Asianet Suvarna News Asianet Suvarna News

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ, ತನಿಖಾ ಸಮಿತಿ ಪರಿಶೀಲನೆ

ದಾವಣಗೆರೆ ವಿವಿಯಲ್ಲಿ  ಮತ್ತೊಮ್ಮೆ ಅಕ್ರಮದ ಆರೋಪ ಕೇಳಿಬಂದಿದೆ. ಅಲ್ಲಿನ ಸಿಂಡಿಕೇಟ್ ಸದಸ್ಯರೇ ಅಕ್ರಮದ ವಿರುದ್ಧ ಸರ್ಕಾರಕ್ಕೆ ದೂರು ನೀಡಿದ್ದಾರೆ.

Illegal recruitment and bribe allegation against Davangere University gow
Author
First Published Jan 24, 2023, 4:38 PM IST

ದಾವಣಗೆರೆ (ಜ.24): ದಾವಣಗೆರೆ ವಿವಿಯಲ್ಲಿ  ಮತ್ತೊಮ್ಮೆ ಅಕ್ರಮದ ಆರೋಪ ಕೇಳಿಬಂದಿದೆ. ಅಲ್ಲಿನ ಸಿಂಡಿಕೇಟ್ ಸದಸ್ಯರೇ ಅಕ್ರಮದ ವಿರುದ್ಧ ಸರ್ಕಾರಕ್ಕೆ ದೂರು ನೀಡಿದ್ದಾರೆ. ತೋಳಹುಣಸೆಯಲ್ಲಿರುವ ದಾವಣಗೆರೆ   ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ, ಹಣ ದುರುಪಯೋಗ ಆರೋಪ ಕೇಳಿ ಬಂದಿತ್ತು,  ಇದರ ಸಂಬಂಧ ವಿಚಾರಣೆ ನಡೆಸಲು ಬೆಂಗಳೂರಿನಿಂದ  ತನಿಖಾ ಸಮಿತಿ ವಿವಿಗೆ ಆಗಮಿಸಿದೆ.

ನಿನ್ನೆ ಇಡೀ  ದಿನ ವಿವಿ ಸಿಬ್ಬಂದಿಯಿಂದ ಅಕ್ರಮದ ಬಗ್ಗೆ  ಮಾಹಿತಿ ಸಂಗ್ರಹಿಸಿದೆ .ಈ ತನಿಖೆ ಸಮಿತಿಯ ಅಧ್ಯಕ್ಷೆಯಾಗಿ ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಸ್ನೇಹಲ್ ಸುಧಾಕರ ಲೋಖಂಡೆ ಮತ್ತು ಸದಸ್ಯೆ ಮೈಸೂರು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಡಾ. ಸಂಗೀತಾ ಗಜಾನನ ಭಟ್ ನೇತೃತ್ವದ ಸಮಿತಿ ವಿವಿಗೆ ಭೇಟಿ ನೀಡಿ ವಿಚಾರಣೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಕ್ರಮ ನಡೆದಿದೆ ಎಂದು ದೂರು ನೀಡಿದ್ದ ಅಂದಿನ ವಿವಿಯ ಸಿಂಡಿಕೇಟ್ ಸದಸ್ಯರಿಂದಲೂ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿದರು ಎಂದು ತಿಳಿದುಬಂದಿದೆ.

ಲಂಡನ್‌ನಲ್ಲಿ ಕನ್ನಡ ಧ್ವಜ ಹಿಡಿದು ಪದವಿ ಪಡೆದ ಬೀದರ್‌ ಹುಡುಗ..!

ಸಿಂಡಿಕೇಟ್ ಗಮನಕ್ಕೆ ತರದೇ ಅಕ್ರಮ ನೇಮಕಾತಿಗೆ ಮುಂದಾದ ವಿವಿ: ಈ ಹಿಂದೆ ಸಿಂಡಿಕೇಟ್ ಗಮನಕ್ಕೆ ತರದೆ ಉನ್ನತ ಶಿಕ್ಷಣ ಮತ್ತು ಹಣಕಾಸು ಇಲಾಖೆಯ ಒಪ್ಪಿಗೆ ಇಲ್ಲದೆ ಇಬ್ಬರು ಗುತ್ತಿಗೆ ನೌಕರರನ್ನು ಕಾಯಂ ಮಾಡಲಾಗಿತ್ತು.  ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸದೆ 10 ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಹೊಸದಾಗಿ ಅಧಿಸೂಚನೆ ಹೊರಡಿಸಲಾಗಿತ್ತು ಎಂಬುದು ಮತ್ತೊಂದು ಆರೋಪಕ್ಕು  ವಿವಿಯ ಸಿಬ್ಬಂದಿಯಿಂದ ಸ್ಪಷ್ಟನೆ ಕೇಳಲಾಗಿದೆ.

ಸರ್ಕಾರದ ಅನುಮತಿ ಇಲ್ಲದ ಆರ್ಕಿಡ್‌ ಶಾಲೆ: ಸಿಬಿಎಸ್‌ಇ ಹೆಸರಲ್ಲಿ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಶಾಲೆ

ಇದಲ್ಲದೆ ಕುಲಪತಿಗಳ ಶೋಧನಾ ಸಮಿತಿಯ ಒಂದು ದಿನದ ಸಭೆಗಾಗಿ ಶೇ 8.6 ಲಕ್ಷ ಈ ಹೆಚ್ಚುವರಿ ಖರ್ಚನ್ನು ಮಾಡಲಾಗಿತ್ತು ಎಂಬ ವಿಚಾರ ಬಹಿರಂಗವಾಗಿದೆ. ಇನ್ನು ಈ 8.06 ಲಕ್ಷ ಖರ್ಚು  ಮಾಡಿರುವ ವಿಚಾರವನ್ನು ಸಿಂಡಿಕೇಟ್ ಗಮನಕ್ಕೆ ತಂದಿರಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ. ಸಿಂಡಿಕೇಟ್‌ನ ಒಪ್ಪಿಗೆ ಪಡೆಯದೆ ನ್ಯಾಕ್ ಮತ್ತು ಘಟಿಕೋತ್ಸವ ಸಂಬಂಧ ಅಂದಾಜು 2 ಕೋಟಿ ವೆಚ್ಚ  ಮಾಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ಎಲ್ಲಾ ಆರೋಪಗಳ ಬಗ್ಗೆ ಮಾಹಿತಿ ಕಲೆ‌ಹಾಕಿರುವ ತನಿಖಾ ಸಮಿತಿಯ  ಸದಸ್ಯರು, ಈ ಮಾಹಿತಿಯ ವರದಿಯನ್ನು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಲಿದ್ದಾರೆ ಎಂದು ವಿವಿಯ ಮೂಲಗಳು ತಿಳಿಸಿವೆ.

Follow Us:
Download App:
  • android
  • ios