ನನಗೆ ಮನೆಯಿಂದ ಹೊರಬರಲು ಭಯ : ರಮೇಶ್‌ಕುಮಾರ್
ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮಿತಿ ಮೀರುತ್ತಿದೆ. ಸೋಂಕಿತರ ಸಂಖ್ಯೆ, ಕೊರೋನಾಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ನನಗೂ ಭಯವಾಗಲು ಶುರುವಾಗಿದೆ. ಮೊದಲ ಅಲೆಯಲ್ಲಿ ಯಾವುದೇ ಆತಂಕ ಇರಲಿಲಲ್ಲ. ಈಗ ಆತಂಕ ಕಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಹೇಳಿದ್ದಾರೆ.
ಕೋಲಾರ (ಏ.22): ಕೊರೋನಾ ಸೋಂಕಿನ ವೇಗವನ್ನು ನೋಡಿದರೆ ನನಗೂ ಭಯ ಎನಿಸಿದೆ ಎಂದು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಆತಂಕ ವ್ಯಕ್ತಪಡಿಸಿದರು.
ಮೊದಲ ಹಂತದ ಕೊರೋನಾ ಸೋಂಕು ಬಂದಾಗ ನನಗೆ ಭಯವೇ ಇರಲಿಲ್ಲ, ನಾನೂ ಕೂಡಾ ಮಾಸ್ಕ್ ಹಾಕಿರಲಿಲ್ಲ. ಆದರೆ ಈ ಬಾರಿ ನಾನು ಮನೆಯಿಂದ ಹೊರಗೆ ಬರಲು ಭಯವಾಗುತ್ತದೆ, ಮನೆಯಲ್ಲಿಯೇ ಇದ್ದೇನೆ, ನಾನೂ ಕೂಡ ಹೆದರಿದ್ದೇನೆ ಎಂದರು.
ಇದೆಲ್ಲಾ ಸರಿಯಲ್ಲ ಎಂದು ಅಸಮಾಧಾನಗೊಂಡ ರಮೇಶ್ ಕುಮಾರ್
ಇಡೀ ಸಮಾಜಕ್ಕೆ ಹೆದರಿಕೆ ಆಗಿದೆ, ಜನತೆ ಸರ್ಕಾರದ ಗೈಡ್ ಲೈನ್ ಪ್ರಕಾರ ನಡೆದುಕೊಳ್ಳಬೇಕು. ಮನುಷ್ಯನ ಬದುಕು ಉಳಿಯಬೇಕು ಎಂಬ ಪ್ರಜ್ಞೆ ಎಲ್ಲರಿಗೂ ಇರಬೇಕು ಎಂದರು.
ಕಂಟೈನ್‌ಮೆಂಟ್ ಝೋನ್‌ನ ವ್ಯಕ್ತಿಗಳು ಸಾಮಾನ್ಯವಾಗಿ ಓಡಾಡುವುದರ ಕುರಿತು ಬೇಸರ ವ್ಯಕ್ತಪಡಿಸಿದ ಅವರು ಬದುಕು ಉಳಿಯಬೇಕಿದೆ ದಯಮಾಡಿ ಭಯದಿಂದ ಇರಬೇಕಿದೆ. ಈ ಕಷ್ಟಇಡೀ ದೇಶಕ್ಕೆ ಬಂದಿದೆ, ನಾವೆಲ್ಲರು ಸಣ್ಣತನ ಬಿಟ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ ಎಂದು ಹೇಳಿದರು.