Asianet Suvarna News Asianet Suvarna News

ಇನ್ನು ಒಂದೂವರೆ ವರ್ಷಕ್ಕೆ ನಿವೃತ್ತನಾಗುವೆ: ಹಾವೇರಿ ಸಂಸದ ಉದಾಸಿ

ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸದೆ ರಾಜಕೀಯದಿಂದಲೇ ನಿವೃತ್ತರಾಗಲಿದ್ದಾರಾ ಅಥವಾ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುತ್ತಾರಾ ಅಥವಾ ಸಂದರ್ಭಕ್ಕೆ ಅನುಸಾರವಾಗಿ ಈ ಮಾತು ಹೇಳಿದ್ದಾರಾ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ

I will Retire in One and Half Year says Haveri MP Shivakumar Udasi grg
Author
First Published Dec 4, 2022, 11:30 AM IST

ಹಾವೇರಿ(ಡಿ.04): ‘ನಾನು ಇನ್ನು ಒಂದೂವರೆ ವರ್ಷಕ್ಕೆ ನಿವೃತ್ತಿಯಾಗುತ್ತೇನೆ’ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದ್ದಾರೆ. ಅವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದ್ದು, ಅವರು ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸದೆ ರಾಜಕೀಯದಿಂದಲೇ ನಿವೃತ್ತರಾಗಲಿದ್ದಾರಾ ಅಥವಾ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುತ್ತಾರಾ ಅಥವಾ ಸಂದರ್ಭಕ್ಕೆ ಅನುಸಾರವಾಗಿ ಈ ಮಾತು ಹೇಳಿದ್ದಾರಾ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.

ಶನಿವಾರ ಇಲ್ಲಿ ನಡೆದ ಬ್ಯಾಂಕರ್ಸ್‌ ಸಭೆಯಲ್ಲಿ ಅವರು ಪ್ರಗತಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ, ಬ್ಯಾಂಕರ್ಸ್‌ಗಳ ಕಳಪೆ ಸಾಧನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ನಿಮಗೆ ಹೇಳಿ, ಹೇಳಿ ಸಾಕಾಗಿದೆ. ಮುಂದಿನ ತ್ರೈಮಾಸಿಕದೊಳಗಾಗಿ 10 ಗ್ರಾಮೀಣ ಶಾಖೆ ಆರಂಭಿಸುವ ಸವಾಲು ಸ್ವೀಕರಿಸಿ ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರಿಗೆ ಸೂಚಿಸಿದರು. 

Karnataka Politics: ಕಾಂಗ್ರೆಸ್‌ ಸರ್ಕಾರ ಮಾಡಿದ ಸಾಲ ಮೋದಿ ಸರ್ಕಾರ ತೀರಿಸುತ್ತಿದೆ: ಉದಾಸಿ

ಇದೇ ಸಂದರ್ಭದಲ್ಲಿ, ನಿಮ್ಮ ನಿವೃತ್ತಿಗೆ ಎಷ್ಟು ವರ್ಷವಿದೆ ಎಂದು ಪ್ರಶ್ನಿಸಿದರು. ಆಗ ಉತ್ತರಿಸಿದ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌, ಮೂರು ವರ್ಷವಿದೆ ಎಂದರು. ‘ನನ್ನ ನಿವೃತ್ತಿಗೆ ಇನ್ನು ಒಂದೂವರೆ ವರ್ಷವಿದೆ. ಪ್ರತಿ ಸಭೆಯಲ್ಲಿ ಹೇಳಿದ್ದನ್ನೇ ಹೇಳಿ ಸಾಕಾಗಿದೆ’ ಎಂದು ಉದಾಸಿ ಹೇಳಿದರು.
 

Follow Us:
Download App:
  • android
  • ios