ಜಿಲ್ಲೆಗೊಂದು ಸಚಿವ ಸ್ಥಾನ ನೀಡುವಂತೆ ದಾವಣಗೆರೆಯ ಐದೂ ಜನ ಶಾಸಕರು ಮುಖ್ಯಮಂತ್ರಿಗೆ ಮನವಿ ಯಾರಿಗೇ ಸ್ಥಾನ ಕೊಟ್ಟರೂ ಸಂತೋಷ ಎನ್ನುತ್ತಿದ್ದಾರೆ ಶಾಸಕರು ನಾನು ಲಾಬಿ ಮಾಡುತ್ತಿಲ್ಲ ಎಂದ ಸಚಿವ ಶಾಸಕ ರೇಣುಕಾಚಾರ್ಯ 

ದಾವಣಗೆರೆ (ಆ.02): ಜಿಲ್ಲೆಗೊಂದು ಸಚಿವ ಸ್ಥಾನ ನೀಡುವಂತೆ ದಾವಣಗೆರೆಯ ಐದೂ ಜನ ಶಾಸಕರು ಮುಖ್ಯಮಂತ್ರಿಗೆ ಮನವಿ ಮಾಡಿದ್ದು, ಯಾರಿಗೇ ಸ್ಥಾನ ಕೊಟ್ಟರೂ ಸಂತೋಷ. 

ಮಂತ್ರಿಗಿರಿಗೆ ನಾನು ದೆಹಲಿಗೆ ಹೋಗಿ ಲಾಬಿ ಮಾಡಿಲ್ಲ. ಅತಿವೃಷ್ಟಿಯಿಂದ ಹಾನಿಗೀಡಾದ ಜನರಿಗೆ ಧೈರ್ಯ ತುಂಬಲು ಕ್ಷೇತ್ರಕ್ಕೆ ಮರಳಿದ್ದೇನೆ ಎಂದು ಶಾಸಕ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. 

ಬಿಜೆಪಿಯ ಮತ್ತೋರ್ವ MLAಗೆ ಸಿಡಿ ಭೀತಿ: ಕೋರ್ಟ್‌ನಿಂದ ತಡೆಯಾಜ್ಞೆ

ಹೊನ್ನಾಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಕ್ಷೇತ್ರದ ಜನರ ಹಿತ ನನಗೆ ಮುಖ್ಯ. ಅತಿವೃಷ್ಟಿಯಿಂದಾಗಿ ಹಾನಿಗೀಡಾದ ಸ್ಥಳ ವೀಕ್ಷಣೆ, ಜನರಿಗೆ ಧೈರ್ಯ ತುಂಬಲು ಕ್ಷೇತ್ರಕ್ಕೆ ಮರಳಿದ್ದೇನೆ ಎಂದರು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಹೈಕಮಾಂಡ್‌ ನನಗೆ ಸಚಿವ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ. ನಮ್ಮ ಜಿಲ್ಲೆಗೊಂದು ಸಚಿವ ಸ್ಥಾನ ನೀಡುವಂತೆ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸೇರಿ ಹಿರಿಯ ನಾಯಕರಿಗೆ ನಾವು ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.