ಮೈಸೂರು (ನ.02): ನಾನೂ ಸಿಎಂ ಸ್ಥಾನದ ಆಕಾಂಕ್ಷಿ. ನಾನೂ ಸಿಎಂ ಆಗಬೇಕು ಎಂಬುದು ನನ್ನ ಆಸೆ. ಹಾಗಂತ ಅದು ಈಡೇರಲೇಬೇಕು ಅಂತ ಏನಿಲ್ಲ ಎಂದು ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌  ಹೇಳಿ​ದ​ರು. 

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂಬ ಜಮೀರ್‌ ಅಹಮ್ಮದ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಮೀರ್‌ಗೆ ಪಕ್ಷದ ಸಿದ್ಧಾಂತ ಗೊತ್ತಿಲ್ಲ. 

ಪಕ್ಷ ಅಧಿಕಾರಕ್ಕೆ ಬರಲು ನಾವು ಶ್ರಮಿಸಬೇಕು. ಆಗ ಯಾರು ಸಿಎಂ ಆಗುತ್ತಾರೆ, ಯಾರು ಆಗಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ಜಮೀರ್‌ ಹೇಳಿದಂತೆ ಆಗುವುದಿಲ್ಲ ಎಂದರು. ನಾನು ಸಿಎಂ ಆಗುವ ಅರ್ಹತೆ ಇಟ್ಟುಕೊಂಡಿದ್ದೇನೆ. ಜನರಿಂದ ಆಯ್ಕೆಯಾದವರು ಸಿಎಂ ಆಗುವ ಬಯಕೆ ಇಟ್ಟುಕೊಳ್ಳಬಾರದು ಅಂತ ಏನಿಲ್ಲ ಎಂದರು.

ಮೋಸದ ವಿರುದ್ಧ ಜನ ಮತ ಹಾಕುತ್ತಾರೆ: ಡಿ.ಕೆ.ಸುರೇಶ್‌ ...

ಆರ್‌.ಆರ್‌.ನಗರ ಮತ್ತು ಶಿರಾ ಕ್ಷೇತ್ರ ಉಪ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಮುಖ್ಯವಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಗುರಿ ಎಂದರು.