು.

ನರೇಂದ್ರ ಮೋದಿ ದೆಹಲಿಯಲ್ಲಿ ಕುಳಿತು ಒಂದು ಬಟನ್‌ ಒತ್ತಿದರೆ ಸಾಕು ದೇಶದ ಕೋಟಿಗಟ್ಟಲೆ ಫಲಾನುಭವಿಗಳ ಖಾತೆಗೆ ಹಣ ಬಂದು ತಲುಪಲಿದೆ. ಇದು ಕೇವಲ ಈ ಕ್ಷೇತ್ರದಲ್ಲಿ ಮಾತ್ರವಲ್ಲ ಪ್ರತಿಯೊಂದು ಕ್ಷೇತ್ರದಲ್ಲೂ ಇದೇ ರೀತಿ ಸಾಧನೆ ಮಾಡಿದ್ದಾರೆ ಎಂದರು.

ಮಾಜಿ ಸಂಸದ ಮುದ್ದಹನುಮೇಗೌಡ, ವಿಧಾ® Üಪರಿಷತ್‌ ಸದಸ್ಯ ಅ.ದೇವೇಗೌಡ, ಉಪ ವಿಭಾಗಾಧಿಕಾರಿ ಅಜಯ…,ತಹಸೀಲ್ದಾರ್‌ ಮಹಾಬಲೇಶ್ವರ, ಅಶ್ವತ್‌್ಥನಾರಾಯಣ್‌, ಪಿಎಲ್‌ಡಿ ಬ್ಯಾಂಕ್‌ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್‌ ಮೊದಲಾದವರು ಹಾಜರಿದ್ದರು.

ಪ್ರಧಾನಿಯಾಗಿ ಮೋದಿಯನ್ನೇ ಮುಂದುವರೆಸಿ:

ಪ್ರಧಾನಿ ಮೋದಿಯಿಂದ ನಮಗೆ ಒಳ್ಳೆಯದಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರನ್ನೇ ಪ್ರಧಾನಿಯಾಗಿ ಮುಂದುವರೆಸಿ ಎಂದು ರೇಷ್ಮೆ ಬೆಳೆಗಾರ ಬಿ ಕೆ ಅಣ್ಣೇಗೌಡರು ಕೇಂದ್ರ ಸಚಿವರಿಗೆ ಮನವಿ ಮಾಡಿದರು .

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಹಲವಾರು ಇಲಾಖೆಗಳು ನೀಡಿರುವ ಸವಲತ್ತುಗಳ ಫಲಾನುಭವಿಗಳ ಜೊತೆ ಕೇಂದ್ರ ಸಚಿವ ಕೃಷ್ಣಪಾಲ… ಗುಲ್ಜಾರ್‌ ಆಗಮಿಸಿ ಸಂವಾದ ಮುಗಿಸಿ ವೇದಿಕೆಯಿಂದ ಹೊರಡುವಾಗ ಅಲ್ಲಿಗೆ ಬಂದ ರೈತ ಅಣ್ಣೇಗೌಡರು ಮಂತ್ರಿಗಳನ್ನು ತಡೆದು ನರೇಂದ್ರ ಮೋದಿಯಿಂದ ನಮ್ಮ ರೈತರಿಗೆ ಹಲವಾರು ಉಪಯೋಗಗಳು ಆಗಿವೆ ಎಂದರು.

ರೈತರ ಖಾತೆಗೆ ನೇರವಾಗಿ ಅನುದಾನ ಬರುವಂತ ಹಲವಾರು ಯೋಜನೆಗಳನ್ನು ಮಾಡಿದ್ದಾರೆ, ಅವರು ಮಾಡುತ್ತಿರುವ ಹಲವಾರು ಉತ್ತಮ ಕೆಲಸಗಳಿಂದ ನಾವು ಸಂತೋಷವಾಗಿದ್ದೇವೆ ಎಂದ ಅವರು ಮೋದಿಯನ್ನು ಪುನಃ ಪ್ರಧಾನಿ ಮಾಡಿ ಎಂದು ಕೇಂದ್ರ ಸಚಿವರ ಮುಂದೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಕೇಂದ್ರ ಸಚಿವ ಕೃಷ್ಣಪಾಲ್‌ ಗುಲ್ಜಾರ್‌, ನಿಮ್ಮಗಳ ಅಭಿಮಾನ ಇದೇ ರೀತಿ ಇರಲಿ. ಮುಂದಿನ ದಿನಗಳಲ್ಲಿ ಮೋದಿ ಪ್ರಧಾನಿಯಾಗಿ ಮುಂದುವರಿಯುತ್ತಾರೆ ಎಂದರು.

