ಮಂಡ್ಯ(ನ.29): ಕಾಮಾಟಿಪುರ ಹೇಳಿಕೆಯಿಂದ ವಿವಾದಕ್ಕೆ ಗುರಿಯಾಗಿದ್ದ ಡಿ. ಸಿ. ತಮ್ಮಣ್ಣ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಕೆ. ಆರ್. ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಗೆದ್ದರೆ ಕ್ಷೇತ್ರವನ್ನು ಕಾಮಾಟಿಪುರ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಗ್ಗೆ ಕೆ.ಆರ್. ಪೇಟೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ ತಮ್ಮಣ್ಣ ಕೆ.ಆರ್.ಪೇಟೆ ಅಭಿವೃದ್ಧಿಯಾಗಿಲ್ಲ ಅನ್ನೋ ಅರ್ಥದಲ್ಲಿ ಈ ರೀತಿ ಹೇಳಿದೆ. ಅಕ್ಕ-ತಂಗಿಯರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎನ್ನುವ ಮೂಲಕ ನಾರಾಯಣಗೌಡ ಗೆದ್ದರೆ ಕಾಮಾಟಿಪುರ ಮಾಡ್ತಾರೆ ಎಂಬ  ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಪ್ರತಿಷ್ಠೆಯ ಕಣವಾದ ಚಿಕ್ಕಬಳ್ಳಾಪುರ ಉಪಚುನಾವಣೆ

ಕೆ.ಆರ್.ಪೇಟೆಯಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ ನೀಡಿದ್ದು, ನಾನು ಬಾಂಬೆ ನೋಡಿರೋದೆ ನಾಲ್ಕು ಬಾರಿ. ಕಾಮಾಟಿಪುರ ನಮಗೆ ಗೊತ್ತಿಲ್ಲ. ಕೇಳಿದ್ದೀವಿ ಅಷ್ಟೇ ಎಂದಿದ್ದಾರೆ.

PWD ಸಚಿವರು ಕೆ.ಆರ್.ಪೇಟೆಗೆ 120 ಕೋಟಿ ಅನುದಾನ ನೀಡಿದ್ದಾರೆ. ನಾನು ಪ್ರಭಾವಿ ಸಚಿವನಾಗಿದ್ರೂ ನನ್ನ ಕ್ಷೇತ್ರಕ್ಕೆ 75 ಕೋಟಿ ಕೊಟ್ಟಿದ್ರು. ಆ ಹಣದಲ್ಲೇ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಆದ್ರೆ ಸಿಎಂ ಯಡಿಯೂರಪ್ಪ ಅವ್ರು ಹುಟ್ಟೂರು ಬೂಕನಕೆರೆಗೆ ಹೋಗುವ ರಸ್ತೆಯನ್ನೇ ಅಭಿವೃದ್ಧಿ ಮಾಡಿಲ್ಲ. ಹಾಗಾದರೆ 120 ಕೋಟಿ ತಂದು ಏನು ಮಾಡ್ತಿದ್ದಾರೆ..? ಇನ್ನು ಕೆ.ಆರ್.ಪೇಟೆಯನ್ನ ಬಾಂಬೆ ಮಾಡ್ತಾರಾ ಎಂಬ ಅರ್ಥದಲ್ಲಿ ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಮಾಟಿಪುರ ಹೇಳಿಕೆ: ಡಿಸಿ ತಮ್ಮಣ್ಣ ವಿರುದ್ಧ ಮುಂಬೈ ಸೇರಿ ಸ್ಥಳೀಯ ಮತದಾರರ ಆಕ್ರೋಶ

ಬೇರೆ ಅರ್ಥದಲ್ಲಿ ಹೇಳಲಿಲ್ಲ. ನಮ್ಮ ಕನ್ನಡಿಗರ ಬಗ್ಗೆ ಗೌರವವಿದೆ. ಅದರಲ್ಲೂ ಕೆ.ಆರ್.ಪೇಟೆ ಜನರ ಬಗ್ಗೆ ಅತೀವವಾದ ಗೌರವ ಇದೆ. ಇಲ್ಲಿನ ಜನ ಸ್ವಾಭಿಮಾನಿಗಳು. ನನ್ನ ಹೇಳಿಕೆಯನ್ನು ಬೇರೆ ರೀತಿ ತೆಗೆದುಕೊಂಡು ಹೋಗಲಾಗುತ್ತಿದೆ. ಅಕ್ಕ-ತಂಗಿಯರಿಗೆ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.