Asianet Suvarna News Asianet Suvarna News

ನನಗೆ ನಿಮ್ಮ ಓಟ್‌ ಬೇಡ, ಯಾರಿಗಾದ್ರೂ ಹಾಕೊಳ್ಳಿ..! : ರವೀಂದ್ರ ಶ್ರೀಕಂಠಯ್ಯ ದರ್ಪ

ಸಮಸ್ಯೆ ಹೇಳಿಕೊಂಡ ಮತದಾರರ ವಿರುದ್ಧವೇ ಆಕ್ರೋಶ ಗೊಂಡ ಶ್ರೀ ರಂಗಪಟ್ಟಣ ಶಾಸಕ ರವೀಂದ್ರ ಶ್ರೀ ಕಂಠಯ್ಯ ನಮಗೆ ನಿಮ್ಮ ಓಟ್‌ ಬೇಡ, ಯಾರಿಗಾದರೂ ಹಾಕಿಕೊಳ್ಳಿ ಎಂದು ದರ್ಪ ಪ್ರದರ್ಶಿಸಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ತಳಗವಾಡಿಯಲ್ಲಿ ನಡೆದಿದೆ.

I don't want your vote, give it to someone  Ravindra Srikanthaiah  rude on Youth snr
Author
First Published Dec 7, 2022, 6:33 AM IST

 ಮಂಡ್ಯ (ಡಿ. 07):  ಸಮಸ್ಯೆ ಹೇಳಿಕೊಂಡ ಮತದಾರರ ವಿರುದ್ಧವೇ ಆಕ್ರೋಶ ಗೊಂಡ ಶ್ರೀ ರಂಗಪಟ್ಟಣ ಶಾಸಕ ರವೀಂದ್ರ ಶ್ರೀ ಕಂಠಯ್ಯ ನಮಗೆ ನಿಮ್ಮ ಓಟ್‌ ಬೇಡ, ಯಾರಿಗಾದರೂ ಹಾಕಿಕೊಳ್ಳಿ ಎಂದು ದರ್ಪ ಪ್ರದರ್ಶಿಸಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ತಳಗವಾಡಿಯಲ್ಲಿ ನಡೆದಿದೆ.

ತಡವಾಡಿ ಗ್ರಾಮದ ರಸ್ತೆ (ROad)  ಅಭಿವೃದ್ಧಿಗೆ ಗುದ್ದಲಿ ಪೂಜೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗಮಿಸಿದ್ದ ವೇಳೆ, ಗ್ರಾಮದ (Village)  ಮನು ಎಂಬಾತ ಚುನಾವಣೆ ಮುಗಿದು 4 ವರ್ಷ 7 ತಿಂಗಳ ಬಳಿಕ ನಮ್ಮೂರಿಗೆ ಬಂದಿದ್ದೀರಿ. ನಮ್ಮೂರಲ್ಲಿ 11 ಕೆವಿ ಸಾಮರ್ಥ್ಯದ ವಿದ್ಯುತ್‌ ಲೈನ್‌ ಹಾದು ಹೋಗಿದೆ. ಇದರಿಂದ ಗ್ರಾಮದಲ್ಲಿ ಸಾವು-ನೋವು ಸಂಭವಿಸುತ್ತಿದೆ. ಅಧಿಕಾರಿಗಳಿಗೆ ಹೇಳಿ ಲೈನ್‌ ಸ್ಥಳಾಂತರಿಸುವ ಮೂಲಕ ಮುಂದೆ ಅನಾಹುತ ಆಗುವುದನ್ನು ತಪ್ಪಿಸಿ ಎಂದು ಮನವಿ ಮಾಡಿದರು.

ಈ ಮಾತನ್ನು ಕೇಳಿದ ಕೂಡಲೇ ಆಕ್ರೋಶಗೊಂಡ ಶಾಸಕ ರವೀಂದ್ರ ಶ್ರೀಕಂಠಯ್ಯ, ಏಯ್‌, ಏನಪ್ಪ ನಿಂದು, ಹೋಗು, ಸುಮ್ನೆ ನಡಿ. ನಿನ್ನ ಗೂಂಡಾಗಿರಿ ನನ್ನತ್ರ ನಡೆಯೋಲ್ಲ. ನಿನ್ನ ಓಟ್‌ ನನಗೇನೂ ಬೇಡ. ಬೇರೆ ಯಾರಿಗಾದ್ರೂ ಓಟ್‌ ಹಾಕೊಂಡ್‌ ಹೋಗು ಎಂದು ಆವಾಜ್‌ ಹಾಕಿದ್ದಾರೆ.

ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಿರಿ: ಸುರೇಶ್‌ ಕಂಠಿ

  ಮಂಡ್ಯ : ಪ್ರಜಾ ಪ್ರಭುತ್ವದ ರಕ್ಷಣೆ ಗಾಗಿ ಶೋಷಿತ ಸಮುದಾಯಗಳು ಬಿಜೆಪಿ ಸರ್ಕಾರವನ್ನು ದೇಶದಿಂದ ಕಿತ್ತೊಗೆಯುವ ಕೆಲಸ ಮಾಡದೇ ಹೋದರೆ ಮುಂದಿನ ಜನಾಂಗ ಬದುಕಲು ಕಷ್ಟವಾಗುತ್ತದೆ ಎಂದು ಜಿಲ್ಲಾ ಪರಿಶಿಷ್ಟ ಜಾತಿ ಕಾಂಗ್ರೆಸ್‌ ಅಧ್ಯಕ್ಷ ಸುರೇಶ್‌ ಕಂಠಿ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಡಾ.ಬಿ.ಆರ್‌.ಅಂಬೇಡ್ಕರ್‌ 66ನೇ ಪರಿನಿಬ್ಬಾಣ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ನಾಶ ಮಾಡುತ್ತಿರುವ ಆರ್‌ಎಸ್‌ಎಸ್‌, ಬಿಜೆಪಿ ದುರಾಡಳಿತದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒಂದರಿಂದ ಎಂಟನೇ ತರಗತಿ ವರೆಗಿನ ಬಡ ಮಕ್ಕಳ ವಿದ್ಯಾರ್ಥಿ ವೇತನ ರದ್ದು ಗೊಳಿಸಿ ಆದೇಶ ಹೊರಡಿಸಿರುವುದು ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿರೋಧಿ ಸಂವಿಧಾನ ದ್ರೋಹಿ ಕೃತ್ಯವಾಗಿದ್ದು ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ, ವರ್ಗ ಹಿಂದುಳಿದ ವರ್ಗ,ಅಲ್ಪಸಂಖ್ಯಾತ ಸಮುದಾಯಗಳು ಗಂಭೀರವಾಗಿ ಚಿಂತನೆ ಮಾಡಬೇಕು ಎಂದು

ದಲಿತ ಸಮುದಾಯ ಹಾಗೂ ರೈತಾಪಿ ವರ್ಗ ವೋಟ್‌ ಬ್ಯಾಂಕಿಂದ ನಲುಗಿ ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂಬೇಡ್ಕರ್‌ ಅವರ ಜೀವನ, ತತ್ವ ಸಿದ್ಧಾಂತಗಳನ್ನು ಪಾಲಿಸುವುದರೊಂದಿಗೆ ಮನೆ ಮನೆಗೆ ತೆರಳಿ ಶೋಷಿತ ಸಮುದಾಯಗಳನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಮಾಜಿ ಸಚಿವ ಎಂ.ಎಸ್‌. ಆತ್ಮಾನಂದ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಕಾಂಗ್ರೆಸ್‌ ಮುಖಂಡ ಡಾ. ಹೆಚ್‌.ಕೃಷ್ಣ, ಮನ್‌ಮುಲ್‌ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಮುಖಂಡರಾದ ವಿಜಯಲಕ್ಷ್ಮೇ ರಘುನಂದನ್‌, ಸುಂಡಹಳ್ಳಿ ಮಂಜುನಾಥ್‌, ಆನಂದ್‌, ಲವ, ದೀಪಕ್‌, ಚನ್ನಪ್ಪ, ಅಂಜನಾ ಶ್ರೀಕಾಂತ್‌, ಗುರುರಾಜ್‌ ಮತ್ತಿತರರಿದ್ದರು.

ನಂತರ ಗ್ರಾಮಸ್ಥರು ಶಾಸಕರು ಮತ್ತು ಯುವಕರನ್ನು ಸಮಾಧಾನಪಡಿಸಿ ನಮಗೆ ಗ್ರಾಮದ ಅಭಿವೃದ್ಧಿ ವಿಚಾರವೇ ಮುಖ್ಯ. ಈ ರೀತಿ ವಾಕ್ಸಮರ ನಡೆಸುವುದು ಸರಿಯಲ್ಲವೆಂದು ಸಮಾಧಾನಪಡಿಸಿ ಶಾಸಕರನ್ನು ಕರೆದೊಯ್ದರು.

ಕೆಲವು ದಿನಗಳ ಹಿಂದೆ ಕಾರಸವಾಡಿ ಸೇರಿದಂತೆ ಕೆಲ ಗ್ರಾಮಗಳಿಗೆ ತೆರಳಿದ್ದ ವೇಳೆಯೂ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು ಎಂಬುದಾಗಿ ತಿಳಿದುಬಂದಿದೆ.

Follow Us:
Download App:
  • android
  • ios