ನಾನು ಹೇಳಿದ್ದನ್ನೇ ಮಾಡುತ್ತೇನೆ, ಮಾಡಿದ್ದನ್ನೇ ಹೇಳುತ್ತೇನೆ: ಸಚಿವ ಮುನಿಯಪ್ಪ

ತಮ್ಮೆಲ್ಲದ ಆಶೀರ್ವಾದದಿಂದ ನಾನಿಂದು ಶಾಸಕನಾಗಿ ಆಯ್ಕೆಗೊಂಡು ಸಚಿವನಾಗಿದ್ದೇನೆ. ಕ್ಷೇತ್ರದ ಜನರ ಋುಣ ನನ್ನ ಮೇಲಿದ್ದು, ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ: ಸಚಿವ ಕೆ.ಎಚ್‌.ಮುನಿಯಪ್ಪ 
 

I do what I say I say what I do Minister KH Muniyappa grg

ದೇವನಹಳ್ಳಿ(ನ.11): ನಾನು ಹೇಳುವುದನ್ನೇ ಮಾಡುತ್ತೇನೆ, ಮಾಡಿದ್ದನ್ನೇ ಹೇಳುತ್ತೇನೆ. ತಮ್ಮೆಲ್ಲದ ಆಶೀರ್ವಾದದಿಂದ ನಾನಿಂದು ಶಾಸಕನಾಗಿ ಆಯ್ಕೆಗೊಂಡು ಸಚಿವನಾಗಿದ್ದೇನೆ. ಕ್ಷೇತ್ರದ ಜನರ ಋುಣ ನನ್ನ ಮೇಲಿದ್ದು, ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ಪುರಸಭೆಯಲ್ಲಿ ಆಯುಧ ಪೂಜೆ ಮತ್ತು ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಇಲ್ಲಿನ ಚಿಕ್ಕಕೆರೆ ಅಭಿವೃದ್ಧಿಗಾಗಿ 9.5 ಕೋಟಿ ರು., ಆಕಾಶ್‌ ಇಂಟರ್‌ ನ್ಯಾಷನಲ್‌ ಶಾಲೆಯಿಂದ ನಂದಿ ಉಪಚಾರ್‌ವರೆಗೂ ಡಬಲ್‌ ರೋಡ್‌ ಮಾಡಲು 20 ಕೋಟಿ ರು., ಪುರಸಭೆ ವ್ಯಾಪ್ತಿಯ ಎಲ್ಲ ರಸ್ತೆಗಳು ಕಾಂಕ್ರೀಟ್‌ ರಸ್ತೆ ಅಭಿವೃದ್ಧಿ 140 ಕೋಟಿ ರು., ಪಾರಿವಾಳ ಗುಟ್ಟದಲ್ಲಿ ಟ್ಯಾಂಕ್‌ ನಿರ್ಮಿಸಿ ಅಲ್ಲಿಂದ ಪಟ್ಟಣದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಒಟ್ಟಾರೆ ಪಟ್ಟಣದ ಅಭಿವೃದ್ಧಿಗಾಗಿ 220 ಕೋಟಿ ರು. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲೋದೆ ಗ್ಯಾರಂಟಿ ಇಲ್ಲ: ವೀರಪ್ಪ ಮೊಯ್ಲಿ

ಪುರಸಭಾ ಸದಸ್ಯ ಎಸ್‌. ಸಿ. ಚಂದ್ರಪ್ಪ ಮನವಿಯಂತೆ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬರಲಿರುವ ಮೆಟ್ರೋ ರೈಲು ದೇವನಹಳ್ಳಿವರೆಗೂ ವಿಸ್ತರಣೆ ಅಲ್ಲದೆ ಕಾವೇರಿ ನೀರು ಹರಿಸುವ ಬಗ್ಗೆ ಸಚಿವರು ಮಾತನಾಡಿ ಮುಖ್ಯಮಂತ್ರಿಗಳಲ್ಲಿ ಮಾತನಾಡುವ ಭರವಸೆ ನೀಡಿದರು.

ಸಮಾರಂಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷರಾದ ಸಿ.ಜಗನ್ನಾಥ್‌, ಡಾ. ಎಂ.ಮೂರ್ತಿ, ಬಾಂಬೆ ನಾರಾಯಣಸ್ವಾಮಿ ಹಾಗೂ ಎಸ್‌.ಸಿ.ಚಂದ್ರಪ್ಪ, ರತ್ನಮ್ಮ ಗಾರೆ ರವಿಕುಮಾರ್‌, ಎನ್‌,ರಘು, ಜಿ.ಎ.ರವೀಂದ್ರ, ಎ.ಚಿನ್ನಪ್ಪ, ರಾಮಚಂದ್ರಪ್ಪ ಹಾಗು ಪುರಸಭಾ ಮುಖ್ಯಾಧಿಕಾರಿ ದೊಡ್ಡಮಲವಯ್ಯ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios