ಮಂಗಳೂರು(ಸೆ.08): ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ IAS ಸಸಿಕಾಂತ್ ಸೆಂಥಿಲ್ ಅವರು ಮಾಧ್ಯಮಗಳಿಂದ ದೂರ ಉಳಿದಿದ್ದಾರೆ.

IAS ಹುದ್ದೆಗೆ ರಾಜಿನಾಮೆ ನೀಡಿದರೂ ಅದು ಇನ್ನೂ ಅಂಗೀಕಾರಗೊಂಡಿಲ್ಲ. ಭಾರತೀಯ ಆಡಳಿತ ಸೇವೆಗಳ ನಿಯಮದಂತೆ ರಾಜಿನಾಮೆ ನೀಡಿದ ಬಳಿಕ ಅಂಗೀಕಾರಗೊಳ್ಳಲು ಕನಿಷ್ಠ 15 ದಿನಗಳ ಕಾಲಾವಕಾಶ ಇದೆ. ಈ ಮಧ್ಯೆ ಸರ್ಕಾರದ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಹಿರಿಯ ವಕೀಲರೊಬ್ಬರು ಸೆಂಥಿಲ್‌ಗೆ ಕಾನೂನು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರು: IAS ಸಸಿಕಾಂತ್ ಸೆಂಥಿಲ್ ರಾಜೀನಾಮೆ

ಇದೇ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ಸೆಂಥಿಲ್‌ ಅವರು ಮಾಧ್ಯಮ ಜೊತೆಗೆ ಮಂಗಳೂರಿನಲ್ಲಿ ಮಾತನಾಡುವ ಯೋಚನೆಯನ್ನು ಬಿಟ್ಟುಬಿಟ್ಟರು ಎಂದು ಹೇಳಲಾಗಿದೆ.

ಸೆಂಥಿಲ್‌: ಹಠದಲ್ಲಿ ಅಧಿಕಾರಿಯಾಗಿ ಈಗ ಅಧಿಕಾರ ಬಿಟ್ಟರು..!

ನನ್ನ ರಾಜಿನಾಮೆಗೆ ಕಾರಣ ಹಾಗೂ ಅದಕ್ಕೆ ನಾನು ಬದ್ಧನಾಗಿರುವ ಬಗ್ಗೆ ಈಗಾಗಲೇ ಶುಕ್ರವಾರ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದೇನೆ. ಅದರ ಹೊರತು ಬೇರೆ ಯಾವುದೇ ವಿಚಾರ ನನ್ನ ಮುಂದೆ ಇಲ್ಲ ಎಂದು ಸಸಿಕಾಂತ್‌ ಸೆಂಥಿಲ್‌ ಶನಿವಾರ ಮಾಧ್ಯಮಗಳಿಗೆ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.