ಬೆಂಗಳೂರು-ಮೈಸೂರು ಹೆದ್ದಾರಿ ಶೀಘ್ರ ಸಂಚಾರ ಮುಕ್ತ

ರಾಷ್ಟ್ರೀಯ ಹೆದ್ದಾರಿಯಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳಿಗಷ್ಟೇ ನಾನು ಪ್ರಾಮುಖ್ಯತೆ ನೀಡುತ್ತೇನೆ. ಬೇರೆಯವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು.

Importance for solution of problems on highways: Sumalatha snr

  ಮಂಡ್ಯ (ನ.04):  ರಾಷ್ಟ್ರೀಯ ಹೆದ್ದಾರಿಯಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳಿಗಷ್ಟೇ ನಾನು ಪ್ರಾಮುಖ್ಯತೆ ನೀಡುತ್ತೇನೆ. ಬೇರೆಯವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು.

ನವೆಂಬರ್‌ಗೆ ಮದ್ದೂರು ಬೈಫಾಸ್‌ ರಸ್ತೆ (Road )  ಸಂಚಾರಕ್ಕೆ ಮುಕ್ತವಾಗುವ ಕುರಿತಂತೆ ಪ್ರತಾಪ್‌ ಸಿಂಹ   ಹೇಳಿಕೆ ಬಗ್ಗೆ ನಗರದಲ್ಲಿ ಸುದ್ದಿಗಾರರು ಪ್ರಶ್ನಿಸಿದಾಗ, ಹೆದ್ದಾರಿ (Highway)  ವಿಷಯದಲ್ಲಿ ಬೇರೆಯವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಹೆದ್ದಾರಿಯಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಡುವುದು ನನ್ನ ಕೆಲಸ. ಅದನ್ನು ನಾನು ಮಾಡುತ್ತಿದ್ದೇನೆ ಎಂದರು.

ನಾನು ಈಗಾಗಲೇ ಹೆದ್ದಾರಿಯಲ್ಲಿ ಮೂರು ಬಾರಿ ಪರಿಶೀಲನೆ ಮಾಡಿದ್ದೇನೆ. ಉದ್ಘಾಟನೆ ವೇಳೆಗೆ ಇನ್ನೊಂದು ಬಾರಿ ಭೇಟಿ ನೀಡುತ್ತೇನೆ. ಎಲ್ಲೆಲ್ಲಿ ಸಮಸ್ಯೆಗಳು ಇವೆ ಎನ್ನುವುದನ್ನು ಗುರುತಿಸಿ ಸಂಬಂಧಪಟ್ಟವರ ಗಮನಕ್ಕೆ ತರುತ್ತೇನೆ. ಮುಖ್ಯಮಂತ್ರಿಗಳ ಗಮನಕ್ಕೆ ಈಗಾಗಲೇ ಹಲವಾರು ಸಮಸ್ಯೆಗಳನ್ನು ತಂದಿದ್ದೇನೆ. ಅವರೂ ಸಭೆ ಕರೆಯುತ್ತೇನೆ ಎಂದು ಹೇಳಿರುವುದಾಗಿ ತಿಳಿಸಿದರು.

ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು (Bengaluru  - mysuru )  ಹೆದ್ದಾರಿ ಸಂಚಾರಕ್ಕೆ ಉತ್ತಮವಾಗಿದೆ. ಮೊದಲು ಇದ್ದ ರಸ್ತೆಗಿಂತ ಈಗ ನೂರರಷ್ಟುಚೆನ್ನಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಕಡಿಮೆ ಸಮಯದಲ್ಲಿ ತೆರಳಲು ಅನುಕೂಲಕರವಾಗಿದೆ. ಆದರೆ, ಹೆದ್ದಾರಿಯಿಂದ ಜನರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು. ಸಮಸ್ಯೆಗೆ ಪರಿಹಾರ ನೀಡವವರೆಗೆ ನಾವು ಬಿಡುವುದಿಲ್ಲ ಎಂದರು.

ಮಾಸಾಂತ್ಯಕ್ಕೆ ಮದ್ದೂರು ಬೈಪಾಸ್‌ ಸಂಚಾರ ಮುಕ್ತ

 ಮಂಡ್ಯ :  ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಬರುವ ಮದ್ದೂರು ಬೈಪಾಸ್‌ ರಸ್ತೆ ನವೆಂಬರ್‌ ಅಂತ್ಯದ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಮದ್ದೂರು ಬೈಪಾಸ್‌ ಮೇಲೆ ನಿಂತು ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿರುವ ಅವರು, ಮದ್ದೂರು ಬೈಪಾಸ್‌ ರಸ್ತೆ ಕಾಮಗಾರಿ ಬಹುತೇಕ ಅಂತಿಮ ಹಂತ ತಲುಪಿದೆ. ಎಕ್ಸ್‌ಪೆನ್ಷನ್‌ ಜಾಯಿಂಟ್ಸ… ಕೆಲಸ ಮಾತ್ರ ಬಾಕಿ ಇದೆ. ಮುಂದಿನ 10-15ದಿನದಲ್ಲಿ ಆ ಕೆಲಸವೂ ಮುಗಿಯುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಡ್ಯ, ಶ್ರೀರಂಗಪಟ್ಟಣ ಬೈಪಾಸ್‌ ಕೂಡ ಡಿಸೆಂಬರ್‌ ವೇಳೆಗೆ ಕಂಪ್ಲೀಟ್‌ ಆಗಲಿದೆ. ಹೊಸ ವರ್ಷದಿಂದ ಸರಾಗವಾಗಿ ಬೆಂಗಳೂರಿನಿಂದ ನೇರವಾಗಿ ಮೈಸೂರಿಗೆ ಪ್ರಯಾಣಿಕರು ಸಂಚಾರ ಮಾಡಬಹುದು. 75 ರಿಂದ 80 ನಿಮಿಷಗಳಲ್ಲಿ ನೀವು ಬೆಂಗಳೂರಿನಿಂದ ಮೈಸೂರು ತಲುಪಬಹುದು ಎಂದು ಹೇಳಿದ್ದಾರೆ.

