ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳದ್ದೇ ಕಾರುಬಾರು..!
ಮಳೆಗೆ ಕುತ್ತು ಹೋದ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಡಾಂಬಾರು
ಆನಂದ ಭಮ್ಮನ್ನವರ
ಸಂಕೇಶ್ವರ(ಜು.21): ಸುಗಮ ಸಂಚಾರಕ್ಕೆ ಅನುಕೂಲವಾಗಲೆಂದು ಹಾಗೂ ಅಪಘಾತದ ಪ್ರಮಾಣ ಕಡಿಮೆ ಮಾಡಲೆಂದು ರಾಷ್ಟ್ರೀಯ ಹೆದ್ದಾರಿಗಳನ್ನು ಕೇಂದ್ರ ಸರ್ಕಾರ ಹೊಸ ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡುತ್ತಿದೆ. ಇಲ್ಲೊಂದು ರಾಷ್ಟ್ರೀಯ ಕಾಮಗಾರಿ ಕಳಪೆಗುಣಮಟ್ಟದಿಂದ ಕೂಡಿದ್ದ ಕಾರಣಕ್ಕೆ ಮಳೆಗೆ ಕಿತ್ತು ಹೋಗಿ ಅಪಘಾತಗಳಿಗೆ ಆಹ್ವಾನ ನೀಡುವಂತಾಗಿದೆ. ಹೌದು, ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನೊಮ್ಮೆ ನೋಡಿದರೆ ಸಾಕು ಚಂದ್ರ ಮೇಲಿನ ಗುಳಿಗಳನ್ನು ನೋಡಿದಂತೆ ಭಾಸವಾಗುತ್ತಿದೆ. ಕಾಕತಿಯಿಂದ ಕೊಗನೊಳಿ ಚೆಕ್ ಪೋಸ್ಟ್‌ವರೆಗಿನ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆ ಉದ್ದಕ್ಕೂ ಕಂಡ ಕಂಡಲೆಲ್ಲ ಗುಂಡಿಗಳು ಬಾಯ್ದೆರೆದುಕೊಂಡಿವೆ. ವರ್ಷದ ಮೊದಲ ಮಳೆಗೆ ಈ ಹಿಂದೆ ತೇಪೆ ಹಚ್ಚಿದ ಗುಂಡಿಗಳು ತೆರದುಕೊಂಡಿದ್ದು, ಈ ರಸ್ತೆಯ ಮೇಲೆ ವಾಹನ ಸವಾರರು ಜೀವ ಕೈಯಲಿಡಿದು ಓಡಾಡಬೇಕಾಗಿದೆ.
ನಿರ್ವಹಣೆ ಇಲ್ಲದೆ ಹದಗೆಟ್ಟ ರಸ್ತೆ:
2004ರಲ್ಲಿ ನಿರ್ಮಾಣವಾಗಿರುವ ಈ ರಾಷ್ಟೀಯ ಹೆದ್ದಾರಿ ಈ ಹಿಂದೆ ಪುಂಜ ಲಾಯಿಡ್ ಕಂಪನಿ ನಿರ್ವಹಣೆ ಮಾಡುತ್ತಿತ್ತು. ಆವಾಗ ರಸ್ತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತಿತ್ತು. ನಂತರ 2020ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈ ರಸ್ತೆ ನಿರ್ವಹಣೆಯನ್ನ ಜೈ ಹಿಂದ್ ರೋಡ್ ಡೆವಲಪಮೆಂಟ್ ಕಂಪನಿ ನಿರ್ವಹಣೆ ಮಾಡುತ್ತಿದೆ. ಆದರೆ ಕಳಪೆ ಮಟ್ಟದ ಕಾಮಗಾರಿ ಪರಿಣಾಮ ತಗ್ಗು ಗುಂಡಿಗಳು ರಸ್ತೆ ಉದ್ದಕ್ಕೂ ತೆರೆದುಕೊಂಡಿದ್ದು, ಮಳೆಗಾಲದಲ್ಲಿ ಕಾಟಾಚಾರಕ್ಕೆ ಎಂಬಂತೆ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುತ್ತದೆ. ಆದರೆ ಈ ಗುಂಡಿಗಳು ದಿನೇದಿನೇ ಹೆಚ್ಚಾಗುತ್ತಿದ್ದು, ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ.
