ಬಾಗಲಕೋಟೆ[ಡಿ.20]: ತನ್ನ ಪತ್ನಿಯೊಂದಿಗೆ ಸಲುಗೆಯಿಂದ ಓಡಾಡುತ್ತಿದ್ದಾನೆ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಆಕೆಯ ಪತಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತಾಲೂಕಿನ ಸೀಮಿಕೇರಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಗ್ರಾಮದಲ್ಲಿ ಬಿಎಸ್ಸಿ ಪದವಿ ಓದುತ್ತಿದ್ದ ಚಂದ್ರಕಾಂತ ಹೊರಕೇರಿ (21) ಕೊಲೆಯಾದ ಯುವಕ. ಸೀಮಿಕೇರಿ ಗ್ರಾಮದ ಹಣಮಂತ ಬೆಣ್ಣೂರು ಕೊಲೆ ಮಾಡಿದ ಆರೋಪಿಯಾಗಿದ್ದು, ಈಗಾಗಲೇ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸೀಮಿಕೇರಿ ಗ್ರಾಮದ ಹಣಮಂತ ಬೆಣ್ಣೂರು ಎಂಬುವವರ ಪತ್ನಿ ಕಾವೇರಿ ಜೊತೆ ಸಲುಗೆಯಿಂದ ವರ್ತಿಸುತ್ತಿದ್ದ ಚಂದ್ರಕಾಂತ ಹೊರಕೇರಿ ಕುರಿತು ಗ್ರಾಮದಲ್ಲಿ ಸುದ್ದಿ ಹರಡಿತ್ತು. ಈ ಕುರಿತು ಇಬ್ಬರಿಗೂ ಪೋಷಕರು ಬುದ್ಧಿ ಮಾತು ಹೇಳಿದ್ದರು ಎನ್ನಲಾಗಿದೆ. ಆದರೂ ಇವರಿಬ್ಬರ ನಡುವಿನ ಸಲುಗೆ ಹಾಗೆಯೇ ಮುಂದುವರಿದಿತ್ತು ಎಂದು ಹೇಳಲಾಗುತ್ತಿದೆ.]

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಷ್ಟಾಗಿದ್ದರೂ ಹಿರಿಯರು ಅವರಿಗೆ ಪದೇ ಪದೇ ಬುದ್ಧಿಮಾತು ಹೇಳಿದರು ಸಹ ತಿದ್ದಿಕೊಳ್ಳದ ಚಂದ್ರಕಾಂತ ಹೊರಕೇರಿಗೆ ಹಣಮಂತ ಬೆಣ್ಣೂರು ಕುಟುಂಬಸ್ಥರು ಇತ್ತೀಚೆಗೆ ಹೊಡೆದಿದ್ದಾರೆ. ಇದನ್ನು ಪ್ರಶ್ನಿಸಲು ತನ್ನ ಸ್ನೇಹಿತರೊಂದಿಗೆ ಚಂದ್ರಕಾಂತ ಹಣಮಂತ ಬೆಣ್ಣೂರು ಮನೆಗೆ ತೆರಳಿದಾಗ ಚಂದ್ರಕಾಂತನಿಗೆ ಹಣಮಂತ ಕೊಡಲಿಯಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕಲಾದಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.