ಇನ್ನೊಬ್ಬಳ ಸಂಘಕ್ಕೆ ಬಿದ್ದ ಗಂಡ ಗರ್ಭಿಣಿಯಾಗಿದ್ದ ಹೆಂಡಿತಿಯನ್ನೇ ಕೊಂದು ಹಾಕಿದ್ದಾನೆ. ಕೊಂದು ಆತ್ಮಹತ್ಯೆಯ ನಾಟಕವಾಡಿದ್ದಾನೆ
ಮೈಸೂರು(ಫೆ.17) : ಪರ ಸ್ತ್ರೀ ವ್ಯಾಮೋಹದಿಂದ ಗರ್ಭಿಣಿ ಪತ್ನಿ ಮೇಲೆ ಪತಿರಾಯ ಹಲ್ಲೆ ನಡೆಸಿ ವೇಲ್‌ನಿಂದ ಕುತ್ತಿದೆ ಬಿಗಿದು ಕೊಲೆ ಮಾಡಿರುವ ಘಟನೆ ಮೈಸೂರಿನ ಚಿನ್ನಗಿರಿಕೊಪ್ಪಲಿನಲ್ಲಿ ನಡೆದಿದೆ.
ಚಿನ್ನಗಿರಿಕೊಪ್ಪಲು ನಿವಾಸಿ ರಾಘವೇಂದ್ರ ಎಂಬಾತನೇ ಪತ್ನಿ ಕೀರ್ತನಾ (20) ಎಂಬವರನ್ನು ಹತ್ಯೆ ಮಾಡಿದವನು. ಮೂಲತಃ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಶಾಗ್ಯ ಗ್ರಾಮದ ಕೀರ್ತನಾ ಮತ್ತು ಚಿನ್ನಗಿರಿಕೊಪ್ಪಲಿನ ರಾಘವೇಂದ್ರ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಮಹಿಳೆ ಸ್ನಾನ ಮಾಡುವಾಗ ವೀಡಿಯೋ ಮಾಡಿದ : ರೋಗಿ ನೋಡಲು ಬಂದು ಮಾಡಿದ್ದೇ ಬೇರೆ ...
ಕೀರ್ತನಾ ಗರ್ಭಿಣಿಯಾಗಿದ್ದರು. ಆದರೆ, ರಾಘವೇಂದ್ರಗೆ ಚಿನ್ನಗಿರಿಕೊಪ್ಪಲಿನ ಮಹಿಳೆಯೊಬ್ಬರೊಂದಿಗೆ ಅಕ್ರಮ ಸಂಬಂಧವಿದ್ದು, ಇದರಿಂದ ಪತ್ನಿ ಕೀರ್ತನಾಗೆ ಕಿರುಕುಳ ನೀಡುತ್ತಿದ್ದ. ಪ್ರಿಯತಮೆಯ ಕುಮ್ಮಕ್ಕಿನಿಂದ ಪತ್ನಿ ಕೀರ್ತನಾಗೆ ಹೊಡೆದು, ವೇಲಿನಿಂದ ಮನೆಯಲ್ಲಿ ನೇಣು ಬಿಗಿದಿದ್ದಾನೆ.
ಬಳಿಕ ಅಕ್ಕಪಕ್ಕದ ಮನೆಯವರಿಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿರುವುದಾಗಿ ಕೀರ್ತನಾ ಪೋಷಕರು ದೂರು ನೀಡಿದ್ದಾರೆ. ಈ ಸಂಬಂಧ ಅಶೋಕಪುರಂ ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