ಸಮುದ್ರದ ಮೇಲೆ ವಿದ್ಯುತ್‌ ಉತ್ಪಾದನೆ

ಕುಣಿಗಲ್‌: ಸಮುದ್ರಗಳ ಮೇಲೆ ಸೋಲಾರ್‌ ಪಾರ್ಕ್ ನಿರ್ಮಿಸಿ ವಿದ್ಯುತ್‌ ಉತ್ಪಾದನೆ ಮಾಡುವ ಯೋಜನೆಗೆ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಚಾಲನೆ ನೀಡಲಿದೆ ಎಂದು ಕೇಂದ್ರ ಸಚಿವ ಗುಲ್ಜಾರ್‌ ತಿಳಿಸಿದರು.

ಕುಣಿಗಲ್‌ ಪಟ್ಟಣದ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿಗಳ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂಧನ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಮಾಡುತ್ತಿದೆ, ಅದಕ್ಕೆ ಸಾಕ್ಷಿಯಾಗಿ ತುಮಕೂರಿನ ಪಾವಗಡದಲ್ಲಿ ನಿರ್ಮಿಸಿರುವ ಬೃಹತ್‌ ಸೋಲಾರ್‌ ಪಾರ್ಕ್ ಇದೆ ಎಂದರು.

ಈ ಸೋಲಾರ್‌ ಪಾರ್ಕ್ನಿಂದ ಹಲವಾರು ಬಡವರ ಬರಡು ಭೂಮಿಯಿಂದ ರೈತರಿಗೆ ಸಾಕಷ್ಟುಆದಾಯದ ಜೊತೆಗೆ ಅವರಿಗೆ ವಿದ್ಯುತ್‌ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ರೈತರ ಭೂಮಿಯ ಮೇಲೆ ಹೆಚ್ಚು ಅವಲಂಬಿತರಾಗಬಾರದು ಎಂದು ಪರ್ಯಾಯ ಮಾರ್ಗವನ್ನು ನೋಡುವ ಸಮಯದಲ್ಲಿ ಸಮುದ್ರಗಳ ಮೇಲೆ ಸೋಲಾರ್‌ ಪಾರ್ಕ್ ನಿರ್ಮಾಣ ಮಾಡಿ ನಮಗೆ ಬೇಕಾದಷ್ಟುವಿದ್ಯುತ್‌ ಪಡೆಯುವ ಕೆಲಸ ನಡೆಯುತ್ತಿದೆ. ಆದಷ್ಟುಬೇಗ ಅದರ ಸೌಲಭ್ಯ ಜನತೆಗೆ ಸಿಗುತ್ತದೆ ಎಂದರು.

ಅದೇ ರೀತಿ ಗಾಳಿ ಯಂತ್ರಗಳು ಅಣು ವಿದ್ಯುತ್‌ ಸ್ಥಾವರಗಳು ಸೇರಿದಂತೆ ವಿವಿಧ ಮೂಲಗಳಿಂದ ನಮಗೆ ಬೇಕಾಗುವಷ್ಟುಇಂಧನವನ್ನು ಉತ್ಪಾದಿಸುವ ಕೆಲಸ ಕೇಂದ್ರ ಸರ್ಕಾರ ಆರಂಭಿಸಿದೆ. ಬಡವರು ಹಾಗೂ ಶ್ರಮಿಕರ ಹಣ ಪೆಟ್ರೋಲ್‌, ಡೀಸೆಲ್‌ಗಾಗಿ ವಿದೇಶಗಳಿಗೆ ಹೋಗಕೂಡದು. ಇಂತಹ ಪರಿಸ್ಥಿತಿಯಲ್ಲಿ ಪರ್ಯಾಯ ವ್ಯವಸ್ಥೆಗಾಗಿ ಸರ್ಕಾರ ಕಸರತ್ತು ನಡೆಸುತ್ತಿದೆ ಎಂದರು.

ಪೆಟ್ರೋಲ್‌, ಡೀಸೆಲ್‌ ಉಳಿತಾಯ ಮಾಡಿ ಆ ಉತ್ಪಾದನೆಯನ್ನು ದೇಶಕ್ಕೆ ಬಳಸಿಕೊಳ್ಳಲು ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾಟರಿ ಚಾರ್ಜರ್‌ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಪ್ರತಿ ಮನೆಯಲ್ಲಿ ಬ್ಯಾಟರಿ ಚಾಲಿತ ವಾಹನಗಳು ಸಿಗುತ್ತವೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಆ ದೇವೇಗೌಡ, ಅಶ್ವತ್‌್ಥ ನಾರಾಯಣ್‌, ಉಪ ವಿಭಾಗಾಧಿಕಾರಿ ಅಜಯ್‌, ತಹಸೀಲ್ದಾರ್‌ ಮಹಾಬಲೇಶ್ವರ್‌, ಪ್ರಾಂಶುಪಾಲರಾದ ಡಿ.ಕೃಷ್ಣ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಇದ್ದರು. 

Follow Us:
Download App:
  • android
  • ios