ಬಾಗಲಕೋಟೆ: ಹೈದಾರಾಬಾದ್ ನಿಜಾಮ ಕುಟುಂಬದ ಚಿಸ್ತಿ ಅಸ್ತಂಗತ
* ಕಳೆದೊಂದು ಶತಮಾನದಿಂದ ಇಸ್ಲಾಂ ಧರ್ಮ ಪ್ರಚಾರದಲ್ಲಿ ತೊಡಗಿದ್ದ ಚಿಸ್ತಿ ಕುಟುಂಬ
* ಹೈದ್ರಾಬಾದ್‌ನಲ್ಲಿ ನಿಧನರಾದ ಚಿಸ್ತಿ
* ಬನಹಟ್ಟಿಯ ಚಿಸ್ತಿ ಅವರ ಸ್ವಂತ ದರ್ಗಾದಲ್ಲಿ ನಡೆದ ಅಂತ್ಯಕ್ರಿಯೆ
ರಬಕವಿ-ಬನಹಟ್ಟಿ(ಜೂ.11): ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಹಜರತ್ ಮೊಹಮ್ಮದ್ ನೂರುಲ್ಲಾಹ ಚಿಸ್ತಿ ಮಿರ್ಜಾಯಿ ದರ್ಗಾದ ರುವಾರಿ ಮೊಹಮ್ಮದ್ ನೂರುಲ್ಲಾ ಚಿಸ್ತಿ(75) ಇವರು ವಯೋಸಹಜದಿಂದ ಅಸ್ತಂಗತರಾದರು.
ಇವರು ಮೂಲತಃ ಹೈದರಾಬಾದ್‌ನ ನಿಜಾಮ ಕುಟುಂಬದವರಾಗಿದ್ದು, ಕಳೆದೊಂದು ಶತಮಾನದಿಂದ ಚಿಸ್ತಿ ಕುಟುಂಬವು ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರದ ಅನೇಕ ಕಡೆಗಳಲ್ಲಿ ಇಸ್ಲಾಂ ಧರ್ಮ ಪ್ರಚಾರ, ಮಸೀದಿ ಹಾಗೂ ಮದರಸಾಗಳನ್ನು ಸ್ಥಾಪಿಸುವ ಮೂಲಕ ಸಾಕಷ್ಟು ಸಹಾಯ-ಸಹಕಾರದಲ್ಲಿ ಪಾಲ್ಗೊಂಡಿದ್ದರು.
ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಪತಿ ಸಿಐಡಿ ವಶಕ್ಕೆ
ಮೃತ ಮೊಹಮ್ಮದ್ ನೂರುಲ್ಲಾ ಚಿಸ್ತಿಯವರ ಅಜ್ಜ ಮಿರ್ಜಾ ಮೊಹಮ್ಮದ್ ಬೇಗಸಾಬ್ ಶತಮಾನದ ಹಿಂದೆ ಬನಹಟ್ಟಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಪ್ರಥಮ ಬಾರಿ ಜಾಮಿಯಾ ಮಸೀದಿ ಹಾಗೂ ಮದರಸಾವನ್ನು ಸ್ಥಾಪಿಸಿದ ಗರಿಮೆಯಾಗಿತ್ತು. ಅವುಗಳನ್ನು ಇಂದಿಗೂ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಬುಧವಾರ ಹೈದ್ರಾಬಾದ್‌ನಲ್ಲಿ ನಿಧನರಾದ ಇವರನ್ನು ಬನಹಟ್ಟಿಯ ಅವರ ಸ್ವಂತ ದರ್ಗಾದಲ್ಲಿ ಅಂದೇ ತಡರಾತ್ರಿ ಅಂತ್ಯಸಂಸ್ಕಾರ ಮಾಡಲಾಗಿದೆ.