Asianet Suvarna News Asianet Suvarna News

ಕಾಯಿಲೆ, ಬಂಧುಗಳ ಸಾವು ಆದರಷ್ಟೇ ಪೊಲೀಸರಿಗೆ ರಜೆ..!

ವಿವಾದಕ್ಕೆ ತಿರುಗಿದ ಆಗ್ನೇಯ ಡಿಸಿಪಿ ಬಾಬಾ ‘ರಜೆ’ ಸುತ್ತೋಲೆ, ಇದಕ್ಕೆ ಸಾರ್ವಜನಿಕರು, ಪೊಲೀಸ್‌ ವಲಯದಲ್ಲಿ ತೀವ್ರ ಟೀಕೆ

Illness Death of Relative Gives Leave to the Police Says South East Division DCP CK Baba grg
Author
First Published Nov 3, 2022, 4:30 AM IST

ಬೆಂಗಳೂರು(ನ.03): ತಮ್ಮ ವಿಭಾಗದ ಪೊಲೀಸರಿಗೆ ಗಂಭೀರ ಸ್ವರೂಪದ ಖಾಯಿಲೆ ಹಾಗೂ ಕುಟುಂಬ ಸದಸ್ಯರು ಮೃತಪಟ್ಟರೆ ಮಾತ್ರ ರಜೆ ಮಂಜೂರಾತಿಗೆ ಪರಿಗಣಿಸಲಾಗುತ್ತದೆ ಎಂಬ ಆಗ್ನೇಯ ವಿಭಾಗದ ಡಿಸಿಪಿ ಡಾ. ಸಿ.ಕೆ.ಬಾಬಾ ಅವರ ವಿವಾದಾತ್ಮಕ ಸುತ್ತೋಲೆಗೆ ಸಾರ್ವಜನಿಕ ಹಾಗೂ ಪೊಲೀಸ್‌ ವಲಯದಲ್ಲಿ ಟೀಕೆಗಳು ವ್ಯಕ್ತವಾಗಿವೆ.

ಈ ಟೀಕೆ ಬೆನ್ನಲೆಯಲ್ಲಿ ಎಚ್ಚೆತ್ತ ಡಿಸಿಪಿ ಬಾಬಾ ಅವರು, ಜ್ಞಾಪನವನ್ನು (ಸುತ್ತೋಲೆ) ತಪ್ಪಾಗಿ ಅರ್ಥೈಸಿಕೊಂಡು ಗೊಂದಲ ಮೂಡಿದೆ. ಪ್ರಸಕ್ತ ಕನ್ನಡ ರಾಜ್ಯೋತ್ಸವ ನಿಮಿತ್ತ ಅತಿ ಸೂಕ್ಷ್ಮ ಬಂದೋಬಸ್‌್ತಗಳು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾರಣಕ್ಕೆ ಠಾಣಾಧಿಕಾರಿಗಳು ದೀರ್ಘಕಾಲೀನ ರಜೆ ಹೋಗುವುದನ್ನು ತಾತ್ಕಾಲಿಕವಾಗಿ ಮುಂದೂಡುವ ಉದ್ದೇಶದಿಂದ ಜ್ಞಾಪನಾ ಹೊರಡಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ಕಿಡ್ನಾಪ್‌ ಆದ 12 ದಿನದ ಮಗುವಿಗೆ ಎದೆಹಾಲು ಕುಡಿಸಿ ರಕ್ಷಿಸಿದ ಪೊಲೀಸ್‌

ಕಾನ್‌ಸ್ಟೇಬಲ್‌ನಿಂದ ಇನ್‌ಸ್ಪೆಕ್ಟರ್‌ವರೆಗೆ ಅಧಿಕಾರಿ ಮತ್ತು ಸಿಬ್ಬಂದಿ ಬೇರೆ ಬೇರೆ ಕಾರಣಗಳಿಂದ ರಜೆ ಪಡೆಯುತ್ತಿದ್ದಾರೆ. ಇದರಿಂದ ಠಾಣೆ ಮತ್ತು ಕಚೇರಿಗೆ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಇನ್ಮುಂದೆ ಗಂಭೀರ ಸ್ವರೂಪದ ಖಾಯಿಲೆಯಿಂದ ಬಳಲುತ್ತಿದ್ದರೆ ಹಾಗೂ ಮನೆಯಲ್ಲಿ ಯಾರಾದರೂ ಮೃತಪಟ್ಟಲ್ಲಿ ಮಾತ್ರ ರಜೆ ಮೇಲೆ ತೆರಳಲು ಸೂಚಿಸಲಾಗಿದೆ. ಪದೇ ಪದೇ ಯಾವುದೇ ಸಕಾರಣವಿಲ್ಲದೆ ರಜೆಯ ಮೇಲೆ ತೆರಳಿದಲ್ಲಿ ಅಂತಹವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಅ.28ರಂದು ಡಿಸಿಪಿ ಬಾಬಾ ಸುತ್ತೋಲೆ ಹೊರಡಿಸಿದ್ದರು.
 

Follow Us:
Download App:
  • android
  • ios