Asianet Suvarna News Asianet Suvarna News

Koppal News: ಹೊನ್ನು, ಮಣ್ಣಿಗಿಂತ ಐಡಿಯಾ ಜಗತ್ತನ್ನು ಆಳುತ್ತವೆ: ಗವಿಸಿದ್ದೇಶ್ವರ ಸ್ವಾಮಿ

ಪ್ರಾಮಾಣಿಕ ಶ್ರದ್ಧೆ ಮತ್ತು ಪ್ರಯತ್ನ ಇದ್ದರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು. ಹೊನ್ನು, ಮಣ್ಣಿಗಿಂತ ಈ ಜಗತ್ತನ್ನು ಐಡಿಯಾ(ವಿಚಾರ) ಆಳುತ್ತದೆ ಎಂದು ಗವಿಸಿದ್ದೇಶ್ವರ ಸ್ವಾಮಿಗಳು ಹೇಳಿದರು.

Ideas rule the world more than gold and soil says Gavisiddeswara Swami koppal rav
Author
First Published Jan 9, 2023, 8:46 AM IST

ಕೊಪ್ಪಳ (ಜ.9) : ಪ್ರಾಮಾಣಿಕ ಶ್ರದ್ಧೆ ಮತ್ತು ಪ್ರಯತ್ನ ಇದ್ದರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು. ಹೊನ್ನು, ಮಣ್ಣಿಗಿಂತ ಈ ಜಗತ್ತನ್ನು ಐಡಿಯಾ(ವಿಚಾರ) ಆಳುತ್ತದೆ ಎಂದು ಗವಿಸಿದ್ದೇಶ್ವರ ಸ್ವಾಮಿಗಳು ಹೇಳಿದರು.

ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ(Gavisiddeshwar jatra mahotsav) ಪ್ರಯುಕ್ತ ಕೈಲಾಸಮಂಟಪದಲ್ಲಿ ಹಮ್ಮಿಕೊಂಡಿದ್ದ ಭಕ್ತ ಹಿತಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ಲಿಪ್‌ಕಾರ್ಟ್(Flipkart), ಗೂಗಲ್‌(Google), ಅಮೆಜಾನ್‌(amazon) ಹಣದಿಂದ ಹುಟ್ಟು ಹಾಕಿದ ಸಂಸ್ಥೆಗಳಲ್ಲ. ಅವುಗಳು ಐಡಿಯಾ(Idea)(ವಿಚಾರ)ದಿಂದ ಅವುಗಳನ್ನು ಹುಟ್ಟು ಹಾಕಿವೆ. ಹೀಗಾಗಿ ಇಂದಿನ ಜಗತ್ತಿನಲ್ಲಿ ನಿಮ್ಮ ಒಂದು ವಿಚಾರ ಹಾಗೂ ಚಿಂತನೆ ಜಗತ್ತನ್ನೇ ಆಳಬಹುದು ಎಂದರು. ಸಾಮಾನ್ಯನು ಸಾಧನೆ ಮಾಡುವುದಕ್ಕೆ ಸೂಕ್ತವಾದ ಕಾಲ ಇದೆ. ಆದರೆ, ಅದಕ್ಕೆ ಗಟ್ಟಿಮನಸ್ಸು ಮತ್ತು ಶ್ರದ್ಧೆ ಬಹಳ ಮುಖ್ಯ ಎಂದರು. ನೀವು ಯಾವ್ಯಾವುದನ್ನು ಪ್ರೀತಿಸುವುದನ್ನು ಬಿಡಿ, ಪುಸ್ತಕವನ್ನು ಪ್ರೀತಿಸುವುದನ್ನು ಕಲಿಯಿರಿ. ನಿಮ್ಮ ಯೋಚನೆ ಮತ್ತು ಚಿಂತನೆ ಬದಲಾಗುತ್ತಾ ಹೋಗುತ್ತದೆ.

ಕೊಪ್ಪಳ ಅಜ್ಜನ ಜಾತ್ರೆ: 8 ಲಕ್ಷ ಭಕ್ತಸಾಗರದ ನಡುವೆ ಗವಿಸಿದ್ದೇಶ್ವರ ತೇರು!

