ಕೊಡಗು[ಜು. 22]  ಕೊಡಗು ಜಿಲ್ಲೆಯಾದ್ಯಂತ  ಮತ್ತೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ  ಜುಲೈ 22 ರಿಂದ 24 ರವರೆಗೆ ಕೊಡಗಿನಲ್ಲಿ ರೆಡ್ ಅಲರ್ಟ್  ಘೋಷಣೆ ಮಾಡಿದೆ.

ಕೊಡಗಿನ ಮಹಾ ಪ್ರವಾಹಕ್ಕೆ ಕಾರಣ ಪತ್ತೆ

ಮುಂದಿನ ದಿನಗಳಲ್ಲಿ 204.4 ಮಿಮೀ ಮಳೆ ಬೀಳುವ ಸಾಧ್ಯತೆ ಇದೆ. ಸಾರ್ವಜನಿಕರು, ಪ್ರವಾಸಿಗರು ಎಚ್ಚರದಿಂದ ಇರಬೇಕುಎಂದು ತಿಳಿಸಲಾಗಿದೆ.  ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಸೂಚನೆ. ಆರೆಂಜ್ ಅಲರ್ಟ್ ನಡುವೆ ಇದೀಗ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪ್ರಾಕೃತಿಕ ವಿಕೋಪ ಸಮಸ್ಯೆಗಳಿಗೆ ಸಹಾಯವಾಣಿ ಟೋಲ್ ಫ್ರೀ  08272 - 221077 ಸಂಪರ್ಕ ಮಾಡಲು ಕೇಳಿಕೊಳ್ಳಲಾಗಿದೆ.

ಕಳೆದ ವರ್ಷ ಕೊಡಗಿನಲ್ಲಾಗಿದ್ದ ಭೀಕರ ಪ್ರವಾಹ ಅನೇಕ ಜನರ ಬದುಕನ್ನು ಕಸಿದುಕೊಂಡಿತ್ತು. ಇಡೀ ರಾಜ್ಯವೇ ಕೊಡಗು ಜನರ  ನೆರವಿಗೆ ನಿಂತಿತ್ತು.