ಕೆಲವೆಡೆ ಕೆನಾಲ, ಅಂಡರ್‌ ಪಾಸ್‌ನಂತಹ ಸಣ್ಣ ಪುಟ್ಟಕೆಲಸವಿದೆ. ಆ ಕೆಲಸದ ಬಳಿಕ ಟ್ರಾಫಿಕ್‌ ಬದಲಾವಣೆ ಮಾಡಿ, ಮುಕ್ತ ಸಂಚಾರಕ್ಕೆ ಅವಕಾಶ ನೀಡುತ್ತೇವೆ ಎಂದಿದ್ದಾರೆ.

ಬೆಂಗಳೂರು :  ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಖಾಸಗಿ ಮತ್ತು ಸರ್ಕಾರಿ ಸಾರಿಗೆ ವಾಹನಗಳ ಮೇಲೆ ನಿಗಾವಹಿಸುವ ಸಂಬಂಧ ಕಡ್ಡಾಯವಾಗಿ ಸ್ಥಳ ಪತ್ತೆ ಹಚ್ಚುವ ಸಾಧನ ಮತ್ತು ತುರ್ತು ದಿಗಿಲು ಗುಂಡಿ (ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ ಮತ್ತು ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌) ಅಳವಡಿಸಲು ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸಾರ್ವಜನಿಕ ಸೇವಾ ವಾಹನಗಳಲ್ಲಿ ಸ್ಥಳ ಪತ್ತೆ ಹಚ್ಚುವ ಸಾಧನ ಮತ್ತು ತುರ್ತು ದಿಗಿಲು ಗುಂಡಿ ಅವಳಡಿಕೆ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 21.22 ಕೋಟಿ ರು. ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ 60:40ರ ಅನುಪಾತದಲ್ಲಿ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಕೇಂದ್ರ ಯೋಜನಾ ಸಮಾಲೋಚಕರನ್ನು ಕೇಂದ್ರದ ವತಿಯಿಂದ ನೀಡಲಾಗುತ್ತಿದೆ. ಈ ಸಂಬಂಧ ಸಾರಿಗೆ ಇಲಾಖೆಯ ಆಯುಕ್ತರ ಖಾತೆಗೆ 5.97 ಕೋಟಿ ರು. ಹಣವನ್ನು ಕೇಂದ್ರವು ನೀಡಿದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳು ಅತಿ ವೇಗವಾಗಿ ಸಂಚರಿಸಿ ಅಪಘಾತಕ್ಕೆ ಕಾರಣವಾಗುವುದನ್ನು ನಿಯಂತ್ರಿಸಲು ಈ ಯೋಜನೆಯು ಸಹಕಾರಿಯಾಗಲಿದೆ. ಅಲ್ಲದೆ, ನಿಗದಿಪಡಿಸಿದ ಸ್ಥಳಗಳಲ್ಲಿ ನಿಲುಗಡೆ ಮಾಡಲಾಗುತ್ತಿದೆಯೇ, ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಲಾಗುತ್ತಿದೆಯೇ ಎಂಬುದೂ ಸೇರಿದಂತೆ ಸಮಾಜಘಾತುಕ ಶಕ್ತಿಗಳಿಂದ ರಕ್ಷಿಸಲು ಸ್ಥಳವನ್ನು ಪತ್ತೆಹಚ್ಚಲು ಉಪಯೋಗವಾಗಲಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

ಖಾಸಗಿ ಕ್ಷೇತ್ರದ ಸಾರ್ವಜನಿಕ ಸಾರಿಗೆ ವಾಹನಗಳು ಮತ್ತು ಪ್ರವಾಸಿ ವಾಹನಗಳಲ್ಲಿ ಕಡ್ಡಾಯವಾಗಿ ಈ ಸಾಧನ ಅವಳಡಿಕೆ ಮಾಡುವುದರಿಂದ ವಾಹನಗಳ ವೇಳಾಪಟ್ಟಿಗನುಗುಣವಾಗಿ ಸಂಚಾರ ಮತ್ತು ಚಲನವನದ ಮೇಲೆ ನಿಗಾ ಇಡಬಹುದು. ಇದರಿಂದ ಅನಾರೋಗ್ಯಕರ ಪೈಪೋಟಿಯನ್ನು ತಪ್ಪಿಸಬಹುದು. ಸಾರಿಗೆ ಇಲಾಖೆಯು ಇದರ ಮೇಲುಸ್ತುವಾರಿ ನೋಡಿಕೊಳ್ಳಲಿದೆ. ನಿಗದಿತ ಸ್ಥಳದಿಂದ ಎಲ್ಲವನ್ನು ಗಮನಿಸಬಹುದು ಎಂದು ಸಚಿವರು ಹೇಳಿದರು.

Latest Videos
Follow Us:
Download App:
  • android
  • ios