ಅಂದು ಬೇಡವಾಗಿದ್ದವರು ಇಂದು ಬೇಕಾದ್ರಾ?: ಇನ್ನು ಯಾವತ್ತೂ ಮುಸ್ಲಿಮರಿಗೆ ದ್ರೋಹ ಮಾಡಲ್ಲ ಎಂದ ರೆಡ್ಡಿ
* ಅವತ್ತು ಹಂಗೇ ಇವತ್ತು ಹಿಂಗೇ ಯಾವುದನ್ನು ನಂಬೋದು
* ಇಫ್ತಿಯಾರ್ ಕೂಟದಲ್ಲಿ ಮುಸ್ಲಿಂ ಹಾಡಿಹೊಗಳಿದ ಸೋಮಶೇಖರ್ ರೆಡ್ಡಿ
* ಸಿಎಎ ಎನ್ಆರ್ಸಿ ಹೋರಾಟದ ವೇಳೆ ಮುಸ್ಲಿಂರ ವಿರುದ್ಧ ವಾಗ್ದಾಳಿ ಮಾಡಿದ್ರು
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬಳ್ಳಾರಿ
ಬಳ್ಳಾರಿ(ಏ.30): ಈ ರಾಜಕಾರಣಿಗಳೇ(Politicians) ಹೀಗೆ ತಮಗೆ ಹೇಗೆ ಬೇಕು ಹಾಗೇ ವೇದಿಕೆಯಲ್ಲಿ ಮಾತನಾಡ್ತಾರೆ. ನಂತರ ತಿರುಚೋ ಪ್ರಯತ್ನ ಮಾಡ್ತಾರೆ. ಆದ್ರೇ, ಕಾಲ ಬದಲಾಗಿದೆ. ಸಾಮಾಜಿಕ ಜಾಲತಾಣ ತುಂಬಾನೇ ಸ್ಟ್ರಾಂಗ್ ಆಗಿದೆ. ನೀವು ಯಾವಾಗ ಎಲ್ಲಿ ಏನೇ ಮಾತನಾಡಿದ್ರೂ ಆ ವಿಡಿಯೋ ಕ್ಲೀಪ್ ಇಟ್ಟುಕೊಂಡು ನೀವು ಮತ್ತೊಂದು ಕಡೆ ಉಲ್ಟಾ ಮಾತನಾಡಿದಾಗ ಹಳೇ ವಿಡಿಯೋ ವೈರಲ್ ಮಾಡ್ತಾರೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೇ ಶಾಸಕ ಸೋಮಶೇಖರ್ ರೆಡ್ಡಿ(Somasekhara Reddy) ಅವರು ಆಡಿದ ಒಂದೊಂದು ಮಾತು, ಇದೀಗ ಅವರಿಗೆ ಉಲ್ಟಾಆಗಿ ಪರಿಣಾಮ ಬೀರುತ್ತಿದೆಯೇ ಅನ್ನೋ ಅನುಮಾನ ಕಾಡ್ತಿದೆ.
ಅಂದು ವೀರಾವೇಶದ ಮಾತು ಇಂದು ಓಲೈಕೆ ಮಾತು
ಜನಾರ್ದನ ರೆಡ್ಡಿ(Janardhana Reddy) ಆಪ್ತ ಅಲಿಖಾನ್(Alikhan) ಇಫ್ತಿಯಾರ್(Iftar) ಕೂಟ ಆಯೋಜನೆ ಮಾಡಿದ್ರು. ಈ ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ ಮತ್ತು ಶ್ರೀರಾಮುಲು(B Sriramulu) ಸೇರಿದಂತೆ ಬಿಜೆಪಿ(BJP) ಪ್ರಮುಖರು ಭಾಗಿಯಾಗಿದ್ರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಮುಸ್ಲಿಂರ ಓಲೈಕೆಗೆ ಮುಂದಾದ ಶ್ರೀರಾಮುಲು & ರೆಡ್ಡಿ ಟೀಂ. ಇಫ್ತಿಯಾರ್ ಕೂಟದಲ್ಲಿ ಮುಸ್ಲಿಂರ ಗುಣಗಾನ ಮಾಡಿದ್ದಾರೆ.
ಪದವಿ ವಿಳಂಬದ ಬಗ್ಗೆ ಸ್ಪಷ್ಟನೆ ಕೊಟ್ಟ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ
ಮುಸ್ಲಿಂ ಸಮುದಾಯಕ್ಕಾಗಿ ಪ್ರತ್ಯೇಕ ಕಾಲೇಜು ಸ್ಥಾಪನೆ ಮಾಡುವಂತೆ ಸೋಮಶೇಖರ್ ರೆಡ್ಡಿ ವೇದಿಕೆ ಮೇಲೆ ಶ್ರೀರಾಮುಲುಗೆ ಒತ್ತಾಯ ಮಾಡಿದ್ರು. ಅಲ್ಲದೇ ಬಳ್ಳಾರಿಯಲ್ಲಿ(Ballari) ಮುಸ್ಲಿಂ ಸಮುದಾಯಕ್ಕಾಗಿ ಪ್ರತ್ಯೇಕ ಪಾಲಿಟೆಕ್ನಿಕ್, ಐಟಿಐ ಕಾಲೇಜ್, ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಬೇಕೆಂದ್ರು. ಸೋಮಶೇಖರ್ ರೆಡ್ಡಿ ಎಲ್ಲ ಮಾತಿಗೂ ತಲೆಯಾಡಿಸೋ ಮೂಲಕ ಶ್ರೀರಾಮುಲು ಸುಮ್ಮನಾದರು.
