ಗೋಕಾಕ್‌ (ಸೆ.21): ಸಚಿವ ಸ್ಥಾನ ಆಕಾಂಕ್ಷಿಯಾದ ಎಲ್ಲರಿಗೂ ಸಚಿವ ಸ್ಥಾನ ಸಿಗಲಿ ಹಾಗೂ ಉಮೇಶ್‌ ಕತ್ತಿಯವರು ನನ್ನ ಹಳೆಯ ಗೆಳೆಯ. ಅವರಿಗೆ ಸಚಿವ ಸ್ಥಾನ ಸಿಕ್ಕರೆ ನಾನು ಖುಷಿಪಡುತ್ತೇನೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು. 

ಬೆಳಗಾವಿ ಜಿಲ್ಲೆಯ ಗೋಕಾಕ್‌ ನಗರದ ಅಡಿಬಟ್ಟಿಕಾಲೋನಿಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗಿದ್ದು ಮಹದಾಯಿ ವಿಷಯ ಕುರಿತು ಚರ್ಚಿಸಲೆಂದು.

 ಸಚಿವನಾದ ಮೇಲೆ ಹೈಕಮಾಂಡ್‌ ನಾಯಕರ ಭೇಟಿ ಆಗಿರಲಿಲ್ಲ, ಅವರಿಗೆ ಧನ್ಯವಾದ ತಿಳಿಸಲು ಹೊಗಿದ್ದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ದೇವೇಂದ್ರ ಫಡ್ನವೀಸ್‌ ಪಾತ್ರ ಪ್ರಮುಖ. ಹೀಗಾಗಿ ದೆಹಲಿಯಿಂದ ವಾಪಾಸ್ಸಾಗುವಾಗ ಮುಂಬೈನಲ್ಲಿ ಫಡ್ನವೀಸ್‌ ಭೇಟಿ ಮಾಡಿರುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ ಸಂಪುಟ ವಿಸ್ತರಣೆ ಚರ್ಚೆಗಳು ಜೋರಾಗಿವೆ. ಇದೇ ವೇಳೆ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.