Asianet Suvarna News Asianet Suvarna News

ಲಾಕ್‌ಡೌನ್‌ ಮಧ್ಯೆಯೂ ಅಕ್ರಮ ಮರಳುಗಾರಿಕೆ: ತಹಸೀಲ್ದಾರ್‌ ಕೊಲೆಗೆ ಯತ್ನ

ನದಿ ತೀರದಲ್ಲಿ ಅಕ್ರಮವಾಗಿ ಮರುಳು ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತೆರಳಿದ ಅಥಣಿ ತಹಸೀಲ್ದಾರ್‌ ದುಂಡ್ಡಪ್ಪ ಕೋಮಾರ| ಅಕ್ರಮ ಮರಳು ತುಂಬಿದ ಟ್ರ್ಯಾಕ್ಟರ್‌ ತಹಸೀಲ್ದಾರ್‌ ವಾಹನಕ್ಕೆ ಡಿಕ್ಕಿ ಹೊಡೆಯಲು ಯತ್ನ|  ಪ್ರಾಣಾಪಾಯದಿಂದ ಪಾರಾದ ತಹಸೀಲ್ದಾರ್‌ ದುಂಡ್ಡಪ್ಪ ಕೋಮಾರ|

Illegal sanding Team Attempt to Tahashildar Murder in Athani in Belagavi district
Author
Bengaluru, First Published Apr 30, 2020, 10:53 AM IST

ಅಥಣಿ(ಏ.30):  ಲಾಕ್‌ಡೌನ್‌ ಮಧ್ಯೆಯೂ ನದಿಯಲ್ಲಿ ಅಕ್ರಮ ಮರಳುಗಾರಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್‌ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ವಾಹನಕ್ಕೆ ಅಕ್ರಮ ಮರಳುಕೋರರು ಟ್ರ್ಯಾಕ್ಟರ್‌ ಹಾಯಿಸಿ ಅವರನ್ನು ಕೊಲೆ ಮಾಡಲೆತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರೂರ ಅಗ್ರಹಣಿ ಬಳಿ ಸೋಮವಾರ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ.

ಬಾಳು ಹಜಾರೆ ವಿರುದ್ಧ ತಹಸೀಲ್ದಾರ್‌ ದುಂಡಪ್ಪ ಕೋಮಾರ ಅವರ ಕೊಲೆ ಯತ್ನ ಮತ್ತು ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ ಮಾಡಿರುವ ಕಾನೂನು ಅಡಿಯಲ್ಲಿ ದೂರು ದಾಖಲಾಗಿದೆ. ಘಟನೆ ವೇಳೆ ಇವರು ಪರಾರಿಯಾಗಿದ್ದು ಇವರ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.

ಶತಮಾನದ ಹಿಂದೆಯೇ ಸ್ಪ್ಯಾನಿಸ್‌ಫ್ಲ್ಯೂಗೆ ಅಥಣಿಯಲ್ಲಿ ಲಾಕ್‌ಡೌನ್‌!

ಅಥಣಿ ತಹಸೀಲ್ದಾರ್‌ ದುಂಡ್ಡಪ್ಪ ಕೋಮಾರ ಅವರು ತಾಲೂಕಿನ ಶಿರೂರ ಅಗ್ರಹಣಿ ಬಳಿ ನದಿ ತೀರದಲ್ಲಿ ಅಕ್ರಮವಾಗಿ ಮರುಳು ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತೆರಳುತ್ತಿದ್ದರು. ಇವರ ವಾಹನ ಗಮನಿಸಿದ ಅಕ್ರಮ ಮರಳು ತುಂಬಿದ ಟ್ರ್ಯಾಕ್ಟರ್‌ ಇವರ ವಾಹನಕ್ಕೆ ಡಿಕ್ಕಿ ಹೊಡೆಲು ಪ್ರಯತ್ನ ಮಾಡಿದ್ದಾರೆ. ಅದೃಷ್ಟವಶಾತ್‌ ಟ್ರ್ಯಾಕ್ಟರ್‌ ನೇರವಾಗಿ ಡಿಕ್ಕಿ ಹೊಡೆಯದೆ ತಹಸೀಲ್ದಾರ್‌ ವಾಹನದ ಬದಿಗೆ ಡಿಕ್ಕಿ ಹೊಡೆದಿದೆ. ಇದರಿಂದ ತಹಸೀಲ್ದಾರ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ತಹಸೀಲ್ದಾರ್‌ ವಾಹನ ಚಾಲಕ ಅನಿಲ ಮಲ್ಲಪ್ಪ ಗಸ್ತಿಗೆ ಗಂಭೀರ ಗಾಯಗಳಾಗಿ ಅಥಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನಾ ತಡೆಗಟ್ಟುವುದಕ್ಕೆ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿರುವ ಪೊಲೀಸರು ಈ ಕಡೆ ಲಕ್ಷ ವಹಿಸುವುದು ಕಡಿಮೆ ಎಂದು ತಿಳಿದು ದಂಧೆಕೋರರು ಇದನ್ನೇ ಬಂಡವಾಳ ಮಾಡಿಕೊಂಡು ಮರಳು ದಂಧೆ ನಡೆಸಿದ್ದಾರೆ. ಈ ಘಟನೆ ಕಂದಾಯ ಇಲಾಖೆ ಸಿಬ್ಬಂದಿಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.ಆದರೆ, ಇಷ್ಟೆಲ್ಲ ನಡೆದರೂ ಉಸ್ತುವಾರಿ ನಡೆಸಬೇಕಾಗಿರುವ ಗಣಿ ಮತ್ತು ಭೂಗರ್ಭ ಇಲಾಖೆ ಲೋಕೋಪಯೋಗಿ ಇಲಾಖೆಯವರು ಮಾತ್ರ ಮಹಾಮೌನ ತಾಳಿದ್ದಾರೆ. ದೂರ ಕೊಟ್ಟಿದ್ದಾರೆ.ಪ್ರಕರಣ ಅಥಣಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಘಟನೆ ನಡೆದದ್ದು ಸತ್ಯ. ಸ್ಪಲ್ಪ ನಮ್ಮ ವಾಹನ ಚಾಲಕನಿಗೆ ಗಾಯ ಆಗಿದೆ. ನಾನೇ ಖುದ್ದಾಗಿ ಕೊಲೆಗೆ ಯತ್ನ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಯಡಿ ಅಥಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದೇನೆ ಎಂದು ಅಥಣಿ ತಹಸೀಲ್ದಾರ್‌ ದುಂಡಪ್ಪ ಕೋಮಾರ ಅವರು ಹೇಳಿದ್ದಾರೆ. ಆದರೆ, ತಹಸೀಲ್ದಾರ್‌ ವಾಹನ ಚಾಲಕ ಅನಿಲ ಮಲ್ಲಪ್ಪ ಗಸ್ತಿಗೆ ಗಂಭೀರ ಗಾಯಗಳಾಗಿ ಅಥಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 

Follow Us:
Download App:
  • android
  • ios