ಮಧುಗುಂಡಿ ಡಬಲ್ ಮರ್ಡರ್ ಕೇಸ್: ತಂದೆಯನ್ನೇ ಕೊಂದ ಮಗ, ತಾಯಿಯ ಸ್ಥಿತಿ ಗಂಭೀರ!
ಆಸ್ತಿ ಮಾರಾಟ ಮಾಡಿದ ಹಣದ ವಿಚಾರದಲ್ಲಿ ನಡೆದ ಮಾತುಕತೆ ವಿಕೋಪಕ್ಕೆ ತಿರುಗಿ ತಂದೆ ಸೇರಿದಂತೆ ಇಬ್ಬರ ಬರ್ಬರ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಆ.14) : ಆಸ್ತಿ ಮಾರಾಟ ಮಾಡಿದ ಹಣದ ವಿಚಾರದಲ್ಲಿ ನಡೆದ ಮಾತುಕತೆ ವಿಕೋಪಕ್ಕೆ ತಿರುಗಿ ತಂದೆ ಸೇರಿದಂತೆ ಇಬ್ಬರ ಬರ್ಬರ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಹೆತ್ತ ಮಗನೇ ತಂದೆ-ತಾಯಿ ಜೊತೆಗೆ ಮಧ್ಯವರ್ತಿಯ ಮೇಲೆ ಮಚ್ಚು ಬೀಸಿ ಕೊಲೆ ಮಾಡಲಾಗಿದೆ. ಇಂತಹ ದಾರುಣ ಘಟನೆಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸುಂಕಸಾಲಿ ಸಮೀಪದ ಮಧುಗುಂಡಿ ಗ್ರಾಮ ಸಾಕ್ಷಿ ಆಗಿದೆ. ಮೃತನನ್ನ 69 ವರ್ಷದ ಭಾಸ್ಕರ್ ಗೌಡ ಹಾಗೂ 45 ವರ್ಷದ ಕಾರ್ತಿಕ್ ಎಂದು ಗುರುತಿಸಲಾಗಿದೆ. 52 ವರ್ಷದ ಮಹಿಳೆ ಪ್ರೇಮಾಳ ಕುತ್ತಿಗೆ ಭಾಗಕ್ಕೆ ಬಲವಾದ ಮಚ್ಚಿನ ಏಟು ಬಿದ್ದಿರುವುದರಿಂದ ಆಕೆ ಕೂಡ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಆಸ್ತಿಗಾಗಿ ಮೂವರ ಮೇಲೆ ಮಚ್ಚು ಬೀಸಿದ ಆರೋಪಿ ಸಂತೋಷ್ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಪ್ರೇಮಿಗಾಗಿ ಪತಿಯನ್ನೇ ಹತ್ಯೆ ಮಾಡಿದ ಕೊಲೆಗಾತಿ ಪತ್ನಿ, ಹೆಸರು ಪಾವನಾ!
ಹಣಕಾಸಿನ ವಿಚಾರದಲ್ಲಿ ಕಿರಿಕ್ :
ಮೃತ ಭಾಸ್ಕರ್ ಗೌಡ ಅವರಿಗೆ ಸುಮಾರು 15 ಎಕರೆಯಷ್ಟು ಕಾಫಿ ತೋಟವಿತ್ತು. ಭಾಸ್ಕರ್ ಗೌಡಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ಶಿವು ತೋಟ ಮಾರಬೇಕೆಂದು, ಕಿರಿಯ ಮಗ ಸಂತೋಷ್ ತೋಟವನ್ನ ಮಾರುವುದು ಬೇಡ ಎಂದು. ಆದರೆ, ತಂದೆ ತೋಟವನ್ನ ಮಧ್ಯವರ್ತಿ ಕಾರ್ತಿಕ್ ಮೂಲಕ ಆಂಧ್ರಪ್ರದೇಶ ಮೂಲದ ವ್ಯಕ್ತಿಗೆ ಮಾರಾಟ ಮಾಡಿಸಿದ್ದನು. ತೋಟವನ್ನು ಖರೀದಿಸಿದ್ದ ವ್ಯಕ್ತಿ ಮುಂಗಡವಾಗಿ 12 ಲಕ್ಷ ಹಣ ನೀಡಿದ್ದನು. 12 ಲಕ್ಷ ಹಣವನ್ನ ಭಾಸ್ಕರ್ ಗೌಡರ ಹಿರಿಯ ಮಗ ಶಿವು ತೆಗೆದುಕೊಂಡು ಹೋಗಿದ್ದನು. ಇದರಿಂದ ಸಿಟ್ಟಾದ ಕಿರಿಯ ಮಗ ಸಂತೋಷ್, ತೋಟವನ್ನ ಮಾರಿಸಿದ ಕಾರ್ತಿಕ್ ಮನೆಗೆ ಬಂದಾಗ ಆತನ ಮೇಲೆ ಮಚ್ಚು ಬೀಸಿದ್ದಾನೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದನು.
