ತುಮಕೂರು (ನ.11):  ಶಿರಾ ಉಪಚುನಾವಣೆ ಮತ ಎಣಿಕೆ ವೇಳೆ ಮತ ಎಣಿಕೆ ಕೇಂದ್ರಕ್ಕೆ ತಮ್ಮನ್ನು ಬಿಡಲಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಆ್ಯಂಬ್ರೂಸ್‌ ಆಕ್ರೋಶ ವ್ಯಕ್ತಪಡಿಸಿದರು.

ನೀರಿನ ಖಾಸಗೀಕರಣ ವಿರೋಧಿಸಿ ಮಾತು ಆಡುವುದನ್ನೇ ನಿಲ್ಲಿಸಿ ಮೌನ ಹೋರಾಟ ಮಾಡುತ್ತಿರುವ ಆ್ಯಂಬ್ರೂಸ್‌ ಅವರು ತಮ್ಮನ್ನು ಮತಎಣಿಕೆ ಕೇಂದ್ರಕ್ಕೆ ಬಿಡುವಂತೆ ಪಟ್ಟು ಹಿಡಿದರು. ಬಳಿಕ ಚುನಾವಣಾ ಸಿಬ್ಬಂದಿ ಅವರಿಗೆ ಹೋಗಲು ಅನುವು ಮಾಡಿಕೊಟ್ಟರು.

ಡಿ.ಕೆ.ಸುರೇಶ್ ಜೊತೆ ಹೊಂದಾಣಿಕೆ : ಗೆದ್ದ ಮುನಿರತ್ನ ...

ಶಿರಾದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ. ರಾಜೇಶ್ ಗೌಡ ವಿಜಯ ಸಾಧಿಸಿದರು. ಜೆಡಿಎಸ್‌ನಿಂದ ಅಮ್ಮಾಜಮ್ಮ ಸ್ಪರ್ಧಿಸಿದ್ದರೆ ಕಾಂಗ್ರೆಸ್‌ನಿಂದ ಟಿಬಿ ಜಯಚಂದ್ರ ಸ್ಪರ್ಧೆ ಮಾಡಿದ್ದರು.