ಚಿತ್ರದುರ್ಗ[ಸೆ. 08]  ನಗರದ ಲಕ್ಷ್ಮಿ ಬಜಾರ್ ಬೃದಾವನ ಲಾಡ್ಜ್ ನಲ್ಲಿ ಮಕ್ಕಳನ್ನ ಮಲಗಿಸಿ ಮಹಿಳೆಯನ್ನು ಕೊಲೆ ಮಾಡಿ ನಂತರ ವ್ಯಕ್ತಿಯೊಬ್ಬ ತಾನು ನೇಣಿಗೆ ಶರಣಾಗಿದ್ದಾನೆ.

ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಅನೈತಿಕ ಸಂಬಂಧದ ಹಿನ್ನಲೆ ಪತಿಯನ್ನ ಬಿಟ್ಟು ಪ್ರಿಯಕರನ ಜೊತೆ ಮಹಿಳೆ ಬಂದಿದ್ದಳು ಎನ್ನಲಾಗಿದೆ.  ಬಿಜಾಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಕಣುಬೂರು ಗ್ರಾಮದ  ಪವನ್ ಕುಮಾರ್   (28), ಬಾಗಲಕೋಟೆ ಜಿಲ್ಲೆ ಮುದೋಳ ತಾಲ್ಲೂಕಿನ ಚಿಕ್ಕೂರು ಗ್ರಾಮದ
ರೇಖಾ [ಸುಮಂಗಲಾ (30)] ಎಂದು ಗುರುತಿಸಲಾಗಿದೆ.

ಗಣಪತಿ ಎತ್ತರ: ಪೇಚಿಗೆ ಸಿಲುಕಿದ್ದ ಡಿಸಿ ಬಚಾವ್‌..!

ಪತ್ನಿ ಸುಮಂಗಲಾ ಕಾಣೆಯಾಗಿರುವ ಕುರಿತು ಪತಿ ಕೃಷ್ಣಪ್ಪ ಬಾಗಲಕೋಟೆ ಜಿಲ್ಲೆ ಲೋಕಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 4 ವರ್ಷದ ರಾಹುಲ್, 2ವರ್ಷದ ಸ್ಪಂದನ ಅವರನ್ನು ರೂಮಿನಲ್ಲಿ ಮಲಗಿಸಿದ ಬಳಿಕ ಮಹಿಳೆ ಕೊಲೆ ಮಾಡಿ ಪವನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.