ಇನ್ನೂ ಮುಸ್ಲಿಂರಿಗೆ ದ್ರೋಹ ಮಾಡಲ್ಲ
ಇನ್ನೂ ನನ್ನ ಕೊನೆಯ ಉಸಿರು ಇರೋವರೆಗೂ ನಾನು ಮುಸ್ಲಿಂರಿಗೆ ದ್ರೋಹ ಮಾಡಲ್ಲ. ಒಂದು ವೇಳೆ ದ್ರೋಹವಾದ್ರೆ ನಾನು ಅವತ್ತೇ ರಾಜಕೀಯದಿಂದ(Politics) ಹೊರ ಹೋಗುವೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ವೇದಿಕೆ ಮೇಲೆ ವೀರಾವೇಷದ ಮಾತನಾಡಿದ್ರು. ಬಾಲ್ಯದಲ್ಲಿ ಕಲೆಗಾರ ಅಬ್ದುಲ್ ಎನ್ನುವ ನನ್ನ ಪ್ರಾಣ ಸ್ನೇಹಿತ ಇದ್ದ ಅವನ ಜೊತೆಗೆ ನಾನು ರಂಜಾನ್ ವೇಳೆ ಉಪವಾಸ ಆಚರಣೆ ಮಾಡುತ್ತಿದ್ದೇನೆಂದ ರೆಡ್ಡಿ ಎಂದು ವೇದಿಕೆಯೂದ್ದಕ್ಕೂ ಮುಸ್ಲಿಂ ಓಲೈಸೋ ರೀತಿಯಲ್ಲಿ ಮಾತನಾಡಿದ್ರು.
ಬಳ್ಳಾರಿ ಅಭಿವೃದ್ಧಿಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾದ ಸಚಿವ ರಾಮುಲು
ತಿರುಗುಬಾಣವಾದ ಹಳೇ ವಿಡಿಯೋ
ಇಫ್ತಿಯಾರ್ ಕೂಟದಲ್ಲಿ ಇಷ್ಟೊಂದು ಮಾತನಾಡಿದ ಸೋಮಶೇಖರ್ ರೆಡ್ಡಿ ಈ ಹಿಂದೆ ಎನ್ಆರ್ಸಿ(NRC) & ಸಿಎಎ(CAA) ಹೋರಾಟದ ವೇಳೆ ಮುಸ್ಲಿಂರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹಿಂದೂ ಸಂಸ್ಕೃತಿ ಗೌರವಿಸಿ ಇರೋದಾದ್ರೇ ಇರಿ ಇಲ್ಲ ಇಲ್ಲಿಂದ ಹೊರಗೆ ಹೋಗಿ ಕಾಂಗ್ರೆಸ್(Congress) ಬೇವಕೂಫ್‌ಗಳ ಮಾತಿನಿಂದ ಹೋರಾಟ ಮಾಡ್ತೀರಾ ಎನ್ನುವುದು ಸೇರಿದಂತೆ ಅಸಂವಿಧಾನಿಕ ಪದ ಬಳಕೆ ಮಾಡಿದ್ರು. ಈ ಹಿನ್ನಲೆ ಪ್ರಕರಣ ಕೂಡ ದಾಖಲಾಗಿತ್ತು. ಇದೀಗ ತೇಪೆ ಹಚ್ಚೋ ಕೆಲಸಕ್ಕೆ ಮುಂದಾಗಿದ್ದು, ನಾನು ಆವೇಶದಲ್ಲಿ ಮಾತನಾಡಿ ಬಿಡ್ತಿನಿ, ಅದು ನನಗೆ ಗೊತ್ತಾಗಲ್ಲ ಎಂದು ಇಫ್ತಿಯಾರ್ ಕೂಟದಲ್ಲಿ ಹೇಳಿದ್ದಾರೆ. ಅಲ್ಲದೇ ನನ್ನ ಮನಸ್ಸಿನಲ್ಲಿ ಯಾವುದು ಇಟ್ಟುಕೊಳ್ಳಲ್ಲ, ತಕ್ಷಣ ನಾನು ಅದನ್ನು ಮರೆತುಬಿಡುವೆ ಎನ್ನುವ ಮೂಲಕ ಒಲೈಕೆ ರಾಜಕಾರಣಕ್ಕೆ ಮುಂದಾಗಿದ್ದಾರೆ.
ವಿಡಿಯೋ ವೈರಲ್ ಶ್ರೀರಾಮುಲುಗೆ ಎಫೆಕ್ಟ್
ಶ್ರೀರಾಮುಲು ಇದೀಗ ಮತ್ತೊಮ್ಮೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋ ವಿಚಾರದಲ್ಲಿ ಇದ್ದಾರೆ. ಇಲ್ಲಿ ಅಲ್ಪ ಸಂಖ್ಯಾತರ ಮತಗಳು ನಿರ್ಣಾಯಕವಾಗಿದೆ. ಹೀಗಾಗಿ ಕಳೆದ ಎರಡು ವರ್ಷಗಳ ಹಿಂದೆ ಮುಸ್ಲಿಮರ ವಿರುದ್ದ ವೀರಾವೇಶದ ಭಾಷಣ ಮಾಡಿದ್ದ ರೆಡ್ಡಿ ವಿಡಿಯೋ ಮುನ್ನೆಲೆಗೆ ಬಂದಿರೋದು ಚುನಾವಣೆಗೆ ಪರಿಣಾಮ ಬೀರಲಿದೆ ಎನ್ನಲಾಗ್ತಿದೆ. ಒಟ್ಟಾರೆ ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡ್ತಾರೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.