ಪಾಂಡವಪುರದ ಅಂಕೇಗೌಡರು ತಮ್ಮ ಪುತ್ರೋತ್ಸವ ಮಾಡಲಿಲ್ಲ, ಅವರು ಪುಸ್ತಕೋತ್ಸವ ಮಾಡಿದರು. ಲಕ್ಷ ಲಕ್ಷ ಪುಸ್ತಕಗಳನ್ನು ಸಂಗ್ರಹ ಮಾಡಿದ್ದಾರೆ. ಅವರನ್ನು ಕರೆಯಿಸಿರುವುದು ನಿಮ್ಮಲ್ಲಿಯೂ ಓದುವ ಅಭ್ಯಾಸ ಬೆಳೆಯಲಿ ಎನ್ನುವ ಕಾರಣಕ್ಕಾಗಿಯೇ ಅವರನ್ನು ಕರೆಸಿದ್ದೇವೆ ಎಂದರು. ನಿಮ್ಮೂರಿನ ಬಾಲಕಿ ಪವಿತ್ರಾ ಉತ್ತರ ಆಫ್ರಿಕಾದ ದೇಶದ ಮೊರ್ಯಾಕೋ ದೇಶದಲ್ಲಿ ತಮ್ಮ ವಿಚಾರಗಳನ್ನು ಬಿತ್ತಿ ಬಂದಿದ್ದಾಳೆ. ಅಂದರೆ ಆಕೆಯ ವಿಚಾರಗಳು ಎಂಥವುಗಳು ಇರಬಹುದು ಎನ್ನುವುದನ್ನು ನೀವು ಚಿಂತನೆ ಮಾಡಬೇಕು.

ಬಾಬರಅಲಿ ಎನ್ನುವ ಯುವಕ ಪುಟ್ಟಹಳ್ಳಿಯಲ್ಲಿ ಬಾಲಕನಾಗಿರುವಾಗಲೇ ಪಾಠ ಮಾಡುತ್ತಾ ಜಗತ್ತೇ ತನ್ನತ್ತ ನೋಡುವಂತೆ ಮಾಡಿದ ಹಿರಿಮೆ ಆತನದು. ಅಂದರೆ ನಿಮ್ಮ ಪಾಡಿಗೆ ನೀವು ಸಾಧನೆ ಮಾಡುತ್ತಾ ಇದ್ದರೆ ಜಗತ್ತು ನಿಮ್ಮತ್ತ ನೋಡುತ್ತದೆ ಎಂದರು.

ಇದು ರೈತರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಬೇಗನೆ ಸೋತ ನೋವು ಅನುಭವಿಸುತ್ತಾರೆ. ಸಂಕಟ ಎದುರಿಸುತ್ತಾರೆ. ಆದರೆ, ಮಹಾಲಿಂಗ ನಾಯಕ ಎನ್ನುವ ಸಾಮಾನ್ಯ ರೈತ ಜಲಸಂತನಾಗಿದ್ದಾನೆ ಎಂದರೆ ಆತ ಮಾಡಿದ್ದೇನು ಎಂದು ಕೇಳಿದರೆ ನಿಮಗೆ ಅಚ್ಚರಿಯಾಗುತ್ತದೆ. ತನ್ನ ಭೂಮಿಗೆ ನೀರು ತರಲು ಏಳು ಸುರಂಗ ಮಾರ್ಗಗಳನ್ನು ಮಾಡಿದ್ದಾರೆ. ಅಷ್ಟುಸಾರಿ ವಿಫಲವಾದರೂ ಬಿಡದೆ ಕೊನೆಗೂ ಸುರಂಗ ಮಾರ್ಗದ ಮೂಲಕವೇ ನೀರು ತಂದು ಜಲಸಂತನಾಗಿದ್ದಾನೆ. ಇದು ನಮ್ಮ ರೈತರಲ್ಲಿ ಪ್ರೇರಣೆಯಾಗಬೇಕು ಎಂದರು.

