Asianet Suvarna News Asianet Suvarna News

ಬರ ಬಂದರೂ ಕರಾವಳಿಯ ಈ ಕೃಷಿಕಗೆ ನೀರಿನ ಬವಣೆಯಿಲ್ಲ, ಬೇಸಗೆಯಲ್ಲೂ ಬೆಳೆ ಹಚ್ಚ ಹಸಿರು!

ಬರ ಬಂದರೂ ಈ ಕೃಷಿಕಗೆ ನೀರಿನ ಬವಣೆಯಿಲ್ಲ!| ತೋಟಗಾರಿಕೆ ಇಲಾಖೆ ಸಹಾಯಧನದಲ್ಲಿ ನೀರು ಸಂಗ್ರಹಣಾ ತೊಟ್ಟಿ ನಿರ್ಮಾಣ, ಬೇಸಗೆಯಲ್ಲೂ ಬೆಳೆ ಹಚ್ಚ ಹಸಿರು| 

Idea To save Water This farmer From Mangalore Will Not suffer from Drought
Author
Bangalore, First Published Sep 12, 2019, 3:32 PM IST

ಮಂಗಳೂರು[ಸೆ.12]: ಕರಾವಳಿಯಲ್ಲಿ ಬೇಸಗೆಯಲ್ಲಿ ನೀರಿಲ್ಲದೆ ಕೃಷಿ ಬೆಳೆಗಳು ಸೊರಗುವುದು ಸರ್ವೇ ಸಾಮಾನ್ಯ. ಮಾಚ್‌ರ್‍ ದಾಟಿತೆಂದರೆ ನದಿಗಳಿಂದ ರೈತರು ನೀರೆತ್ತಲೂ ನಿಷೇಧ ಹೇರಲಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಬೇಸಗೆಯಲ್ಲಿ ನೀರಿನ ಬವಣೆ ನೀಗಿಸಲು ಸುಳ್ಯದ ರೈತರೊಬ್ಬರು ತೋಟಗಾರಿಕಾ ಇಲಾಖೆ ಸಹಾಯಧನದಲ್ಲಿ ನೀರು ಸಂಗ್ರಹಣಾ ತೊಟ್ಟಿನಿರ್ಮಿಸಿದ್ದಾರೆ. ಇದರಿಂದಾಗಿ ಬಿರು ಬೇಸಗೆಯಲ್ಲೂ ಇವರ ತೋಟ ಹಚ್ಚ ಹಸಿರು. ಈಗ ಮಳೆಗಾಲದಲ್ಲಿ ಆ ತೊಟ್ಟಿನೀರಿನಿಂದ ತುಂಬಿದ್ದು, ಮುಂದಿನ ವರ್ಷಗಳಲ್ಲಿ ಬೇಸಗೆ ಕಾಲದಲ್ಲಿ ನೀರಿನ ಬವಣೆ ನೀಗಿಸುವ ಆಶಾಭಾವನೆಯಲ್ಲಿದ್ದಾರೆ.

ಇವರು ಕೃಷ್ಣ ಭಟ್‌. ಸುಳ್ಯದ ಬಳ್ಪ ಗ್ರಾಮದವರು. ಪ್ರತಿವರ್ಷ ಬೇಸಗೆಯಲ್ಲಿ ಬೆಳೆ ಸೊರಗುವುದನ್ನು ಕಂಡ ಅವರು ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಇಲಾಖೆಯ ಸಹಾಯಧನ ಮೂಲಕ ನೀರು ಸಂಗ್ರಹಣಾ ತೊಟ್ಟಿರಚನೆ ಮಾಡಬಹುದೆಂಬ ಮಾಹಿತಿ ದೊರೆಯಿತು. ಕೂಡಲೆ ಕಾರ್ಯಪ್ರವೃತ್ತರಾದ ಕೃಷ್ಣ ಭಟ್‌, ನೀರು ಸಂಗ್ರಹಣಾ ತೊಟ್ಟಿಮಾಡಲು ತಯಾರಾದರು.

ನಯಾ ಪೈಸೆ ಖರ್ಚಿಲ್ಲದೆ ಬೋರ್‌ವೆಲ್ ರೀಚಾರ್ಜ್, ಕೃಷಿಕರೊಬ್ಬರ ಸೋಮಾರಿ ಐಡಿಯಾ ಕ್ಲಿಕ್!

ಇಲಾಖಾ ಮಾರ್ಗಸೂಚಿ ಅನ್ವಯ ಸುಮಾರು 20/20/ 3 ಮೀಟರ್‌ ಅಳತೆಯಲ್ಲಿ ಕೃಷಿ ಹೊಂಡ ಮಾಡಿ ಅದರ ಅಡಿ ಭಾಗಕ್ಕೆ ಪ್ಲಾಸ್ಟಿಕ್‌ ಹೊದಿಕೆ ಹಾಕಿ ನೀರು ಸಂಗ್ರಹಣಾ ತೊಟ್ಟಿರಚನೆ ಮಾಡಿದರು. ಇದಕ್ಕೆ ಶೇ.50ರ ಸಹಾಯಧನದಂತೆ 67,094 ರು.ಗಳನ್ನು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಸಹಾಯಧನವಾಗಿ ನೀಡಲಾಯಿತು. ಇದೀಗ ಕೃಷ್ಣ ಭಟ್ಟರ ಮೊಗದಲ್ಲಿ ಮಂದಹಾಸ ಮೂಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

‘ಸರ್ಕಾರ ನೀಡಿರುವ ಸಹಾಯಧನ ಮತ್ತು ಸ್ವಂತದ ಒಂದಿಷ್ಟುಹಣ ಖರ್ಚು ಮಾಡಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದೇನೆ. ಕಳೆದ ಬೇಸಗೆ (ಏಪ್ರಿಲ್‌-ಮೇ)ಯಲ್ಲಿ ಸುಳ್ಯ ತಾಲೂಕಿನಾದ್ಯಂತ ಬರದ ಪರಿಸ್ಥಿತಿ ಮೂಡಿದಾಗ ನೀರು ಸಂಗ್ರಹಣಾ ತೊಟ್ಟಿಯಲ್ಲಿ ಸಾಕಷ್ಟುನೀರಿನ ಲಭ್ಯತೆ ಇದ್ದ ಕಾರಣ ಬರದ ನಡುವೆಯೂ ಎರಡರಿಂದ ಮೂರು ಸಲ ತೋಟಕ್ಕೆ ನೀರು ಕೊಡಲು ಸಾಧ್ಯವಾಯಿತು. ಹಾಗಾಗಿ ಅಡಕೆ ಮತ್ತು ಕಾಳುಮೆಣಸು ತೋಟವು ಬರದ ನಡುವೆಯೇ ಹಸಿರುಮಯವಾಗಿ ಕಂಗೊಳಿಸುತ್ತಾ ಹೆಚ್ಚಿನ ಬೆಳವಣಿಗೆಯ ಆಶಾಭಾವನೆ ಮೂಡಿಸಿದೆ. ಈ ವರ್ಷ ಶೇ.30-50 ಅಧಿಕ ಇಳುವರಿ ಪಡೆಯಬಹುದೆಂಬ ಆಶಾಭಾವನೆ ಮೂಡಿದೆ’ ಎಂದು ಕೃಷ್ಣ ಭಟ್‌ ಹೇಳುತ್ತಾರೆ

Follow Us:
Download App:
  • android
  • ios