Asianet Suvarna News Asianet Suvarna News

ಯಾದಗಿರಿ: ಕೋಹಿನೂರ್‌ ಸಿಕ್ಕ ಕೊಳ್ಳೂರಿಗೆ ಮರಳು ಗಣಿಗಾರಿಕೆ ಕಂಟಕ..!

ಸರ್ವೆ ನಂಬರ್‌ 337 ಹಾಗೂ 337ರಲ್ಲಿ ಸುಮಾರು 8 ಎಕರೆಯಷ್ಟು ಪ್ರದೇಶದಲ್ಲಿ ವಿಶ್ವ ಪ್ರಸಿದ್ಧ ಕೋಹಿನೂರ್‌ ವಜ್ರ ಸಿಕ್ಕಿದ್ದು, ಈ ಜಾಗವನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಯ್ದಿರಿಸಲಾಗಿದೆ ಎಂದು ಪಹಣಿ ದಾಖಲೆಗಳಲ್ಲಿ ಜಿಲ್ಲಾಡಳಿತ ಗುರುತಿಸಿದೆ. ಆದರೀಗ, ಈ ಜಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆಗಾಗಿನ ಚಟುವಟಿಕೆಗಳು ಸದ್ದಿಲ್ಲದೆ ಶುರುವಾಗಿವೆ.

Illegal Sand Mining in Krishna River Basin in Yadgir grg
Author
First Published Jan 12, 2024, 12:23 PM IST | Last Updated Jan 12, 2024, 12:23 PM IST

ಆನಂದ್ ಎಂ. ಸೌದಿ

ಯಾದಗಿರಿ(ಜ.12):  ಬ್ರಿಟನ್ ರಾಣಿ ಕಿರೀಟದಲ್ಲಿರುವ, ವಿಶ್ವ ಪ್ರಸಿದ್ಧ ಕೋಹಿನೂರ್‌ ವಜ್ರ ದೊರಕಿದ ಸ್ಥಳ ಖ್ಯಾತಿಯ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಗ್ರಾಮದ ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆಯ ಚಟುವಟಿಕೆಗಳು ನಡೆಯುತ್ತಿದೆ. ಇಲ್ಲಿನ ಸರ್ವೆ ನಂಬರ್‌ 337 ಹಾಗೂ 337ರಲ್ಲಿ ಸುಮಾರು 8 ಎಕರೆಯಷ್ಟು ಪ್ರದೇಶದಲ್ಲಿ ವಿಶ್ವ ಪ್ರಸಿದ್ಧ ಕೋಹಿನೂರ್‌ ವಜ್ರ ಸಿಕ್ಕಿದ್ದು, ಈ ಜಾಗವನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಯ್ದಿರಿಸಲಾಗಿದೆ ಎಂದು ಪಹಣಿ ದಾಖಲೆಗಳಲ್ಲಿ ಜಿಲ್ಲಾಡಳಿತ ಗುರುತಿಸಿದೆ. ಆದರೀಗ, ಈ ಜಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆಗಾಗಿನ ಚಟುವಟಿಕೆಗಳು ಸದ್ದಿಲ್ಲದೆ ಶುರುವಾಗಿವೆ.

ಮರಳು ಗಣಿಗಾರಿಕೆಗೆ ಇಲ್ಲಿ ಜಿಲ್ಲಾಡಳಿತ ನಿಷೇಧ ಹೇರಿದೆಯಾದರೂ 60/40 ಲಾಭದ ಹೊಂದಾಣಿಕೆ ಆಧಾರದ ಮೇಲೆ ಇಲ್ಲಿ (ಅ)ವ್ಯವಹಾರ ಕುದುರಿಸುವ ಪ್ರಯತ್ನಕ್ಕೆ ದಂಧೆಕೋರರು ಮುಂದಾಗಿದ್ದಾರೆನ್ನಲಾಗಿದೆ. ಹೀಗಾಗಿ ಕೃಷ್ಣಾ ನದಿಯೊಡಲಲ್ಲಿ ಟಿಪ್ಪರ್‌ಗಳ ಆರ್ಭಟ ಜೋರಾಗಿಯೇ ಕೇಳಿಬರುತ್ತಿದೆ.

