Asianet Suvarna News Asianet Suvarna News

ಅಕ್ರಮ ಲೈಟ್ ಫಿಶಿಂಗ್ : 9 ಬೋಟ್ ಪೊಲೀಸರ ವಶಕ್ಕೆ

ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಬೋಟುಗಳನ್ನು ಕರಾವಳಿ ಕಾವಲು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಲೈಟ್ ಫಿಶಿಂಗ್ ನಡೆಸುತ್ತಿದ್ದ ವೇಳೆ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗಿದೆ. 

Illegal Fishing in Karwar 9 Boat Seized
Author
Bengaluru, First Published Jan 19, 2020, 12:03 PM IST
  • Facebook
  • Twitter
  • Whatsapp

ಕಾರವಾರ [ಜ.19]: ಅಕ್ರಮವಾಗಿ ಲೈಟ್ ಫಿಶಿಂಗ್ ನಡೆಸುತ್ತಿದ್ದ ಹೊರ ರಾಜ್ಯದ 9 ಬೋಟ್‌ಗಳನ್ನು ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ತಾಲೂಕಿನ ಮುದಗಾ ಹಾಗೂ ಕೋಡಾರ ಸಮುದ್ರ ತೀರದಲ್ಲಿ ಶುಕ್ರವಾರ ತಡರಾತ್ರಿ ಅಕ್ರಮವಾಗಿ ಲೈಟ್ ಫಿಶಿಂಗ್ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸರು ಬೋಟ್ ವಶಕ್ಕೆ ಪಡೆದು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. 

ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!...

ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಗೋವಾ ರಾಜ್ಯದ ನೋಂದಣಿ ಹೊಂದಿದ 6 ಬೋಟ್‌ಗಳಲ್ಲಿ ಎಲ್‌ಇಡಿ ಬಲ್ಬ್ ಪತ್ತೆಯಾಗಿವೆ. ಒಟ್ಟು 23 ಬಲ್ಬ್‌ಗಳನ್ನು ವಶಕ್ಕೆ ಪಡೆದುಕೊಂಡಿರುವ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

Follow Us:
Download App:
  • android
  • ios