Asianet Suvarna News Asianet Suvarna News

ಪಂಪ್‌ಸೆಟ್‌ಗೆ ಮೀಟರ್‌ ಹಾಕಿದ್ರೆ ಸಿಎಂ ಕುರ್ಚಿ ಕಾಲು ಮುರಿತೀವಿ; ಬಡಗಲಪುರ ನಾಗೇಂದ್ರ

  • ಸಿಎಂ ಕುರ್ಚಿ ಕಾಲು ಮುರಿತೀವಿ: ಬಡಗಲಪುರ ನಾಗೇಂದ್ರ
  • ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಿದರೆ ಅಧಿಕಾರ ಕನಸು
  • ರೈತರ ಹಕ್ಕೊತ್ತಾಯಗಳ ಜಾರಿಗೆ ಬೃಹತ್‌ ಸಮಾವೇಶ
If once while  meter put the farmers pumpset the CM's chair leg will break says nagendra rav
Author
First Published Sep 20, 2022, 1:40 PM IST

ಮಂಡ್ಯ (ಸೆ.20):  ಮಂಡ್ಯಕೃಷಿ ಪಂಪ್‌ಸೆಟ್‌ಗ​ಳಿಗೆ ವಿ​ದ್ಯುತ್‌ ಮೀಟರ್‌ ಅ​ಳ​ವ​ಡಿ​ಸಲು ಬಂದರೆ ಮು​ಖ್ಯ​ಮಂತ್ರಿ​ಗಳ ಕುರ್ಚಿ ಕಾಲು ಮುರಿಯುತ್ತೇವೆ ಎಂದು ರೈತ ಸಂಘದ ರಾ​ಜ್ಯಾ​ಧ್ಯಕ್ಷ ಬ​ಡ​ಗ​ಲ​ಪುರ ನಾ​ಗೇಂದ್ರ ಗು​ಡು​ಗಿ​ದರು. ನ​ಗ​ರದ ಸಿ​ಲ್ವರ್‌ ಜ್ಯೂ​ಬಿಲಿ ಪಾರ್ಕಿನಲ್ಲಿ ಸೋಮವಾರ ರೈ​ತರ ಹಕ್ಕೊತ್ತಾಯಗಳ ಜಾರಿಗಾಗಿ ಆಯೋಜಿಸಿದ್ದ ಬೃ​ಹತ್‌ ಸ​ಮಾ​ವೇ​ಶ​ದಲ್ಲಿ ಭಾ​ಗ​ವ​ಹಿಸಿ ಮಾ​ತ​ನಾ​ಡಿ, ರೈತರ ಸಹವಾಸಕ್ಕೆ ಬರಬೇಡಿ. ಅನ್ನದಾತರನ್ನು ಕೆಣಕುವ ಪ್ರಯತ್ನ ಮಾಡಿದರೆ ಬಿಜೆಪಿ ಪಾಲಿಗೆ ಇನ್ನು ಮುಂದೆ ಅಧಿಕಾರ ಕನಸಾಗಲಿದೆ ಎಂದು ಎಚ್ಚರಿಕೆ ನೀಡಿದರು.