ಈಡಿಗ ಸಮಾವೇಶಕ್ಕೆ ಸಚಿವ ಮಧು ಬಂಗಾರಪ್ಪ ಹಣ ಪಡೆದಿದ್ದಾರೆ: ಪ್ರಣವಾನಂದ ಶ್ರೀ

ಕೃಷ್ಣೆಯೊಡಲಲ್ಲೇ ಅಕ್ರಮ ಗಣಿಗಾರಿಕೆ:

ಸರ್ಕಾರದ ಟೆಂಡರ್‌ ಇಲ್ಲದಿದ್ದರೂ ಬೇರೆಡೆಯ ಪರ್ಮಿಟ್ ತೋರಿಸಿ ಇಲ್ಲಿನ ಟೊಣ್ಣೂರು ಭಾಗದಲ್ಲಿ ಅಕ್ರಮ ಮರಳು ದಂಧೆ ನಡೆಸಲಾಗುತ್ತಿದೆ. ಇದಕ್ಕೆಂದೇ ನದಿಗುಂಟ ಸಾಗಲು ಸುಮಾರು 35 ಲಕ್ಷ ರು. ವೆಚ್ಚದಲ್ಲಿ ಮಣ್ಣಿನ ರಸ್ತೆಯನ್ನೂ ನಿರ್ಮಾಣ ಮಾಡಲಾಗಿದೆ. ಅಕ್ರಮದ ಬಗ್ಗೆ ಅನೇಕ ದೂರುಗಳು ಬಂದಿವೆಯಾದರೂ ರಾಜಕೀಯ ಪ್ರಭಾವಿಗಳೇ ಇಂಥ ದಂಧೆಯ ಹಿಂದಿರುವುದರಿಂದ ಅಧಿಕಾರಿಗಳು ಮೌನಕ್ಕೆ ಶರಣಾಗುತ್ತಿದ್ದಾರೆ ಎಂಬ ಆರೋಪಗಳಿವೆ.

ದಿನವೊಂದಕ್ಕೆ 200 ರಿಂದ 250 ಟಿಪ್ಪರ್‌ಗಳಷ್ಟು ಮರಳನ್ನು ಇಲ್ಲಿಂದ ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೆ ಕಳುಹಿಸಲಾಗುತ್ತದೆ. ಒಂದು ಟಿಪ್ಪರ್‌ ಮರಳಿಗೆ 40 ರಿಂದ 50 ಸಾವಿರ ರು. ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ.
ಕೊಳ್ಳೂರಿನ ಕೃಷ್ಣಾ ನದಿಯಲ್ಲಿ ಕೊಹಿನೂರ್‌ ವಜ್ರ ದೊರಕಿದ ಇತಿಹಾಸವಿದೆ. ಇಲ್ಲಿ ಮರಳು ಗಣಿಗಾರಿಕೆಗೆ ನಿಷೇಧವಿದೆ. ಅಕ್ರಮ ನಡೆದರೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಶಹಾಪುರದ ಹಿರಿಯ ಇತಿಹಾಸತಜ್ಞರು,
ಭಾಸ್ಕರರಾವ್‌ ಮುಡಬೂಳ್‌ ತಿಳಿಸಿದ್ದಾರೆ.

ಯಾದಗಿರಿ: ನೂರಾರು ವರ್ಷ ಹಳೆಯ ಖಬರಸ್ಥಾನ ಧ್ವಂಸ! ಹೂಳ್ಬೇಡಿ ಎಂದು ಎಚ್ಚರಿಕೆ!

ಬ್ರಿಟಿಷ್ ಅಧಿಕಾರಿ, ಇತಿಹಾಸತಜ್ಞ ರಾಬರ್ಟ್‌ ಸೆವೆಲ್ (1845-1925) ವಿಜಯನಗರ ಸಾಮ್ರಾಜ್ಯದ ಗತವೈಭವದ ಬಗ್ಗೆ ಬರೆದಿರುವ "ಎ ಫಾರಗಟನ್ ಎಂಪಾಯರ್- ವಿಜಯನಗರ" ಎಂಬ ಕೃತಿಯಲ್ಲಿ ಕೊಳ್ಳೂರಿನ ಕೋಹಿನೂರ್‌ ವಜ್ರದ ಬಗ್ಗೆ ಉಲ್ಲೇಖವಿದೆ.

756 ಕ್ಯಾರೆಟ್‌ ತೂಕದ, ಕೋಹ್‌-ಇ-ನೂರ್ ವಜ್ರವು ಕೊಳ್ಳೂರಿನ ಕೃಷ್ಣಾ ನದಿಯಲ್ಲಿ ಸಿಕ್ಕಿದ್ದು, ಇದನ್ನು ಮೀರ್ ಜುಮಲಾ ಎಂಬ ಗಣಿ ಉದ್ಯಮಿ, ದೆಹಲಿ ಸುಲ್ತಾನ ಶಹಾಜಹಾನ್ ಗೆ ಉಡುಗೊರೆಯಾಗಿ ನೀಡಿದ್ದ ಎಂದು ಉಲ್ಲೇಖವಾಗಿದೆ. ಸದ್ಯ, ಇದು ಬ್ರಿಟಿನ್‌ ರಾಣಿಯ ಕಿರೀಟದಲ್ಲಿದೆ.

Latest Videos
Follow Us:
Download App:
  • android
  • ios