Bengaluru: ರಸ್ತೆ ಗುಂಡಿ ಮುಚ್ಚಲು ಮಿಲಿಟರಿಗೆ ವಹಿಸ್ತೀವಿ: ಹೈಕೋರ್ಟ್ ಸಿಡಿಮಿಡಿ
ತೆರಿಗೆ ವಸೂಲಿ ಹೆಚ್ಚು: ನಿರ್ವಹಣೆ ಕಡಿಮೆ:
ಇನ್ನು ರಸ್ತೆ ಮೇಲೆ ಓಡಾಡುವ ವಾಹನಗಳಿಗೆ ತೆರಿಗೆ ಸಂಗ್ರಹ ವಸೂಲಿ ಮಾತ್ರ ರಾಜ್ಯದಲ್ಲಿಯೇ ಹೆಚ್ಚು ಹಣ ಸಂಗ್ರಹ ಮಾಡುತ್ತಿರುವ ಟೋಲ್ ಪೈಕಿ ಹತ್ತರಗಿ ಟೋಲ್ ಹಿಂದೆ ಬಿದ್ದಿಲ್ಲ. ವಾಹನ ಸವಾರ ಕಡೆಯಿಂದ ತೆರಿಗೆ ವಸೂಲಿ ಅಚ್ಚು ಕಟ್ಟಾಗಿ ಸಂಗ್ರಹಿಸುವ ನಿರ್ವಹಣೆ ಸಂಸ್ಥೆ ರಸ್ತೆ ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಕೂಡ ಜೈ ಹಿಂದ್ ಸಂಸ್ಥೆ ಸರಿಯಾಗಿ ಮಾಡದೆ ಇರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ .
ಒಟ್ಟಿನಲ್ಲಿ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಸಂಚಾರ ಮಾಡುವುದು ಒಂದು ಸಾಹಸ ಎಂಬಂತೆ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದೇ ರಸ್ತೆ ಮೇಲೆ ಓಡಾಡುವ ಜನ ಪ್ರತಿನಿಧಿಗಳು ಜಾಣಮೌನ ವಹಿಸಿದ್ದಾರೆ. ಈ ಗುಂಡಿಗಳಿಂದ ದೊಡ್ಡ ಮಟ್ಟದಲ್ಲಿ ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಲು ಎಚ್ಚೆತ್ತುಕೊಂಡು ಸರಿಪಡಿಸಬೇಕು ಎಂದು ಸವಾರರು ಒತ್ತಾಯಿಸಿದ್ದಾರೆ.
ಪ್ರಧಾನಿ ಹೋದ ಬೆನ್ನಲ್ಲೇ ಬಿದ್ದ ರಸ್ತೆ ‘ಗುಂಡಿ’: ಬಿಬಿಎಂಪಿ- ಜಲಮಂಡಳಿ ಮಧ್ಯೆ ಕಿತ್ತಾಟ ಶುರು..!
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಜಾಗೃತರಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಮಗಾರಿ ನಿರ್ವಹಣೆ ಸೂಕ್ತವಾಗಿ ನಿರ್ವಹಿಸುವ ಕಂಪನಿಗೆ ವಹಿಸಬೇಕು ಎಂಬುದು ನಾನು ಸೇರಿದಂತೆ ಈ ಭಾಗದ ಎಲ್ಲ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಒಮ್ಮತದ ಅಭಿಪ್ರಾಯವಾಗಿದೆ ಅಂತ ಮಾಜಿ ಸಂಸದರು ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅಧಿಕಾರಿಗಳು ತಮಗೆ ಬೇಕಾದವರಿಗೆ ಗುತ್ತಿಗೆ ನೀಡಿದ್ದು, ಕಳೆದ ಎರಡು ವರ್ಷಗಳಿಂದ ರಸ್ತೆ ನಿರ್ವಹಣೆ ವ್ಯವಸ್ಥೆ ಹಳಿ ತಪ್ಪಿದೆ. ಹೆದ್ದಾರಿಯಲ್ಲಿ ಜೀವಘಾತಕ ಗುಂಡಿಗಳು ತೆರೆದುಕೊಂಡಿವೆ. ತಗ್ಗು ಗುಂಡಿಗಳಿಗೆ ಅಪಘಾತ ಹೆಚ್ಚುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ವ್ಯವಸ್ಥೆ ಸರಿಪಡಿಸಬೇಕು ಅಂತ ಸಂಕೇಶ್ವರ ಪ್ಯಾಸೆಂಜರ್ ವಾಹನಗಳ ಮಾಲೀಕರ ಸಂಘದ ಅಧ್ಯಕ್ಷ ದುರದುಂಡಿ ಖೋತ ಹೇಳಿದ್ದಾರೆ.