ರಾಜ್ಯ ರಾಜಕೀಯದಲ್ಲಿ ಅನಿವಾರ್ಯ ಪ್ರಸಂಗಗಳು ಎದುರಾಗುತ್ತಿವೆ : ಬಿಜೆಪಿ ಶಾಸಕ
ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ರಾಜ್ಯ ರಾಜಕೀಯದಲ್ಲಿ ಅನಿವಾರ್ಯ ರೀತಿಯ ಪ್ರಸಂಗಗಳು ಎದುರಾಗುತ್ತಿವೆ ಎಂದು ಬಿಜೆಪಿ ಶಾಸಕರೋರ್ವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಶಿವಮೊಗ್ಗ [ಫೆ.08]: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿ 10 ಜನ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ ಇವರು ಬಿಜೆಪಿ ಬಂದಿದ್ದರಿಂದಲೇ ಸರ್ಕಾರ ರಚನೆ ಸಾಧ್ಯವಾಗಿದ್ದು, ಅವರಿಗೆ ಸಚಿವ ಸ್ಥಾನ ನೀಡಿದ್ದರ ಬಗ್ಗೆ ಬೇಸರ ಇಲ್ಲ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ನನ್ನಂತಹ ಹಿರಿಯರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಎಂದು ನನ್ನ ಒತ್ತಡ ಇದೆ. ಇದು ಪಕ್ಷದ ಹಿರಿಯರಿಗೆ ಮನವರಿಕೆ ಆಗಿದೆ. ಮಾರ್ಚ್ ನಲ್ಲಿ ಮತ್ತೊಮ್ಮೆ ಸಂಪುಟ ವಿಸ್ತರಣೆ ಮಾಡಿ ಈ ವೇಳೆ ಅವಕಾಶ ಮಾಡಿಕೊಡುವಂತೆ ಒತ್ತಡ ಹೇರಿದ್ದೇನೆ ಎಂದರು.
ಹೆಚ್ಚಾಯ್ತು ಆಕಾಂಕ್ಷಿಗಳ ಸಂಖ್ಯೆ : ನನ್ನನ್ನೂ ಮಂತ್ರಿ ಮಾಡಿ ಎಂದ ಜ್ಞಾನೇಂದ್ರ...
ರಾಜ್ಯ ರಾಜಕೀಯದಲ್ಲಿ ಅನಿವಾರ್ಯ ಪ್ರಸಂಗಗಳು ಬರುತ್ತಿವೆ. ಸರ್ಕಾರ ಉತ್ತಮವಾಗಿ ನಡೆಯಬೇಕಿದೆ. ಯಡಿಯೂರಪ್ಪನವರು ನಿರಾತಂಕವಾಗಿ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ಮಾಡ ಬೇಕು ಎಂದು ನನ್ನ ಆಸೆಯಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಜೋಡೆತ್ತುಗಳ ಕೋಟೆಯಲ್ಲಿ ಯೋಗೇಶ್ವರ್ ತಂತ್ರ ...
ಸಿಎಂ ಯಡಿಯೂರಪ್ಪ ಅವರಿಗೆ ನನ್ನ ಬಗ್ಗೆ ಗೌರವ, ಪ್ರೀತಿ ಇದೆ. ಅನಿವಾರ್ಯ ಪರಿಸ್ಥಿತಿ ಇದೇ ಎಂದಿದ್ದು, ಸಚಿವ ಸ್ಥಾನಕ್ಕೆ ಕಾಯಲು ಹೇಳಿದ್ದಾರೆ. ಬಿಜೆಪಿ ಪಕ್ಷದಲ್ಲಿ ತ್ಯಾಗ , ಬಲಿದಾನ ಇದ್ದದ್ದೆ ಎಂದು ಜ್ಞಾನೇಂದ್ರ ಹೇಳಿದರು.