Mysuru: ಸೆ.19 ರಂದು ಮಂಡ್ಯದಲ್ಲಿ ಬೃಹತ್‌ ರೈತ ಸಮಾವೇಶ: ಬಡಗಲಪುರ ನಾಗೇಂದ್ರ

ವಿ​ದ್ಯುತ್ ಉ​ತ್ಪಾ​ದನೆ, ಪ್ರಸರಣೆ ಹಾಗೂ ವಿತರಣೆಯ ಹೊ​ಣೆ​ಗ​ಳನ್ನು ಅ​ದಾನಿ, ಅಂಬಾ​ನಿಗೆ ಕೊ​ಡಲು ಮುಂದಾ​ಗಿ​ರುವ ಕೇಂದ್ರ ಸರ್ಕಾರ​ದಿಂದ ರೈ​ತರು ಯಾವ ಸೌ​ಲ​ಭ್ಯ​ವನ್ನು ನಿ​ರೀ​ಕ್ಷಿ​ಸಲು ಸಾಧ್ಯವಿಲ್ಲ. 1983ರಲ್ಲಿ ಗುಂಡೂ​ರಾವ್‌ ಅ​ವ​ರೊಂದಿಗೆ ರೈತ ಮು​ಖಂಡ​ರಾದ ಎಂ.ಡಿ.ಸುಂದ​ರೇಶÜನ್‌ ಹಾಗೂ ಪ್ರೊ.ವಿ.ನಂಜುಂಡ​ಸ್ವಾಮಿ ಮಾ​ತ​ನಾ​ಡಿದ ಪ​ರಿ​ಣಾಮ 5 ಎಚ್‌.ಪಿ.​ವ​ರೆಗೆ ಉ​ಚಿತ ವಿ​ದ್ಯುತ್‌ ನೀ​ಡಲು ಒ​ಪ್ಪಿ​ದ್ದರು. ಆ​ ನಂತ​ರ​ದಲ್ಲಿ ಕೆ.​ಎಸ್‌.ಪು​ಟ್ಟ​ಣ್ಣ​ಯ್ಯ​ನ​ವರ ನೇ​ತೃ​ತ್ವ​ದಲ್ಲಿ ನ​ಡೆದ ಹೋ​ರಾ​ಟ​ದಿಂದ 10 ಎಚ್‌ಪಿವ​ರೆ​ಗಿನ ಬ​ಳ​ಕೆಗೆ ಮೀ​ಟರ್‌ ಇ​ರು​ವು​ದಿಲ್ಲ ಎಂದಾಯಿತು. ಆದರೆ, ಈ​ಗಿನ ಸರ್ಕಾರ ರೈ​ತ​ರ ಮೇಲೆ ಬರೆ ಎ​ಳೆ​ಯಲು ಹೊ​ರ​ಟಿದ್ದು, ಮೀ​ಟರ್‌ ಅ​ಳ​ವ​ಡಿಸಿ ರೈ​ತ​ರೆಲ್ಲರನ್ನು ಒ​ಕ್ಕ​ಲೆ​ಬ್ಬಿ​ಸುವ ಪ್ರ​ಯತ್ನ ನ​ಡೆ​ಸಿದೆ ಎಂದು ಆ​ಕ್ರೋಶ ವ್ಯ​ಕ್ತ​ಪ​ಡಿ​ಸಿ​ದರು.

ಈ​ಗಾ​ಗಲೇ ಭೂ​ಸು​ಧಾ​ರಣಾ ಕಾ​ಯ್ದೆಗೆ ತಂದ ತಿ​ದ್ದು​ಪ​ಡಿ​ಗ​ಳಿಂದಾಗಿ ಶೇ.47ರಷ್ಟುಕೃಷಿ ಭೂಮಿ ಮಾ​ರಾಟ ಹೆ​ಚ್ಚ​ಳ​ವಾ​ಗಿದೆ. ಬಡ ರೈ​ತರು, ಸಣ್ಣ ಹಿ​ಡು​ವ​ಳಿ​ದಾ​ರರು ಕೃಷಿ ಭೂ​ಮಿ​ಯನ್ನು ಬಿ​ಡಿ​ಗಾ​ಸಿಗೆ ಮಾ​ರಾಟ ಮಾ​ಡಿ​ಕೊಂಡು ನೆ​ಲೆ ಕ​ಳೆ​ದು​ಕೊ​ಳ್ಳು​ತ್ತಿ​ದ್ದಾರೆ. ದೇ​ಶಕ್ಕೆ ಅನ್ನ ಕೊ​ಡುವ ರೈ​ತನ ಪ​ರಿ​ಸ್ಥಿತಿ ಎ​ಲ್ಲಿಗೆ ಬಂದು ನಿಂತಿದೆ ಎಂಬು​ದನ್ನು ಅ​ರಿ​ತು​ಕೊ​ಳ್ಳ​ಬೇ​ಕಿದೆ ಎಂ​ದರು.

ಇನ್ನು ಮುಂದೆ ಜಿ​ಲ್ಲೆ​ಯಲ್ಲಿ ಯುವ ಶಕ್ತಿ ಉ​ದ​ಯಿ​ಸುವ ಎಲ್ಲಾ ಲ​ಕ್ಷ​ಣ​ಗ​ಳಿದ್ದು, ರೈತ ಸಂಘ​ದಿಂದ ದರ್ಶನ್‌ ಪು​ಟ್ಟ​ಣ್ಣ​ಯ್ಯ, ಎಸ್‌.ಸಿ.​ಮ​ಧು​ಚಂದನ್‌, ಪ್ರ​ಸನ್ನ ಎನ್‌.ಗೌ​ಡ​ರಂತಹ ಯು​ವ ನಾ​ಯ​ಕರ ನಾ​ಯ​ಕತ್ವ ಹೊಸ ನಡೆ ನು​ಡಿಯ ರಾ​ಜ​ಕಾ​ರ​ಣ​ವನ್ನು ಹು​ಟ್ಟು​ಹಾ​ಕ​ಲಿದೆ ಎಂದು ವಿ​ಶ್ವಾಸ ವ್ಯ​ಕ್ತ​ಪ​ಡಿ​ಸಿ​ದರು.

ರೈ​ತ ಸಂಘದ ವ​ರಿಷ್ಠೆ, ನಾ​ಯಕಿ ಸು​ನೀತಾ ಪು​ಟ್ಟ​ಣ್ಣಯ್ಯ ಮಾ​ತ​ನಾಡಿ, ಇಂದಿನ ಸ​ಮಾ​ವೇ​ಶ​ದಲ್ಲಿ ರೈತ ಕಾ​ರ‍್ಯ​ಕರ್ತರ ಒ​ಗ್ಗಟ್ಟು ನೋಡಿ ನ​ನಗೆ ಮ​ನಃ ತುಂಬಿ​ಬಂದಿ​ದೆ. ರೈ​ತರು ಹ​ಸಿರು ಟ​ವಲ್‌ ಬೀ​ಸು​ತ್ತಿ​ದ್ದರೆ ನ​ಮ್ಮ​ವರು (​ಕೆ.​ಎಸ್‌.ಪು​ಟ್ಟ​ಣ್ಣ​ಯ್ಯ) ಇಲ್ಲೇ ಎಲ್ಲೋ ಇ​ದ್ದಾ​ರೆಂಬ ಭಾ​ವನೆ ಮೂ​ಡು​ತ್ತಿದೆ ಎಂದು ಭಾ​ವು​ಕ​ರಾ​ದ​ರು.

ಟನ್‌ ಕ​ಬ್ಬಿಗೆ 4500 ರು. ಅ​ಗ​ತ್ಯ​ವಿದೆ. ಸ​ರಿ​ಯಾಗಿ ವಿ​ದ್ಯು​ತ್ತನ್ನೇ ನೀ​ಡ​ದಿ​ದ್ದರೂ ಕೃಷಿ ಪಂಪ್‌ಸೆಟ್‌​ಗ​ಳಿಗೆ ಮೀ​ಟರ್‌ ಅ​ಳ​ವ​ಡಿ​ಸುವ ಕೆಲಸ ಮಾ​ಡು​ತ್ತಿ​ದ್ದಾರೆ. ಇಂತಹ ರೈತ ವಿ​ರೋಧಿ ಹೋ​ರಾ​ಟ​ಗ​ಳು ಯ​ಶಸ್ಸು ಸಾ​ಧಿ​ಸ​ಬೇ​ಕಾ​ದರೆ ರೈತ ಸಂಘ ಒ​ಗ್ಗ​ಟ್ಟಿ​ನಿಂದ ಇ​ರ​ಬೇ​ಕೆಂದು ಸ​ಲಹೆ ನೀ​ಡಿ​ದರು.

ರೈತ ಸಂಘದಿಂದ ರಾಜ್ಯ ಸರ್ಕಾರವನ್ನೆ ಬದಲಿಸುವ ಎಚ್ಚರಿಕೆ

ವೇ​ದಿ​ಕೆ​ಯ​ಲ್ಲಿ ರೈತ ಸಂಘದ ಜಿ​ಲ್ಲಾ​ಧ್ಯಕ್ಷ ಎ.​ಎಲ್‌.ಕೆಂಪೂ​ಗೌಡ, ಮು​ಖಂಡ​ರಾದ ನಂದಿನಿ ಜ​ಯರಾಂ, ವೀ​ರ​ಸಂಗಯ್ಯ, ಮ​ಲೇ​ನೂರು ಶಂಕ​ರಪ್ಪ, ಲಿಂಗ​ಪ್ಪಾಜಿ, ಪ್ರ​ಸನ್ನ ಎನ್‌.ಗೌಡ, ಮ​ಹಿ​ಳಾ​ಧ್ಯಕ್ಷೆ ನಾ​ಗ​ರತ್ನ ಪಾ​ಟೀಲ್‌, ಗೋ​ವಿಂದ​ರಾಜು, ಕೆ.​ಆರ್‌.ರ​ವೀಂದ್ರ, ಕೆ.​ಆರ್‌. ಜ​ಯರಾಂ, ಹೆ​ಬ್ಬ​ಸೂರು ಬ​ಸ​ವ​ಣ್ಣ,​ ಮಂಜುಳಾ ಅಕ್ಕಿ, ರಘು ಹಿ​ರಿ​ಸಾವೆ, ಚಿ​ಕ್ಕಾಡೆ ಹ​ರೀಶ್‌, ಮು​ನಿ​ರಾಜು, ಮಂಜು​ನಾ​ಥ​ಗೌಡ, ಅ​ರಸು, ಸಂಘದ ತಾ​ಲೂಕು ಹಾಗೂ ಹೋ​ಬಳಿ ಅ​ಧ್ಯ​ಕ್ಷರು, ಪ​ದಾ​ಧಿ​ಕಾ​ರಿ​ಗಳು ಸ​ಮಾ​ವೇ​ಶ​ದಲ್ಲಿ ಪಾ​ಲ್ಗೊಂಡಿ​ದ್ದರು.

Follow Us:
Download App:
  • android
  • ios