ಬಾಗಲಕೋಟೆ (ಡಿ.10): ತಡರಾತ್ರಿಯಲ್ಲಿ ಪತಿಯಿಂದಲೇ ಪತ್ನಿಯ ಕೊಲೆ ನಡೆದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. 

ಬಾಗಲಕೋಟೆ ಜಿಲ್ಲೆಯ ನವನಗರದ ವಾಂಬೆ ಕಾಲೋನಿಯಲ್ಲಿ ಘಟನೆ ನಡೆದಿದ್ದು, ಕುಡಿದು ಬಂದ ಪತಿ, ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. 

ಪತ್ನಿ ರಮೀಜಾ ಮಲಗಿದ್ದ ವೇಳೆ ಮನೆಗೆ ಬಂದ ಪತಿಯು ಪತ್ನಿಯನ್ನು ಕೊಂದು ಓಡಿ ಹೋಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಾರಿಯಾದ ಪತಿಯ ಶೋಧಕ್ಕೆ ಇಳಿದಿದ್ದಾರೆ. 

ಮದುವೆ ಆಗದೆ ಪ್ರೇಮಿಯಿಂದ ಮಗು ಪಡೆದ ಪದವೀಧರೆ : ಮೊಮ್ಮಗು ಮಾರಿದ ಅಜ್ಜಿ!..

ಪತಿ - ಪತ್ನಿ ನಡುವಿನ ಹಲಹವೇ ಈ ಕೊಲೆಗೆ ಕಾರಣ ಇರಬಹುದೆಂದು ಶಂಕಿಸಾಲಗಿದೆ. 

ಈ ಸಂಬಂಧ ಬಾಗಲಕೋಟೆಯ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.