ಕುಡಿದು ಬಂದು ಅಮಲಿನಲ್ಲಿ ಪತ್ನಿಯ ಕೈಯನ್ನೇ ಕತ್ತರಿಸಿ ಹಾಕಿದ್ದಾನೆ ಗಂಡ. ಈ ದುಷ್ಕೃತ್ಯ ಮಾಡಿ ಪೊಲೀಸರ ವಶದಲ್ಲಿದ್ದಾನೆ.

ಕೋಲಾರ (ಸೆ.08): ಕುಡಿದ ಅಮಲಿನಲ್ಲಿ ಗಂಡನೇ ಹೆಂತಿ ಕೈ ಕತ್ತರಿಸಿದ ಘಟನೆ ಕೋಲಾರದಲ್ಲಿ ನಡೆದಿದೆ. 

ಕೋಲಾರ ಜಿಲ್ಲೆ ಬಂಗಾರ ಪೇಟೆ ತಾಲೂಕಿನ ಕನುಮನಹಳ್ಳಿಯಲ್ಲಿ ಘಟನೆ ನಡೆದಿದೆ. 

ಕುಡಿದು ಬಂದ ಭೀಮರಾವ್ ಪತ್ನಿ ಶಾಂತಾ ಬಾಯಿ (28) ಕೈ ಕತ್ತರಿಸಿದ್ದಾನೆ. ಲಾಕ್ ಡೌನ್ ಹಿನ್ನೆಲೆ ಗಂಡನ ಊರಾದ ಕನುಮನಹಳ್ಳಿಗೆ ಹಿಂದೂಪುರದಿಂದ ಬಂದಿದ್ದು, ತಡ ರಾತ್ರಿ ಕಂಟ ಪೂರ್ತಿ ಕುಡಿದು ಕಣ್ಣಿಗೆ ಕಾರದ ಪುಡಿ ಎರಚಿ ಕೃತ್ಯ ಎಸಗಿದ್ದಾನೆ. 

ಕೇರಳ: ವೈದ್ಯಕೀಯ ಸಿಬ್ಬಂದಿಯಿಂದ ನರ್ಸ್‌ ಮೇಲೆ ಅತ್ಯಾಚಾರ

ಕುಡಿದ ಅಮಲಿನಲ್ಲಿ ಕೈ ಕತ್ತಿಸಿರುವ ಭೀಮಾರಾವ್ ನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಥಳಕ್ಕೆ ಕಾಮಸಮುದ್ರ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.