Asianet Suvarna News Asianet Suvarna News

ಬೇಕಿದ್ರೆ ನೀನೇ ಇನ್ನೂ ಮೂರ್ ಹಾಕುಸ್ಕೊ : ಅಧಿಕಾರಿಗಳ ಮೇಲೆ ತಿರುಗಿ ಬಿದ್ದ ಹಾಡಿ ಜನ

ಮೈಸೂರು ಜಿಲ್ಲೆ  ಹುಣಸೂರಿನ ಹಾಡಿಯಲ್ಲಿ ಜನರು ಕೊರೋನಾ ಲಸಿಕೆ ಪಡೆದುಕೊಳ್ಳಲು ನಿರಾಕರಿಸಿದ್ದಾರೆ. ಲಸಿಕೆ ನೀಡಲು ಹೋದ ಅಧಿಕಾರಿಗಳ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. 

Hunsur Tribes opposed to Take Covid Vaccine snr
Author
Bengaluru, First Published Apr 18, 2021, 1:54 PM IST

ಮೈಸೂರು (ಏ.18):  ಬೇಕಿದ್ರೆ ನೀನೇ ಇನ್ನೂ ಮೂರ್ ಹಾಕುಸ್ಕೊ, ಏನೇ ಹೇಳಿದ್ರು ನಾನು ಕೊರೋನಾ ಲಸಿಕೆ ಹಾಕಿಸಿಕೊಳ್ಳಲ್ಲ ಹೀಗೆಂದು ಹುಣಸೂರಿನ ಹಾಡಿಯ ಗಿರಿಜನರು ಪಟ್ಟು ಹಿಡಿದಿದ್ದಾರೆ. 

ಕೊರೋನಾ ಮಹಾಮಾರಿ ಎಲ್ಲೆಡೆ ಮಿತಿ ಮೀರಿದ್ದು, ಸಾವಿನ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಲಸಿಕೆ ಜಾಗೃತಿ ಮೂಡಿಸಲು ಇಂದು ಮೈಸೂರು ಜಿಲ್ಲೆ ಹುಣಸೂರಿನ ಗಿರಿಜನ ಹಾಡಿಗೆ ತೆರಳಿದ್ದ ತಾಲೂಕು ಆಡಳಿತಾಧಿಕಾರಿ ವಿರುದ್ಧವೇ ಜನರು ತಿರುಗಿ ಬಿದ್ದಿದ್ದಾರೆ.

ಕೊರೋನಾ 2ನೇ ಅಲೆ: ಮನೆಗೇ ಹೋಗಿ ಕೋವಿಡ್‌ ಟೆಸ್ಟ್‌..! ..

ಕರೋನಾ ಲಸಿಕೆ ಪಡೆಯಲು ಗಿರಿಜನರ ಹಾಡಿಯ ಮಂದಿ ಹಿಂದೇಟು ಹಾಕುತ್ತಿದ್ದು, ಮನವೊಲಿಸಲು ಬಂದ ಅಧಿಕಾರಿಯ ಮೇಲೆ ಮುಗಿಬಿದ್ದಿದ್ದಾರೆ.  ಹಾಡಿಯ ಮನೆಮನೆಗೆ ಭೇಟಿ ನೀಡಿ  ಅಧಿಕಾರಿಗಳು ಮನ ಒಲಿಸಲು ಮುಂದಾದರೂ  ನಿವಾಸಿಗಳು ಕ್ಯಾರೆ ಎನ್ನುತ್ತಿಲ್ಲ. 

ಕಳೆದ ಮೂರು ದಿನಗಳಿಂದ ತಹಸಿಲ್ದಾರ್ ಬಸವರಾಜ್, ಇ ಓ ಗಿರೀಶ್, ಜಿಲ್ಲಾ ನೋಡಲ್  ಅಧಿಕಾರಿ ಡಾ. ಮಂಜು ಪ್ರಸಾದ್ ಸೇರಿ ಹಲವರು ಹಾಡಿಗಳಲ್ಲಿ ಅಲೆದಾಡಿದರೂ ಇಲ್ಲಿನ ಜನರು ಮಾತ್ರ ಲಸಿಕೆ ಪಡೆಯಲು ಒಪ್ಪುತ್ತಿಲ್ಲ.  ಕೊರೋನಾ ಬಂದಿರೋದು ಸಿಟಿ ಜನರಿಂದ. ನಮಗೆ ಕೊರೋನಾ ಗಿರೋನಾ ಬಂದಿಲ್ಲ. ನೀನೇ ಬೇಕಿದ್ದರೆ  ಚುಚ್ಚಿಸಿಕೋ ಎಂದು ಅಧಿಕಾರಿಗಳ ಮೇಲೆ ಮುಗಿಬಿದ್ದಿದ್ದಾರೆ. 

ಶೇಕಡವಾರು ಕೊರೋನಾ ಸೋಂಕು: ನಾಸಿಕ್‌ ನಂ.1, ಬೆಂಗಳೂರು ನಂ.6! .
 
ಈಗಾಗಲೇ ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ.  ಸೂಕ್ತ ಆಸ್ಪತ್ರೆ ಸಿಗದೇ ಪರದಾಟ ಮುಮದುವರಿದಿದೆ. ಈ ನಿಟ್ಟಿನಲ್ಲಿ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಹಾಡಿ ಜನರು ಮಾತ್ರ ಇದಕ್ಕೊಪ್ಪುತ್ತಿಲ್ಲ.

Follow Us:
Download App:
  • android
  • ios