ಖಜ್ಜಿಡೋಣಿ ಕೃಷ್ಣಾನಂದ ಶಾಸ್ತ್ರಿಗಳು ಮಾತನಾಡಿ, ಹಸಿವು ಇದ್ದಾಗ ಮನುಷ್ಯ ಮನುಷ್ಯನಾಗಿಯೇ ಇರುತ್ತಾನೆ. ಹಸಿವು ನೀಗಿದ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾನೆ. ಹಸಿವು ನಿಗಿದ ಮೇಲೆಯೂ ನೀವು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು, ಬದುಕಿನಲ್ಲಿ ಸಾಕ್ಷಾತ್ಕಾರ ಪಡೆದುಕೊಳ್ಳಬೇಕು ಎಂದರು.

ಈಶಾ ¶ೌಂಡೇಶನ್‌(Isha Foundation) ಶ್ರೀ ಸದ್ಗುರು(Sadgur vasudev) ಮಾತನಾಡಿ, ಭಯ ಎನ್ನುವುದು ನಿಮ್ಮಲ್ಲಿಯೇ ಇದೆ. ಅದನ್ನು ನೀವು ನಿಯಂತ್ರಣದಲ್ಲಿಟ್ಟುಕೊಂಡು ಸಾಗಿದರೆ ಯಶಸ್ಸು ನಿಮ್ಮದಾಗುತ್ತದೆ. ಕೇವಲ ಊಟೋಪಚಾರಕ್ಕೆ ಸೀಮಿತವಾಗದ ಅದನ್ನು ಮೀರಿದ ಚಿಂತನೆ ಇರಬೇಕು. ಶಿವ ಬೇರೆ ಬೇರೆ ರೂಪದಲ್ಲಿದ್ದು, ಒಂದೊಂದು ಕಡೆಯೂ ಒಂದೊಂದು ರೂಪದಲ್ಲಿರುತ್ತಾನೆ, ಆರಾಧಿಸಬೇಕು ಎಂದರು.

ಕೊಪ್ಪಳದ ಗವಿಮಠ ಜ್ಞಾನದಾಸೋಹ, ಸಾಮಾಜಿಕ ಕಳಕಳಿಯ ಶಕ್ತಿ ಕೇಂದ್ರ

ರವೀಂದ್ರ ಸೊರಗಾಂವಿ ಹಾಗೂ ಸಂಗಡಿಗರ ಭಾವಲಹರಿ ಮನಮೋಹಕವಾಗಿ ಮೂಡಿ ಬಂದಿತು. ಪ್ರಕಾಶ ಹೆಮ್ಮಾಡಿ ಅವರ ಜಾದೂ ಮನೋಜ್ಞವಾಗಿ, ನೆರೆದಿದ್ದವರ ಮನಸೂರೆಗೊಂಡಿತು. ಇದಕ್ಕೂ ಮೊದಲು ಡಾ. ಮೈಸೂರು ಮಂಜುನಾಥ ಅವರ ವಯಲಿನ್‌, ಪ್ರೊ. ನೆಡ್‌ ಮೃಕಗೋವನ್‌ ಅವರ ಬಾನ್ಸುರಿ ನೆರೆದವರನ್ನು ಮೂಕವಿಸ್ಮಿರನ್ನಾಗಿ ಮಾಡಿತು. 

ಇಂದು ದಾಸೋಹದಲ್ಲಿ ಐದು ಲಕ್ಷ ಮಿರ್ಚಿ

ಗವಿಮಠದ ಜಾತ್ರೆಯ ಮಹಾದಾಸೋಹದಲ್ಲಿ ಜ. 9ರಂದು ಬೆಳಗ್ಗೆ 4 ಗಂಟೆಯಿಂದ ತಡರಾತ್ರಿ 2 ಗಂಟೆಯವರೆಗೂ ಪ್ರಸಾದ ಸ್ವೀಕರಿಸುವ ಭಕ್ತರು ಬಿಸಿ ಬಿಸಿ ರುಚಿ ಮಿರ್ಚಿ ಸವಿಯಬಹುದು. ಅದಕ್ಕಾಗಿ ಬರೋಬ್ಬರಿ ಐದು ಲಕ್ಷ ಮಿರ್ಚಿ ಸಿದ್ಧವಾಗುತ್ತಿವೆ.

