ನಾರಾಯಣ ಗೌಡ ಮಾತು ಕೇಳಿದ್ರೆ ಹೇಸಿಗೆಯಾಗುತ್ತೆ: ದೇವೇಗೌಡ
ಕೆ. ಆರ್. ಪೇಟೆ ಚುನಾವಣಾ ಕಣದಲ್ಲಿ ಮಾಜಿ ಪ್ರಧಾನಿ, ಜಡಿಎಸ್ ವರಿಷ್ಠ ದೇವೇಗೌಡ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ದೇವೇಗೌಡರು ಏನು ಹೇಳಿದ್ದಾರೆ..? ತಿಳಿಯಲು ಈ ಸುದ್ದಿ ಓದಿ.
ಮಂಡ್ಯ(ನ.29): ಕೆ. ಆರ್. ಪೇಟೆ ಚುನಾವಣಾ ಕಣದಲ್ಲಿ ಮಾಜಿ ಪ್ರಧಾನಿ, ಜಡಿಎಸ್ ವರಿಷ್ಠ ದೇವೇಗೌಡ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಉಪಚುನಾವಣೆ ಸಮೀಪಿಸಿದ್ದು, ಕೆ. ಆರ್. ಪೇಟೆ ಜೆಡಿಎಸ್ ಅಭ್ಯರ್ಥಿ ಬಿ. ಎಲ್. ದೇವರಾಜು ಪರ ಮಾಜಿ ಪ್ರಧಾನಿ ದೇವೇಗೌಡರು ಪ್ರಚಾರ ನಡೆಸಿದ್ದಾರೆ. ಕೆ. ಆರ್. ಪೇಟೆ ಉಪ ಚುನಾವಣೆ ಹಿನ್ನಲೆ ಮಾಜಿ ಪ್ರಧಾನಿ ಫೀಲ್ಡ್‌ಗೆ ಇಳಿದಿದ್ದು ಆನಗೊಳ ಗ್ರಾಮದಲ್ಲಿ ಪ್ರಚಾರ ನಡೆಸಿದ್ದಾರೆ.
ಅಕ್ಕ-ತಂಗಿಯರಿಗೆ ನೋವಾಗಿದ್ರೆ ಕ್ಷಮೆ ಕೇಳ್ತೀನಿ: ಕಾಮಾಟಿಪುರ ಹೇಳಿಕೆಗೆ ತಮ್ಮಣ್ಣ ಸ್ಪಷ್ಟನೆ
ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮಾತುಗಳನ್ನ ಕೇಳಿದ್ರೆ ಹೇಸಿಗೆಯಾಗುತ್ತೆ. ನನಗೆ ಆತನ ಹೆಸರೇಳಲು ಇಷ್ಟವಿಲ್ಲ. ಹಲವು ಜನ ಬಂದ್ರು ಹಲವರು ಹೋದ್ರು. ಈ ಗೆಲುವಿಂದ ದೇವೇಗೌಡರು ಮುಂದಿನ ಹತ್ತು ವರ್ಷ ಹೋರಾಟ ಮಾಡುವುದಕ್ಕೆ ಶಕ್ತಿ ಸಿಗಬೇಕು ಎಂದು ಹೇಳಿದ್ದಾರೆ.
ಇದು ನನ್ನ ಕೊನೆ ಚುನಾವಣೆಯಲ್ಲ. ನಾನು ಮಲಗೊ ವ್ಯಕ್ತಿಯಲ್ಲ, ಜೀವನದಲ್ಲಿ ಹೋರಾಟ ಮಾಡ್ತೀನಿ. ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷವನ್ನು ತುಳಿಯಲು ಸಾಧ್ಯವಿಲ್ಲ. ನಾನು ತುಮಕೂರಿನಲ್ಲಿ ಸೋತಿರುವುದನ್ನ ಇಲ್ಲಿ ಗೆಲ್ಲುವ ಮೂಲಕ ಮರೆಯುವಂತೆ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
'ಅಳುವಂತಹದ್ದು ಏನೂ ಆಗಿಲ್ಲ' ಎಚ್‌ಡಿಕೆಗೆ ಚಲುವರಾಯಸ್ವಾಮಿ ಟಾಂಗ್