ಕಲ್ಲೊಡ್ಡು ಯೋಜನೆಯ ಅನುಷ್ಠಾನಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿಯೇ ಯೋಜನೆ ಅನುಷ್ಢಾನ ಮಾಡಿಯೇ ಸಿದ್ಧ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಶಿಕಾರಿಪುರ ತಾಲೂಕಿಗೆ ಕುಡಿಯುವ ನೀರು ಪೂರೈಸುವ ಕಲ್ಲೊಡ್ಡು ಯೋಜನೆಯಿಂದ ಸಾಕಷ್ಟು ಜನರಿಗೆ ಪ್ರಯೋಜನವಾಗಲಿದೆಯಾದರೂ ಪರಿಹಾರ ಸಿಗುವುದಿಲ್ಲ ಎಂಬ ಕಾರಣದಿಂದ ಜನ ವಿರೋಧಿಸುತ್ತಿದ್ದಾರೆ.

ಶಿವಮೊಗ್ಗ(ಆ.01): ಶಿಕಾರಿಪುರ ತಾಲೂಕಿಗೆ ಕುಡಿಯುವ ನೀರು ಪೂರೈಸುವ ಕಲ್ಲೊಡ್ಡು ಯೋಜನೆ ಮಾಡಿಯೇ ಸಿದ್ಧವೆಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದು ಸುಮಾರು 10 ಸಾವಿರ ಜನರಿಗೆ ಉಪಯೋಗವಾಗುವಂತಹ ನೀರಾವರಿ ಯೋಜನೆ. ಇದರಿಂದ ಕೆಲವರಿಗೆ ಮಾತ್ರ ತೊಂದರೆ ಆಗಬಹುದು. ಯೋಜನೆಯಿಂದ ತೊಂದರೆಗೀಡಾದವರಿಗೆ ಖಂಡಿತಾ ಪರಿಹಾರ ಸಿಗಲಿದೆ. ಹೀಗಿದ್ದರೂ ಯೋಜನೆಯನ್ನು ಅದೇಕೆ ವಿರೋಧಿಸುತ್ತಿದ್ದಾರೆಂಬುದು ಗೊತ್ತಿಲ್ಲ ಎಂದರು.

ಕೆಲಸ ಮಾಡಿಕೊಡಲಿಲ್ಲ ಎಂದು ಕಚೇರಿ ಫೈಲ್‌ನ್ನೇ ಕದ್ದೊಯ್ದ ರೈತ..!

ಹಿರಿಯರಾದ ಕಾಗೋಡು ತಿಮ್ಮಪ್ಪನವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ ಮನವರಿಕೆ ಮಾಡಿಕೊಡಲಾಗುವುದು. ರೈತರಿಗೆ ಉಪಯೋಗವಾಗುವ ನೀರಾವರಿ ಯೋಜನೆಗಳನ್ನು ತಡೆಯುವುದರಲ್ಲಿ ಅರ್ಥವಿಲ್ಲ ಎಂದರು.

ಜಿಮ್‌ನಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ: ಕ್ಯಾಮೆರಾ ಅಳವಡಿಸಲು ಆಗ್ರಹ

ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಕುಮಾರ್‌ ಬಂಗಾರಪ್ಪ, ಹರತಾಳು ಹಾಲಪ್ಪ, ಎಸ್‌. ರುದ್ರೇಗೌಡ, ಉದ್ಯಮಿ ಡಿ.ಎಸ್‌. ಅರುಣ್‌, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಾಂತರಾಜ್‌, ಜಿಪಂ ಸಿಇಒ ವೈಶಾಲಿ, ಮತ್ತಿತರರು ಹಾಜರಿದ್ದರು.