ಸೋಮವಾರ ಸಹ ಜಾತ್ರಾ ಮಹೋತ್ಸವಕ್ಕೆ ಅಪಾರ ಸಂಖ್ಯೆಯ ಭಕ್ತರು ಮಠಕ್ಕೆ ಆಗಮಿಸುತ್ತಾರೆ. ಅಲ್ಲದೆ ಇಂದು ಅನೇಕ ಕಾರ್ಯಕ್ರಮ ಸಹ ಇವೆ. ಅಲ್ಲದೆ ಭಕ್ತ ಚಿಂತನ ಸಭೆ ಹಾಗೂ ಮದ್ದು ಸುಡುವುದನ್ನು ನೋಡಲು ಲಕ್ಷಾಂತರ ಜನ ಮಠಕ್ಕೆ ಆಗಮಿಸುತ್ತಾರೆ. ಬರುವ ಭಕ್ತರಿಗೆಲ್ಲಾ ಬಿಸಿ ಮಿರ್ಚಿ ಉಣಬಡಿಸಲು ಮಹಾದಾಸೋಹ ಸಿದ್ಧವಾಗಿದೆ. ಮಹಾದಾಸೋಹದ ಊಟದ ಜತೆ ಮಿರ್ಚಿ ಸವಿಯನ್ನು ಭಕ್ತರು ಸವಿಯಲಿದ್ದಾರೆ.

ಪ್ರತಿವರ್ಷ ಬರುವ ಭಕ್ತರಿಗೆ ಬಿಸಿ ಬಿಸಿ ಮಿರ್ಚಿ ಉಣಬಡಿಸುವ ಗವಿಸಿದ್ದೇಶ್ವರ ಮಹಾದಾಸೋಹ ವಿಶೇಷತೆಗೆ ಸಾಕ್ಷಿಯಾಗಿತ್ತು. ಈ ವರ್ಷವೂ ರಥೋತ್ಸವ ಮರುದಿನ ಪೂರ್ಣದಿನ ಮಹಾದಾಸೋಹದಲ್ಲಿ ಬಿಸಿ ಮಿರ್ಚಿ ನೀಡಲು ಮುಂದಾಗಿದೆ.

ಮಿರ್ಚಿ ತಯಾರಿ ಜೋರು:

ಬಿಸಿ ಬಿಸಿ ಮಿರ್ಚಿ ನೀಡಲು 25 ಕ್ವಿಂಟಲ್‌ ಹಸೆ ಕಡಲೆ ಹಿಟ್ಟು, 9 ಬ್ಯಾರೆಲ್‌ ಒಳ್ಳೆಣ್ಣೆ, 15 ಕ್ವಿಂಟಲ್‌ ಹಸಿ ಮೆಣಸಿನಕಾಯಿ, 50 ಕೆಜಿ ಅಜವಾನ, 50 ಕೆಜಿ ಸೋಡಾಪುಡಿ, 100 ಕೆಜಿ ಉಪ್ಪು ಬಳಕೆಯಾಗಲಿವೆ. 100 ಜನ ಬಾಣಸಿಗರು ಮಿರ್ಚಿ ಹಾಕಲು ಸಿದ್ಧವಾಗಿದ್ದಾರೆ. ನಾನಾ ಗ್ರಾಮದಿಂದ ನೂರಾರು ಭಕ್ತರು ಮಿರ್ಚಿ ಹಾಕಲು ಬರುತ್ತಿದ್ದಾರೆ.

ಸೋಮವಾರ ಬೆಳಗ್ಗೆ 4 ಗಂಟೆಯಿಂದ ಮಿರ್ಚಿ ಹಾಕುವ ಕಾರ್ಯ ಆರಂಭವಾಗುತ್ತದೆ. ಬರುವ ಭಕ್ತರಿಗೆ ಸುಮಾರು ಐದು ಲಕ್ಷದಷ್ಟುಮಿರ್ಚಿ ನೀಡುತ್ತೇವೆ. ರಾತ್ರಿ 2 ಗಂಟೆವರೆಗೂ ಮಿರ್ಚಿ ನೀಡಲು ನಿರ್ಧರಿಸಿದ್ದೇವೆ.

ರಮೇಶ ತುಪ್ಪದ, ಭಕ್ತ, ಕಲ್ಯಾಣ ಕರ್ನಾಟಕ ಗೆಳೆಯರ ಬಳಗ

Follow Us:
Download App:
  • android
  • ios