ಬೆಂಗಳೂರು [ಜ.07]:  ಪತ್ನಿಯ ಮೊಬೈಲ್‌ಗೆ ಅಶ್ಲೀಲ ಸಂದೇಶ ರವಾನೆ ಮಾಡುತ್ತಿರುವ ಬಗ್ಗೆ ಪತಿಯೊಬ್ಬರು ಠಾಣೆಗೆ ದೂರು ನೀಡಿದ್ದಾರೆ.

ಹೊಸಪಾಳ್ಯ ನಿವಾಸಿ ಸುರೇಶ್‌ ಎಂಬುವರು ಬಂಡೆಪಾಳ್ಯ ಠಾಣೆಗೆ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸುರೇಶ್‌ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದಾರೆ. ಎರಡು ವಾರಗಳಿಂದ ಪತ್ನಿ ಮೊಬೈಲ್‌ಗೆ ಯಾರೋ ಅಪರಿಚಿತ ವ್ಯಕ್ತಿ ಅಶ್ಲೀಲ ಸಂದೇಶ ಮತ್ತು ಚಿತ್ರಗಳನ್ನು ಕಳುಹಿಸಿ ಬೆದರಿಕೆವೊಡ್ಡುತ್ತಿದ್ದಾನೆ. ಅಲ್ಲದೆ, ಪತ್ನಿಯ ಮೊಬೈಲ್‌ನ್ನು ಆರೋಪಿ ಹ್ಯಾಕ್‌ ಮಾಡಿ ನನ್ನ ಮೊಬೈಲ್‌ಗೆ ವಿವಿಧ ರೀತಿಯ ಸಂದೇಶ ಕಳುಹಿಸುತ್ತಿದ್ದಾನೆ. ನಮಗೆ ತಿಳಿಯದಂತೆ ನಮ್ಮ ಫೋಟೋಗಳನ್ನು ತೆಗೆದು ನಮ್ಮ ಮೊಬೈಲ್‌ ಕಳುಹಿಸುತ್ತಿದ್ದಾನೆ ಎಂದು ಹೇಳಿದ್ದಾರೆ. 

ಬೆಂಗಳೂರಿಗರಿಗೆ ಆತಂಕ ತಂದಿಟ್ಟ ಅಂಕಿ-ಅಂಶ, ಮಸ್ಟ್ ರೀಡ್!...

ಅಲ್ಲದೇ ಪತ್ನಿಯನ್ನು ಅಪಹರಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಈ ರೀತಿ ತೊಂದರೆ ನೀಡುತ್ತಿರುವ ಆರೋಪಿಯನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ಸುರೇಶ್‌ ಅವರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.