ಗಣನೀಯ ಪ್ರಮಾಣದಲ್ಲಿ ಹೆಚ್ಚಿದ ಆಲಮಟ್ಟಿ ಜಲಾಶಯದ ಒಳಹರಿವು| ಕಳೆದ ವರ್ಷಕ್ಕಿಂತ ಒಂದು ತಿಂಗಳ ಮುಂಚಿತವಾಗಿಯೇ ನೀರು ಹರಿದು ಬಂದಿದೆ| ಪ್ರತಿ ವರ್ಷ ಜೂನ್‌ ಎರಡನೇ ವಾರ ಇಲ್ಲವೇ ಜೂನ್‌ ಅಂತ್ಯಕ್ಕೆ ಒಳಹರಿವು ಬರುತ್ತಿತ್ತು| ಈ ಬಾರಿ ಶುಕ್ರವಾರದಿಂದ ಆಲಮಟ್ಟಿ ಜಲಾಶಯಕ್ಕೆ 12,761 ಕ್ಯುಸೆಕ್‌ ನೀರು ಹರಿದು ಬರುತ್ತಿದೆ| 

ವಿಜಯಪುರ(ಜೂ.07): ಕೃಷ್ಣಾ ಅಚ್ಚುಕಟ್ಟು ಪ್ರದೇಶ ಮತ್ತು ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯದ ಒಳಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಿದ್ದು, ಕಳೆದ ವರ್ಷಕ್ಕಿಂತ ಒಂದು ತಿಂಗಳ ಮುಂಚಿತವಾಗಿಯೇ ನೀರು ಹರಿದು ಬಂದಿದೆ.

Add Asianetnews Kannada as a Preferred SourcegooglePreferred

ಪ್ರತಿ ವರ್ಷ ಜೂನ್‌ ಎರಡನೇ ವಾರ ಇಲ್ಲವೇ ಜೂನ್‌ ಅಂತ್ಯಕ್ಕೆ ಒಳಹರಿವು ಬರುತ್ತಿತ್ತು. ಆದರೆ ಈ ಬಾರಿ ಶುಕ್ರವಾರದಿಂದ ಆಲಮಟ್ಟಿ ಜಲಾಶಯಕ್ಕೆ 12,761 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಆಲಮಟ್ಟಿ ಜಲಾಶಯದ ಹಿಂಭಾಗದ ಹಿಪ್ಪರಗಿ ಜಲಾಶಯದಿಂದಲೂ 10 ಸಾವಿರ ಕ್ಯುಸೆಕ್‌ ನೀರು ಬಿಡಲಾಗುತ್ತಿದೆ. ಕಳೆದ ವರ್ಷ ಆಲಮಟ್ಟಿ ಜಲಾಶಯಕ್ಕೆ ಜುಲೈ 3 ರಿಂದ ಒಳಹರಿವು ಆರಂಭಗೊಂಡಿತ್ತು. 2019ರ ನವೆಂಬರ್‌ ಅಂತ್ಯದಿಂದಲೇ ಜಲಾಶಯಕ್ಕೆ ಬರುವ ಒಳಹರಿವು ಸಂಪೂರ್ಣ ಸ್ಥಗಿತಗೊಂಡಿತ್ತು. ಶುಕ್ರವಾರ ಒಳಹರಿವು ಆರಂಭಗೊಂಡಿದೆ.

ವಿಜಯಪುರ: ಆರೋಗ್ಯ ಸಿಬ್ಬಂದಿಗೆ ಆವಾಜ್‌ ಹಾಕಿದ ಅಜ್ಜಿ

ಇನ್ನುಳಿದಂತೆ ಬೆಂಗಳೂರು ನಗರ ಸುತ್ತಮುತ್ತ, ಕೊಡಗಿನ ವಿರಾಜಪೇಟೆ ಮತ್ತು ಮೈಸೂರಿನ ಕೆಲಭಾಗಗಳಲ್ಲಿ ಸಾಧಾರಣ ಮಳೆ ಸುರಿದಿದೆ.