ಮಂಡ್ಯ(ಮಾ.06): ಯಡಿಯೂರಪ್ಪ ಬಜೆಟ್ ಮಂಡನೆ ಬಗ್ಗೆ ಮಾತ‌ನಾಡಲು ಅವರಿದ್ದಾರೆ ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್‌. ಡಿ. ದೇವೇಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಬಜೆಟ್ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ಮಂಡ್ಯ ತಾಲೂಕಿನ ವಿಸಿ ಫಾರ್ಮ್ ಹೆಲಿಪ್ಯಾಡ್ ನಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮಾತನಾಡಿ, ಯಡಿಯೂರಪ್ಪ ಬಜೆಟ್ ಮಂಡನೆ ಬಗ್ಗೆ ಮಾತ‌ನಾಡಲು ಅವರಿದ್ದಾರೆ ನನಗೂ ಅದಕ್ಕೂ ಸಂಬಂಧವಿಲ್ಲ. ಕುಮಾರಸ್ವಾಮಿ ಒಂದು ಬಜೆಟ್ ಮಂಡಿಸಿದ್ದಾರೆ.

'ರಾಮುಲು ಮಗಳ ಮದ್ವೆ ನೋಡಿ, ಹಾಗೇ ಮಾಡ್ಬೇಕು ಅನಿಸ್ತು ಎಂದ ಶಾಸಕ'

ಸಿದ್ದರಾಮಯ್ಯ 13 ಬಜೆಟ್ ಮಂಡಿಸಿದ್ದಾರೆ. ಸಿದ್ದು ಬಿಟ್ರೆ ಯಡಿಯೂರಪ್ಪ ಅವರೇ ಹೆಚ್ಚು ಬಜೆಟ್ ಮಂಡಿಸಿದ್ದಾರೆ. ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತೆ. ಸಿದ್ದರಾಮಯ್ಯ ಅಧಿಕೃತ ವಿರೋಧ ಪಕ್ಷದ ನಾಯಕರಿದ್ದಾರೆ‌ ಅವರು ಬಜೆಟ್ ಬಗ್ಗೆ ಮಾತನಾಡ್ತಾರೆ. ಸಿದ್ದರಾಮಯ್ಯ ಅನುಭವಸ್ಥರಿದ್ದಾರೆ ಅವರು ಮಾತನಾಡ್ತಾರೆ ಎಂದಿದ್ದಾರೆ.

ಬಜೆಟ್ ನಲ್ಲಿ ಮಂಡ್ಯ ಜಿಲ್ಲೆಗೆ ಅನುದಾನ ಕೊಡದಿರೊ ಬಗೆಗೆ ಮಾತನಾಡಿ, ಮಾತನಾಡಲು ನಾನೇನು ವಿಧಾನಸಭೆಲಿದ್ದೀನಾ.? ಆ ಬಗೆಗೆ ಡಿಟೇಲ್ ಆಗಿ ಸ್ಟಡಿ ಮಾಡಿ ಮಾತನಾಡಲು ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಪುಟ್ಟರಾಜು ಅವರಿಗೆ ಅವಕಾಶ ಇದೆ. ಇದೇ ತಿಂಗಳ 30 ರ ವರೆಗೂ ಅಧಿವೇಶನದ ಸಭೆ ನಡೆಯಲಿದೆ ಅವರು ಮಾತಾಡ್ತಾರೆ. ಜಿಲ್ಲೆಯಲ್ಲಿ ಕಾರ್ಯಕರ್ತರಿಗೆ ತೊಂದರೆ ಎದುರಾದ್ರೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.