ಹೊಸಪೇಟೆ(ಮೇ.09):  ಶೀಲ ಶಂಕಿಸಿ ಪತ್ನಿಯನ್ನ ಗಂಡನೇ ಕೊಲೆಗೈದ ಘಟನೆ ಇಲ್ಲಿನ ಟಿ.ಬಿ. ಡ್ಯಾಂನಲ್ಲಿ ಗುರುವಾರ ರಾತ್ರಿ ನಡೆದಿದ್ದು, ನಗರದ ಗ್ರಾಮೀಣ ಠಾಣೆ ಪೊಲೀಸರು ಶುಕ್ರವಾರ ಬೆಳಗ್ಗೆ ಕೊಲೆ ಆರೋಪಿಯನ್ನು ಬಂ​ಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸ್ಥಳೀಯ ನಿವಾಸಿ ಅಣ್ಣಪ್ಪ (29) ಬಂಧಿತ ಆರೋಪಿಯಾಗಿದ್ದು, ಆತನ ಪತ್ನಿ ಲಲಿತ (30) ಕೊಲೆಯಾದ ಮಹಿಳೆಯಾಗಿದ್ದಾಳೆ.

ನಗರದ ಟಿ.ಬಿ. ಡ್ಯಾಂನ ಪ್ರದೇಶದಲ್ಲಿ ಶೀಲ ಶಂಕಿಸಿ ಪತ್ನಿ ಲಲಿತಾ ಅವರಿಗೆ ಕೊಡ್ಲಿಯಿಂದ ಕುತ್ತಿಗೆ ಬಲವಾಗಿ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಲಲಿತಾ ಅವರ ರುಂಡ ಮತ್ತು ದೇಹ ಬೇರ್ಪಟ್ಟಿದ್ದು, ಲಲಿತಾ ತಂದೆ ಮಲ್ಲಿಕಾರ್ಜುನ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ಆರೋಪಿ ಅಣ್ಣಪ್ಪನನ್ನು ಬಂ​ಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ ಮಾಡಿ ಕೊರೋನಾ ಮೇಲಾಕಲು ಮುಂದಾದ ಕಿರಾತಕಿ!

ಹಿನ್ನೆಲೆ: 

ಅಣ್ಣಪ್ಪ 2006ರಲ್ಲಿ ಲಲಿತಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದು, 2019ರಲ್ಲಿ ಅನುಮಾನ ಪಟ್ಟು ಮನೆಯಿಂದ ಹೊರ ಹಾಕಿದ್ದ. ಮಕ್ಕಳನ್ನು ಮಾತನಾಡಿಸಲು ಲಲಿತಾ ಆಗಾಗ ಗಂಡನ ಮನೆಗೆ ಬರು​ತ್ತಿ​ದ್ದಳು. ಪತಿ ಪದೇ ಪದೇ ಮನೆಗೆ ಬರಬೇಡ ಎಂದು ತಾಕೀತು ಮಾಡಿದ್ದ. ಮೇ 6ರಂದು ಠಾಣೆಯಲ್ಲಿ ಅಣ್ಣಪ್ಪ ಹಾಗೂ ಲಲಿತಾ ಅವರಿಗೆ ಹಿರಿಯರು ಮತ್ತು ಪೊಲೀಸರು ಬುದ್ಧಿವಾದ ಹೇಳಿ ಕಳುಹಿಸಿದ್ದ​ರು. ಗುರು​ವಾರ ರಾತ್ರಿ ಕೊಲೆ​ಯಾ​ಗಿ​ದೆ.