ಉಡುಪಿ(ಡಿ.31): ತಾಲೂಕಿನ ಬೊಮ್ಮರಬೆಟ್ಟು ಗ್ರಾಮದ ಪ್ರಗತಿಪರ ರೈತ ಮುಂಡುಜೆ ಸುರೇಶ್‌ ನಾಯಕ್‌ ಅವರು ಪುನಃ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮಾತ್ರವಲ್ಲ ಈ ಬಾರಿ ಅವರ ಪತ್ನಿ ಪ್ರೇಮ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಜಯ ಗಳಿಸಿದ್ದಾರೆ.

ಸುರೇಶ್‌ ನಾಯಕ್‌ ಅವರು ಬೊಮ್ಮರಬೆಟ್ಟು 2ನೇ ವಾರ್ಡಿನಲ್ಲಿ ಸ್ಪರ್ಧಿಸಿ 359 ಮತಗಳನ್ನು ಪಡೆದರೆ, ಪ್ರೇಮಾ ಅವರು 3ನೇ ವಾರ್ಡಿನಲ್ಲಿ ಸ್ಪರ್ಧಿಸಿ 526 ಮಗಳಿಂದ ಭರ್ಜರಿಯಾಗಿ ವಿಜಯಿಯಾಗಿದ್ದಾರೆ.

ಬ್ರಿಟನ್‌ನಿಂದ ಬಂದು‌ ನಾಪತ್ತೆಯಾಗಿದ್ದ 202 ಮಂದಿಯೂ ಪತ್ತೆ

ಪಂಚಾಯತ್ ಚುನಾವಣೆಯಲ್ಲಿ ಹಲವು ವಿಶೇಷಗಳು ನಡೆದಿದ್ದು, ಉಡುಪಿಯಲ್ಲಿ ದಂಪತಿ ಗೆಲುವು ಸುದ್ದಿಯಾಗಿದೆ. ಪತಿ ಪತ್ನಿ ಸ್ಪರ್ಧಿಸಿ ಇಬ್ಬರೂ ಗೆದ್ದಿರುವುದು ಸದ್ಯ ಎಲ್ಲೆಡೆ ವೈರಲ್ ಆಗಿದೆ.