ಈ ವೇಳೆ, ಸಂತೋಷ್ ಅನ್ನು ತಡೆಯಲು ಬಂದ ಅಪ್ಪ ಹಾಗೂ ಅಮ್ಮನ ಮೇಲೂ ಮಗ ಸಂತೋಷ ಮಚ್ಚುಬಿಸಿದ್ದನು. ಕಾರ್ತಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅಪ್ಪ-ಅಮ್ಮನನ್ನ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ 69 ವರ್ಷದ ಭಾಸ್ಕರ್ ಗೌಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಪತ್ನಿ ಶೀಲಶಂಕಿಸಿ ಕೊಲೆಗೆ ಯತ್ನಿಸಿದ ದುರಳ ಗಂಡ; ಸಲ್ಮಾ ಸಾವು ಬದುಕಿನ ಹೋರಾಟ!
ಕೃತ್ಯದ ಬಳಿಕ ಆರೋಪಿ ಸಂತೋಷ್ ಶರಣು :
ನಿನ್ನೆ ರಾತ್ರಿ ತನ್ನ ಮನೆಗೆ ಬಂದಿದ್ದ ಕಾರ್ತಿಕ್ ಗೌಡ ಅವರೊಂದಿಗೆ ಹಣಕಾಸಿನ ವಿಚಾರವಾಗಿ ಮಾತಿಗೆ ಮಾತು ಬೆಳೆಸಿದ ಸಂತೋಷ್ ಏಕಾಏಕಿ ಮನೆಯೊಳಗಿನಿಂದ ಮಚ್ಚು ತಂದು ಕಾರ್ತಿಕ್ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಕಾರ್ತಿಕ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ ಎನ್ನಲಾಗಿದೆ. ಕೊಲೆ ಬಳಿಕ ಆರೋಪಿ ಸಂತೋಷ್ ಬಾಳೂರು ಠಾಣೆಗೆ ಬಂದು ಶರಣಾಗಿದ್ದಾನೆ. ಕಾರ್ತಿಕ್ ಮಧುಗುಂಡಿ ಗ್ರಾಮದ ಉಪೇಂದ್ರಗೌಡ ಎಂಬುವವರ ಪುತ್ರ. ಈ ಭಾಗದಲ್ಲಿ ಉತ್ತಮ ಜನಸಂಪರ್ಕ ಹೊಂದಿದ್ದರು. ವಿವಾಹವಾಗಿ ಒಂದು ಮಗು ಇತ್ತು. ಅವರ ತಂದೆ ಇತ್ತೀಚೆಗಷ್ಟೇ ನಿಧನ ಹೊಂದಿದ್ದರು. ವಿವಾಹ ಮಾಡಿಕೊಟ್ಟಿದ್ದ ಸಹೋದರಿಯೂ ಈ ಹಿಂದೆ ಅಪಘಾತದಲ್ಲಿ ನಿಧನ ಹೊಂದಿದ್ದರು. ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದು, ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.