ಕೊಪ್ಪಳ(ಜ.23): ಅಪ್ಪನ ಜೊತೆ ಸಂಸಾರ ಮಾಡು ಎಂದು ಹೇಳುವ ಪತಿಯ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬಳು ಎಸ್ಪಿ ಕಚೇರಿಗೆ ಬಂದು ನ್ಯಾಯಕ್ಕಾಗಿ ಅಂಗಲಾಚಿದ ವಿಚಿತ್ರ ಘಟನೆಯೊಂದು ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. 

ಏನಿದು ಘಟನೆ? 

ಗೋಕುಲ್ ಎಂತಾತನೇ ಹೆಂಡತಿಗೆ ತನ್ನ ಅಪ್ಪನ ಜೊತೆ ಸಂಸಾರ ಮಾಡು ಎಂದ ಮಹಾಶಯನಾಗಿದ್ದಾನೆ. ಗೋಕುಲ್‌ಗೆ ಅವನ ತಾಯಿ ಸೀತಮ್ಮ ಧನಿ ಗೂಡಿಸಿ ಮಾವನ ಜೊತೆ ಸಂಸಾರ ಮಾಡು ಎಂದು ಪದೆ ಪದೆ ಕಿರುಕುಳ ನೀಡುತ್ತಿದ್ದರು ಎಂದು ನೊಂದ ಮಹಿಳೆ ದೂರಿದ್ದಾಳೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗಂಡ ಹಾಗೂ ಅತ್ತೆಯ ಕಿರುಕುಳದಿಂದ ಬೇಸತ್ತ ಮಹಿಳೆ ನ್ಯಾಯಕ್ಕಾಗಿ ಕೊಪ್ಪಳದ ಎಸ್ಪಿ ಕಚೇರಿಗೆ ಬಂದು ತನಗಾದ ಮಾನಸಿಕ ತೊಳಲಾಟವನ್ನು ಹೇಳಿಕೊಂಡಿದ್ದಾಳೆ. ತನಗೆ ಮಾನಸಿಕ ಕಿರುಕುಳ ನೀಡುತ್ತಿರುವ ಪತಿ ಹಾಗೂ ಪತಿ ಕುಟುಂಬದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾಳೆ. 

ನೊಂದ ಮಹಿಳೆ 2018 ರಲ್ಲಿ ಕಳಮಳಿ ತಾಂಡಾದ ಗೋಕುಲ್ ಎನ್ನುವನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆರೋಪಿ ಗೋಕುಲ್ ಈ ಮಹಿಳೆಯನ್ನ ಮದುವೆಯಾಗುವ ಮೊದಲೇ ವಿವಾಹವಾಗಿದ್ದ, ಮೊದಲನೇ ಪತಿ ಇದ್ದರೂ ಸುಳ್ಳು ಹೇಳಿ ಎರಡನೇ ವಿವಾಹವಾಗಿದ್ದ ಎಂದು ತಿಳಿದು ಬಂದಿದೆ. 

ಮದುವೆಯ ಆರಂಭದಿಂದಲೂ ಪತಿ ಗೋಕುಲ್ ಹಾಗೂ ಅವನ ಕುಟುಂಬ ಹೆಂಡತಿಗೆ ಕಿರುಕುಳ ನೀಡುತ್ತಿದ್ದರು. ಈ ಹಿಂದೆ ಗೋಕುಲ್ ತನ್ನ ಹೆಂಡತಿಯನ್ನ ಕೊಲೆ ಮಾಡಲು ಯತ್ನಿಸಿದ್ದ ಎಂದು ನೊಂದ ಯುವತಿ ಆರೋಪಿಸಿದ್ದಾಳೆ 
ನೊಂದ ಮಹಿಳೆ ಪತಿ ಹಾಗೂ ಅವನ ಕುಟುಂಬದ ವಿರುದ್ಧ ದೂರು ಕೊಡಲು ಹೋದರೆ ತಾವರಗೇರಾ ಪೊಲೀಸರು ನಿರಾಕರಿಸಿದ್ದಾರೆ. ಹೀಗಾಗಿ ತಾವರಗೇರಾ ಪೊಲೀಸರ ವಿರುದ್ಧವೂ ಕ್ರಮಕ್ಕೆ ನೊಂದ ಮಹಿಳೆ ಆಗ್ರಹಿಸಿದ್ದಾರೆ.