* ಸರಕಾರದ ದಿನಕ್ಕೊಂದು ಆದೇಶ ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ * ಕೊರೋನಾದಿಂದ ಕಂಗೆಟ್ಟ ಜನತೆಗೆ ಜೀವನ ನಡೆಸುವದಕ್ಕೂ ಇನ್ನಷ್ಟು ಕಷ್ಟತಂದೊಡ್ಡಿದೆ* ವ್ಯಾಕ್ಸಿನ್‌ ಕೊರತೆ ಇದೆ ಇನ್ನೊಂದು ಕಡೆ ಊಟಕ್ಕೂ ಪರದಾಟ 

ಅಂಕೋಲಾ(ಮೇ.27): ಕೋವಿಡ್ ಸೋಂಕಿತರಿಗೆ ಹೋಮ್‌ ಐಸೊಲೇಷನ್‌ ಪದ್ದತಿ ಅಳವಡಿಸಿದ್ದರಿಂದಲೇ ಹಳ್ಳಿ ಹಳ್ಳಿಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕೋವಿಡ್‌ ಹರಡಲು ಕಾರಣವಾಗಿದೆ. ಇದು ಸರಕಾರದ ಸಂಪೂರ್ಣ ವೈಫಲ್ಯದ ಸಂಕೇತ ಎಂದು ಕಾರವಾರ ಅಂಕೋಲಾ ಮಾಜಿ ಶಾಸಕ ಸತೀಶ ಸೈಲ್‌ ಆರೋಪಿಸಿದ್ದಾರೆ. 

ಅವರು ಸುದ್ದಿ​ಗಾ​ರ​ರೊಂದಿಗೆ ಮಾತನಾಡಿ, ಸರಕಾರ ದಿನಕ್ಕೊಂದು ನೀತಿ, ದಿನಕ್ಕೊಂದು ನಿಯಮ ಜಾರಿಗೆ ತಂದು ಮೊದಲೇ ಕೊರೋನಾದಿಂದ ಕಂಗೆಟ್ಟ ಜನತೆಗೆ ಜೀವನ ನಡೆಸುವದಕ್ಕೂ ಇನ್ನಷ್ಟು ಕಷ್ಟ ತಂದೊಡ್ಡಿದೆ. ಕಳೆದ ಸಲ ಸೋಂಕಿತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈ ಸಲ ಎರಡನೆ ಅಲೆ ಬರುವದು ಗೊತ್ತಿದ್ದರೂ ಯಾವುದೇ ಪೂರ್ವತಯಾರಿ ಇಲ್ಲದೆ ಒಂದು ಕಡೆ ಟೆಸ್ಟಿಂಗ್‌ ಸರಿಯಾಗಿ ನಡೆಯುತ್ತಿಲ್ಲ, ವ್ಯಾಕ್ಸಿನ್‌ ಕೊರತೆ ಇದೆ ಇನ್ನೊಂದು ಕಡೆ ಜನ ಊಟಕ್ಕೂ ಪರದಾಡುವಂತಹ ಸ್ಥಿತಿ ಸೃಷ್ಟಿಯಾಗಿದೆ ಎಂದು ದೂರಿದ್ದಾರೆ.

'ದೇಶಪಾಂಡೆ ದೀರ್ಘಾವಧಿಯಲ್ಲಿ ಸಚಿವರಾಗಿದ್ದು ಏನು ಸಾಧನೆ ಮಾಡಿದ್ದಾರೆ?'

ಮಾರ್ಚ್‌ ವೇಳೆಯಲ್ಲಿ ಸರಿಯಾಗಿ ಲಾಕಡೌನ್‌ ಮಾಡಿದ್ದರೆ ತುಂಬ ಪರಿಣಾಮಕಾರಿ ಆಗಿರುತ್ತಿತ್ತು. ಸರಕಾರದ ದಿನಕ್ಕೊಂದು ಆದೇಶ ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona