ಕೋಲಾರ(ಅ.01): ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹ ಶಾಸಕರ ಪರವಾಗಿ ತೀರ್ಪು ಬಂದರೂ ಸಂತೋಷವೇ. ಅದಕ್ಕೆ ನಾನೇನು ಮಾಡಲಿ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ತಿಳಿಸಿದ್ದಾರೆ.

ಶ್ರೀನಿವಾಸಪುರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಭಾಧ್ಯಕ್ಷನಾಗಿ ನನ್ನ ಕೆಲಸ ಏನಿತ್ತೋ ಅದನ್ನು ಮಾಡಿ ಹೊರ ಬಂದಿದ್ದೇನೆ. ಸಭಾಧ್ಯಕ್ಷರ ಸ್ಥಾನ ಅಂದ್ರೆ ನ್ಯಾಯಾಧೀಶರ ಸ್ಥಾನದಂತೆ. ಈ ಸಂಬಂಧ ನಾನು ಮಾತನಾಡುವಂತಿಲ್ಲ, ನಿರ್ಬಂಧ ಇರುತ್ತದೆ. ಉಳಿದ ಯಾವುದಕ್ಕೂ ನಾನು ಪ್ರತಿಕ್ರಿಯೆ ನೀಡಬಾರದು, ನೀಡುವುದಿಲ್ಲ. ಉಪಚುನಾವಣೆ ಬಗ್ಗೆ ಏನೂ ಹೇಳಲ್ಲ. ಅವರಿಗೆಲ್ಲ ಒಳ್ಳೆಯದಾಗಲಿ ಎಂದರು.

ಕೋಲಾರ: Facebook ದೋಖಾ, FB ಫ್ರೆಂಡ್‌ನಿಂದ ಪಂಗನಾಮ

ನನ್ನ ಬಗ್ಗೆ ಮಾಜಿ ಕೇಂದ್ರ ಸಚಿವ ಕೆ.ಎಚ್‌. ಮುನಿಯಪ್ಪ ಏನು ಬೇಕಾದರೂ ಆರೋಪ ಮಾಡಲಿ, ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಅವರ ಸೋಲಿಗೆ ನಾನು ಹಾಗೂ ಶಾಸಕರು ಕಾರಣವೆಂದು ಹೈಕಮಾಂಡ್‌ಗೆ ದೂರು ನೀಡಿರುವ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದರು.

ಸರ್ಕಾರಿ ಶಾಲೆ ಅಂದ್ರೆ ಪಂಚ ಪ್ರಾಣ ಎಂದ ಮಾಜಿ ಸ್ಪೀಕರ್