ದೇವೇಗೌಡರ ಸೋಲಿಗೆ ನಾನು ಕಾರಣನಲ್ಲ: ಪರಮೇಶ್ವರ್‌

ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ತುಮಕೂರಿನಲ್ಲಿ ಅವರ ಸೋಲಿಗೆ ನಾನು ಕಾರಣನಲ್ಲ, ನನ್ನ ಕ್ಷೇತ್ರ ಅವರಿಗೆ ಮುನ್ನಡೆ ನೀಡಿದೆ. ಇಂತಹ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

I am not responsible for Deve Gowdas defeat : Parameshwar

 ಕೊರಟಗೆರೆ: ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ತುಮಕೂರಿನಲ್ಲಿ ಅವರ ಸೋಲಿಗೆ ನಾನು ಕಾರಣನಲ್ಲ, ನನ್ನ ಕ್ಷೇತ್ರ ಅವರಿಗೆ ಮುನ್ನಡೆ ನೀಡಿದೆ. ಇಂತಹ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಹಲವಾರು ಗ್ರಾಮಗಳ ಮನೆಮನೆ ಮತಯಾಚನೆಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ, ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ ಪಕ್ಷಕ್ಕೆ ಬಿಟ್ಟು ಕೊಡಲು ದೆಹಲಿ ವರಿಷ್ಠರು ತೀರ್ಮಾನಿಸಿದರು, ಪಕ್ಷದ ಅಭ್ಯರ್ಥಿಯಾನ್ನಾಗಿ ದೇವೇಗೌಡರನ್ನು ಮಾಡಿದ್ದು ಜೆಡಿಎಸ್‌ ಪಕ್ಷದವರೇ. ನಮ್ಮ ವರಿಷ್ಠರ ಆದೇಶದಂತೆ ನಾವು ಅಂದು ದೇವೇಗೌಡರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ, ಅವರಿಗೆ ಕಣ್ಣೀರು ಹಾಕಿಸಿದ್ದು ನಾನಲ್ಲ, ಯಾರು ಹಾಕಿಸಿದ್ದು ಎಂದು ದೇವೇಗೌಡರು ಸ್ಪಷ್ಟವಾಗಿ ಹೇಳಬೇಕು. ಅಂದು ತುಮಕೂರಿನಲ್ಲಿ ಜೆಡಿಎಸ್‌ ಪಕ್ಷದ ಶಾಸಕರಿದ್ದ ಕೆಲವು ಕ್ಷೇತ್ರಗಳಲ್ಲಿ ದೇವೇಗೌಡರಿಗೆ ಮುನ್ನಡೆ ಬಂದಿಲ್ಲ. ಈ ಬಗ್ಗೆ ಸಿ.ಎಂ.ಹಿಬ್ರಾಹಿಂರವರು ಮೊದಲು ಆಲೋಚನೆ ಮಾಡಿಕೊಳ್ಳಲಿ, ಕಾಂಗ್ರೆಸ್‌ನವರ ಮೇಲೆ ಆರೋಪ ಸರಿಯಿಲ್ಲ. ನಾವುಗಳು ದೇವೇಗೌಡರನ್ನು ಗೌರವದಿಂದ ನಡೆಸಿಕೊಂಡಿದ್ದೇವೆ, ಪ್ರಾಮಾಣಿಕ ಚುನಾವಣೆ ಮಾಡಿದ್ದೇವೆ, ನನ್ನ ಕ್ಷೇತ್ರದಲ್ಲಿ ಲೀಡ್‌ ಕೊಟ್ಟಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅದ್ಯಕ್ಷ ಅರಕೆರೆ ಶಂಕರ್‌, ಮುಖಂಡರಾದ ವಾಲೆ ಚಂದ್ರಯ್ಯ, ಟಿ.ಡಿ.ಪ್ರಸನ್ನಕುಮಾರ್‌, ಕೃಷ್ಞಪ್ಪ, ನವೀನ್‌, ಗೋಂದಿಹಳ್ಳಿರಂಗರಾಜು, ಜಟ್ಟಿಅಗ್ರಹಾರ ನಾಗರಾಜು, ಚಂದ್ರು, ಪುಟ್ಟಣ, ಅಖಂಡಾರಾಧ್ಯ, ವಿನಯ್‌ಕುಮಾರ್‌, ಮಂಜುನಾಥ್‌ ಸೇರೀದಂತೆ ಹಲವರು ಹಾಜರಿದ್ದರು.

ಚಿತ್ರ-ಶಾಸಕ ಡಾ.ಜಿ.ಪರಮೇಶ್ವರ ಚನ್ನರಾಯನದುರ್ಗ ಹೋಬಳಿಯಲ್ಲಿ ಮತ ಯಾಚಿಸುತ್ತಿರುವುದು.

Latest Videos
Follow Us:
Download App:
  • android
  • ios