ಮೈಸೂರು ( ನ.04): ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವುದನ್ನು ಕೈಬಿಡಬೇಕು ಎಂದು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ನೌಕರರ ಸಂಘದ ಉಪಾಧ್ಯಕ್ಷ ಎಂ. ಮಾದಯ್ಯ ಒತ್ತಾಯಿಸಿದ್ದಾರೆ. 

ಪ್ರಜೆಗಳಿಂದ ಆಯ್ಕೆಯಾದ ವ್ಯಕ್ತಿಗಳು ಮೃತಪಟ್ಟರೆ ಉಪ ಚುನಾವಣೆ ನಡೆಸುವುದು ಸೂಕ್ತ. ಆದರೆ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ಕೈಬಿಟ್ಟು ಅಂದಿನ ಚುನಾವಣೆಯಲ್ಲಿ ಯಾರು ಎರಡನೇ ಸ್ಥಾನದಲ್ಲಿ ಇರುತ್ತಾರೋ, ಆ ವ್ಯಕ್ತಿಯನ್ನು ಪರಿಗಣಿಸಿ ಅಂತಹವರಿಗೆ ಸಾಮಾಜ ಸೇವೆ ಮಾಡಲು ಅವಕಾಶ ಕಲ್ಪಿಸಿ ಉಪ ಉಪ ಚುನಾವಣೆಯಿಂದ ಪ್ರಜೆಗಳ ಮೇಲೆ ಹಣಕಾಸು ಹೊರೆ ಹೂಡುವುದನ್ನು ತಪ್ಪಿಸಬೇಕು. ಸ್ವಾರ್ಥ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಲು ಸಂಬಂಧಿಸಿದ ಸರ್ಕಾರ ಯೋಜನೆ ರೂಪಿಸಬೇಕು ಎಂದಿದ್ದಾರೆ.

ಮುಂದೂಡಿಕೆಯಾಯ್ತು ಚುನಾವಣಾ ಫಲಿತಾಂಶದ ಡೇಟ್ : ವಿರುದ್ಧ ಅರ್ಜಿ

ಕೆಲವು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಪ್ರಜೆಗಳು ನೀಡಿದ ಸ್ಥಾನಗಳಿಗೆ ರಾಜೀನಾಮೆ ನೀಡಿ ಮತ್ತೊಂದು ಪಕ್ಷದಿಂದ ಚುನಾವಣೆಗೆ ಅವಕಾಸ ಮಾಡಿ ಸ್ಪರ್ಧೆಗೆ ಅವಕಾಶ ಕಲ್ಪಿಸಿ ಚುನಾವಣಾ ವೆಚ್ಚವನ್ನು ಪ್ರಜೆಗಳ ಮೇಲೆ ಹೇರುತ್ತಿರುವುದು ಎಷ್ಟುಸರಿ ಎಂದು ಅವರು ಪ್ರಶ್ನಿಸಿದ್ದಾರೆ.