ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ತಾರಕಕ್ಕೇರಿದೆ. ನಾಳೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಬಂದ್ ಮಾಡಿ ಒತ್ತಡ ಹೇರಲು ಚಾಮರಾಜಪೇಟೆ ನಾಗರೀಕರ ಒಕ್ಕೂಟ ಮುಂದಾಗಿದೆ. ಬಿಬಿಎಂಪಿ ಆಟದ ಮೈದಾನವನ್ನಾಗಿಯೇ ಉಳಿಸಿಕೊಳ್ಳಲು ನಾಳೆ ಚಾಮರಾಜಪೇಟೆ ಬಂದ್‌ಗೆ ನಾಗರಿಕ ಒಕ್ಕೂಟ ಕರೆ ನೀಡಿದೆ.
ಬೆಂಗಳೂರು (ಜು.12): ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ತಾರಕಕ್ಕೇರಿದೆ. ನಾಳೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಬಂದ್ ಮಾಡಿ ಒತ್ತಡ ಹೇರಲು ಚಾಮರಾಜಪೇಟೆ ನಾಗರೀಕರ ಒಕ್ಕೂಟ ಮುಂದಾಗಿದೆ. ಬಿಬಿಎಂಪಿ ಆಟದ ಮೈದಾನವನ್ನಾಗಿಯೇ ಉಳಿಸಿಕೊಳ್ಳಲು ನಾಳೆ ಚಾಮರಾಜಪೇಟೆ ಬಂದ್‌ಗೆ ನಾಗರಿಕ ಒಕ್ಕೂಟ ಕರೆ ನೀಡಿದೆ.
ಭೂ ಮಾಲಿಕತ್ವದ ವಿಚಾರವಾಗಿ ಶುರುವಾಗಿದ್ದ ಕಿತ್ತಾಟ, ಇದೀಗ ಬಂದ್‌ವರೆಗೆ ತಲುಪಿದೆ. ಇಂದು ಚಾಮರಾಜಪೇಟೆ ಕ್ಷೇತ್ರದ 7 ವಾರ್ಡ್‌ಗಳ ಬಂದ್ ನಾಗರೀಕರ ಒಕ್ಕೂಟದ ವೇದಿಕೆ ಕರೆ ಕೊಟ್ಟಿದೆ. ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ಬಂದ್‌ಗೆ ಚಾಮರಾಜಪೇಟೆ ನಾಗರೀಕರ ಒಕ್ಕೂಟದ ವೇದಿಕೆ ಕರೆ ನೀಡಿದೆ. ಅನೇಕ ಹಿಂದೂಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ 50ಕ್ಕೂ ಅಧಿಕ ಸಂಘ, ಸಂಸ್ಥೆಗಳು ಬೆಂಬಲ ಸೂಚಿಸಿವೆ. ಈ ಕುರಿತು ಜಾಗೃತಿ ಮೂಡಿಸಲು ಸೋಮವಾರ ಸಂಘಟನೆಗಳ ಸದಸ್ಯರು ಶಾಲಾ-ಕಾಲೇಜು, ಬೇಕರಿ, ಅಂಗಡಿಗಳಿಗೆ ಸೇರಿದಂತೆ ಮನೆ ಮನೆಗೆ ತೆರಳಿ 20 ಸಾವಿರಕ್ಕೂ ಅಧಿಕ ಕರಪತ್ರಗಳನ್ನ ಹಂಚಿದ್ದಾರೆ.
ಚಾಮರಾಜಪೇಟೆ ಈದ್ಗಾ ಗ್ರೌಂಡ್ ವಿವಾದ: ಬಂದ್ ಮಾಡೋದು ನಿಶ್ಚಿತ, ಜಮೀರ್‌ಗೆ ಸವಾಲ್
ಇದು ಸ್ವಯಂ ಪ್ರೇರಿತ ಹಾಗೂ ಶಾಂತಿಯುತ ಬಂದ್ ಆದ್ದರಿಂದ ನಾಳೆ ಯಾವುದೇ ರೀತಿಯ ರ್ಯಾಲಿ, ಪ್ರತಿಭಟನೆ ಇರುವುದಿಲ್ಲ. ಕೇವಲ ಒಂದು ದಿನದ ಮಟ್ಟಿಗೆ ಶಾಂತಿಯುತ ಬಂದ್ ನಡೆಸಿ, ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದೇವೆ ಎಂದು ಚಾಮರಾಜಪೇಟೆ ನಾಗರೀಕರ ಒಕ್ಕೂಟದ ರುಕ್ಮಾಂಗದ ತಿಳಿಸಿದ್ದಾರೆ. ಕೆಲವೆಡೆ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸರ್ಕಾರಿ ಶಾಲೆಗಳಿಗೂ ರಜೆ ನೀಡುವಂತೆ ಆಯೋಜಕರು ಮನವಿ ಮಾಡಲಾಗಿದೆ ಎಂದು ಮಾಜಿ ಕಾರ್ಪೋರೇಟರ್ ಬಿವಿ ಗಣೇಶ್ ತಿಳಿಸಿದ್ದಾರೆ.
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ಗಣಪತಿ ಕೂರಿಸಬಹುದಾ? ಜಮೀರ್ ಉತ್ತರಿಸಿದ್ದು ಹೀಗೆ
ಚಾಮರಾಜಪೇಟೆ ನಾಗರೀಕರ ಒಕ್ಕೂಟದ ಬೇಡಿಕೆಗಳು
- ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತು ಎಂದು ಘೋಷಿಸಬೇಕು.
- ಚಾಮರಾಜಪೇಟೆ ಮೈದಾನಕ್ಕೆ ಜಯಚಾಮರಾಜೇಂದ್ರ ಮೈದಾನ ಎಂದು ಹೆಸರಿಡಬೇಕು.
- ಮೈದಾನವನ್ನ ಆಟದ ಮೈದಾನವನ್ನಾಗಿಯೇ ಉಳಿಸಬೇಕು.
- ಯಾವುದೇ ಕಾರಣಕ್ಕೂ ವಕ್ಫ್ ಬೋರ್ಡ್‌ಗೆ ವಹಿಸಬಾರದು.
- ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ, ಕನ್ನಡ ರಾಜ್ಯೋತ್ಸವ, ಶಿವರಾತ್ರಿ, ನಾಡಹಬ್ಬ ದಸರಾ ಸೇರಿದಂತೆ ಹಿಂದೂ ಹಬ್ಬಗಳ ಆಚರಣೆಗೆ ಅನುಮತಿ ನೀಡಬೇಕು.
